ಬೆಳಗಾವಿ : ಗ್ರಾಪಂ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ನಾನು ದೆಹಲಿಯಿಂದ ಬೆಳಗಾವಿಗೆ ಬಂದಿರುವೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಈ ಅಭೂತಪೂರ್ವ ಗೆಲುವಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಓದಿ: ಕರ್ನಾಟಕದ ಪ್ರಗತಿ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡುವ ಮೊದಲು, ಬೆಳವಾಡಿ ಮಲ್ಲಮ್ಮರನ್ನ ಸ್ಮರಿಸಿ, ಮಲ್ಲಮ್ಮರ ಸಾಹಸ ಕೊಂಡಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮರನ್ನ ಮರೆಯೋಕೆ ಸಾಧ್ಯವಿಲ್ಲ ಎಂದು ಬೆಳಗಾವಿ ಜನತೆಯನ್ನುದ್ದೇಶಿಸಿ ಮಾತನಾಡಿದರು.
ನಮ್ಮ ಮಿತ್ರ ಸುರೇಶ ಅಂಗಡಿಯರನ್ನ ಮರೆಯೋಕೆ ಆಗುತ್ತಿಲ್ಲ, ಅವರು ಮುಖವನ್ನ ಮರೆಯೋಕೆ ಆಗುತ್ತಿಲ್ಲ. ಅವರ ಮನೆಗೆ ಹೋಗಿ ಸ್ವಾಂತನ ಹೇಳಿ ಬಂದಿದ್ದೇವೆ ಎಂದು ಹೇಳಿದರು.
ಮುಂಬೈ ಕರ್ನಾಟಕ ಕನ್ನಡಿಗರು, ಮರಾಠಿಗರ ಬಾಂಧವ್ಯ ಭಾರತದ ಏಕತೆ ತೋರಿಸುತ್ತದೆ. ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿಎಸ್ವೈ ಶ್ರಮ ಒಗ್ಗಟ್ಟಿನಿಂದ ಗ್ರಾಪಂ ಚುನಾವಣೆಯಲ್ಲಿ ಶೇ.90%ರಷ್ಟು ಗ್ರಾಪಂಗಳನ್ನ ಗೆದ್ದಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ನೀವೂ ಮತಗಳಿಂದ ನಮ್ಮ ಜೋಳಿಗೆ ತುಂಬಿದ್ದೀರಿ ಎಂದರು.
ಓದಿ: ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ; ಯಡಿಯೂರಪ್ಪ
70 ವರ್ಷಗಳಿಂದ ಜೀವಂತವಾಗಿದ್ದ ಸಮಸ್ಯೆಗಳನ್ನ ಯಾರೂ ಮುಟ್ಟಿರಲಿಲ್ಲ. ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಸಮಸ್ಯೆ ಬಗೆಹರಿಸಿರಲಿಲ್ಲ. ಕಾಶ್ಮೀರ ಈಗ ಭಾರತದ ಅಂಗವಾಗಿದೆ. ಕಾಶ್ಮೀರವನ್ನ ನೆಹರು, ಮನಮೋಹನ ಸಿಂಗ್ ತನಕ ಯಾರೂ ಮುಟ್ಟುವ ಪ್ರಯತ್ನ ಮಾಡಿರಲಿಲ್ಲ ಎಂದರು.
