ಬೆಳಗಾವಿ: ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಸವದತ್ತಿ ಬಿಜೆಪಿ ಶಾಸಕ ಆನಂದ ಮಾಮನಿ ನಿರಾಸೆ ಅನುಭವಿಸುವುದು ಬಹುತೇಕ ಖಚಿತವಾದಂತಿದೆ. ಸಿಎಂ ಕಚೇರಿಯಿಂದ ಯಾವುದೇ ಫೋನ್ ಕರೆ ಬಾರದ ಕಾರಣ ಈಗಿರುವ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಸಚಿವ ಸ್ಥಾನ ಸಿಗದಿದ್ರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ. ಖಾಸಗಿ ಕಾರಿನಲ್ಲೇ ಕ್ಷೇತ್ರಕ್ಕೆ ತೆರಳಿ ಜನಸೇವೆ ಮಾಡುತ್ತೇನೆ ಎನ್ನುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮೂರು ಸಲ ಶಾಸಕರಾಗಿರುವ ಮಾಮನಿ ಈ ಸಲದ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ಬಿಜೆಪಿ ನಾಯಕರು ನಿರಾಶೆ ಮೂಡಿಸಿದ್ದಾರೆ. ಸಚಿವ ಸ್ಥಾನ ನೀಡದಿದ್ದರೆ ಡೆಪ್ಯುಟಿ ಸ್ಪೀಕರ್ ಸ್ಥಾನವೂ ನನಗೆ ಬೇಡ ಎಂದು ಬಂಡೆದಿದ್ದಾರೆ. ಈ ಬಂಡಾಯಕ್ಕೆ ಸಿಎಂ ಬೊಮ್ಮಾಯಿ ಯಾವ ಮುಲಾಮು ಹಚ್ಚಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಇಂದು ಬೆಳಗ್ಗೆ ಶುಭ ಸುದ್ದಿ, ಮಧ್ಯಾಹ್ನ ಅಥವಾ ಸಂಜೆ ನೂತನ ಸಚಿವರ ಪ್ರಮಾಣವಚನ: ಸಿಎಂ