2014ರ ತನಕ ದೇಶದಲ್ಲಿ ಭ್ರಷ್ಟಾಚಾರ, ದೇಶದ ಸುರಕ್ಷತೆ ಏನಾಗಿತ್ತು ಎಂದು ನಿಮ್ಮಗೆ ತಿಳಿದಿದೆ. 2014ರಿಂದ 2019ರವರೆಗೆ ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸಿತು. ಅವರಿಗೆ ನೆನಪಿರಲಿಲ್ಲ, ಕಾಂಗ್ರೆಸ್ ಸರ್ಕಾರ ಇದೆ ಎಂದು ಭಾವಿಸಿದ್ದರು. ಆದರೆ, ನಾವೂ ಪಾಕಿಸ್ತಾನದ ಮನೆಗಳಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರತ್ಯುತ್ತರ ನೀಡಿದ್ದೇವೆ. ಮನೆ ಮನೆಗಳಿಗೆ ವಿದ್ಯುತ್, ಸೂರು ಕೊಡುವ ಯೋಜನೆಯನ್ನ ಮೋದಿ ಸರ್ಕಾರ ಮಾಡಿದೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಬಡವರಿಗೆ ಗ್ಯಾಸ್, ಮನೆಗೆ ವಿದ್ಯುತ್ ಯಾಕೆ ಸಿಗಲಿಲ್ಲ. ಕಾಂಗ್ರೆಸ್‌ಗೆ ಗರೀಬ್ ಹಟಾವೋ ಬೇಕಿರಲಿಲ್ಲ. ಅವರಿಗೆ ಗರೀಬ್ ರನ್ನ ಹಟಾವೋ ಮಾಡಬೇಕಾಗಿತ್ತು. ಆತ್ಮನಿರ್ಭರ ಯೋಜನೆ ಮೂಲಕ ಮೋದಿಯವರು ಸ್ವದೇಶಿ ವಸ್ತುಗಳಿಗೆ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗೂ ಬ್ರಾಂಡ್ ಬ್ಯಾಂಡ್ ಸೇವೆ ಒದಗಲಿದೆ ಎಂದರು.
ಮೋದಿಯವರು ಸರ್ಮರ್ಥವಾಗಿ ಕೊರೊನಾ ನಿಭಾಯಿಸಿದ್ದು, ವ್ಯಾಕ್ಸಿನ್ ಬಗ್ಗೆಯೂ ವಿರೋಧ ಪಕ್ಷದವರು ವಿರೋಧ ಮಾಡ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ತಯಾರಾದ 2 ಲಸಿಕೆಗಳು ಸುರಕ್ಷಿತವಾಗಿವೆ. ಎಲ್ಲರೂ ಶಿಸ್ತುಬದ್ಧವಾಗಿ ಲಸಿಕೆ ಪಡೆಯಿರಿ, ಕೊರೊನಾದಿಂದ ದೇಶ ಮುಕ್ತವಾಗಲಿದೆ. ಕೊರೊನಾ ಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಕೊರೊನಾ ಕಷ್ಟಕಾಲದಲ್ಲಿ ಸಿಎಂ ಬಿಎಸ್ವೈ ಆಟೋ ಚಾಲಕರಿಗೆ, ರೈತರಿಗೆ ಸಹಾಯ ಧನ ನೀಡಿ ನೆರವಿಗೆ ಬಂದಿದ್ದಾರೆ.
ಕಾಂಗ್ರೆಸ್‌ನವರಿಗೆ ಕೇಳುತ್ತೇನೆ, ನಿಮ್ಮದು 10 ವರ್ಷ ಸರ್ಕಾರ ಇದ್ದಾಗ ಕರ್ನಾಟಕಕ್ಕೆ ಏನು ನೀಡಿದ್ದೀರಿ. ರಾಜ್ಯಕ್ಕೆ ನೀಡಿದ ಅನುದಾನ ಪಟ್ಟಿ ನೀಡಿ. ಮೋದಿ ಹಾಗೂ ಬಿಎಸ್ವೈ ಡಬಲ್ ಇಂಜಿನ್ ತರಹ ಕೆಲಸ ಮಾಡಿ ರಾಜ್ಯಕ್ಕೆ ಅನುದಾನ ನೀಡಿದ್ದಾರೆ. ರಾಜ್ಯದ ಜನರು ಮುಂದಿನ ದಿನಗಳಲ್ಲಿ ಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಶೇ.75ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಿಸಬೇಕಾಗಿದೆ ಎಂದು ಜನರನ್ನ ಉದ್ದೇಶಿಸಿ ಅಮಿತ್ ಶಾ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತನಾಡಿದರು.