ETV Bharat / state

ರಾಜಾಹುಲಿ ಆಡಳಿತಕ್ಕೆ ಚಾಣಕ್ಯ ಮೆಚ್ಚುಗೆ: ಭಿನ್ನಮತೀಯರಿಗೆ 'ಶಾ' ಸಂದೇಶ ರವಾನೆ..!

ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು, ಸ್ವಪಕ್ಷದವರಿಂದಲೇ ಕೇಳಿ ಬರುತ್ತಿತ್ತು. ಸಂಪುಟ ವಿಸ್ತರಣೆಯ ಬಳಿಕ ಸಿಎಂ ಬಿಎಸ್​​​​ವೈ ವಿರುದ್ಧ, ಕೆಲವು ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.

Amit Shah appreciates the BSY administration
ಬಿಎಸ್​ವೈ ಆಡಳಿತಕ್ಕೆ ಅಮಿತ್ ಶಾ ಮೆಚ್ಚುಗೆ
author img

By

Published : Jan 17, 2021, 8:09 PM IST

Updated : Jan 17, 2021, 8:26 PM IST

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ಕೊಂಡಾಡುವ ಮೂಲಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಿನ್ನಮತೀಯರಿಗೆ ತೀಕ್ಷ್ಣವಾದ ಸಂದೇಶ ರವಾನೆ ಮಾಡಿದ್ದಾರೆ.

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿಎಸ್​ವೈ ನೇತೃತ್ವದ ಸರ್ಕಾರಗಳು ಉತ್ತಮ‌ ಕೆಲಸ ಮಾಡುತ್ತಿವೆ ಎಂದರು.

ಕೊರೊನಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಉತ್ತಮ‌ ಕೆಲಸ ಮಾಡಿದೆ. ಕೊರೊನಾ ನಡುವೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಿದೆ ಎಂದು ಬಿಎಸ್​​ವೈ ಅವರನ್ನು ಕೊಂಡಾಡಿದರು.

ಬಿಎಸ್​ವೈ ಆಡಳಿತ ವೈಖರಿಯನ್ನು ಕೊಂಡಾಡಿದ ಅಮಿತ್ ಶಾ

ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು, ಸ್ವಪಕ್ಷದವರಿಂದಲೇ ಕೇಳಿ ಬರುತ್ತಿತ್ತು. ಸಂಪುಟ ವಿಸ್ತರಣೆಯ ಬಳಿಕ ಸಿಎಂ ಬಿಎಸ್​​​​ವೈ ವಿರುದ್ಧ, ಕೆಲವು ಶಾಸಕರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಒಂದು ಕಡೆ ಕೊರೊನಾ ನಡುವೆ ಸರ್ಕಾರ ನಡೆಸುವ ಪರಿಸ್ಥಿತಿ, ಮತ್ತೊಂದೆಡೆ ಬಿಜೆಪಿ ಸೇರ್ಪಡೆಯಾದ ಶಾಸಕರ ಹಿತ ಕಾಯುವ ಒತ್ತಡ ಬಿಎಸ್​ವೈ ಮೇಲಿತ್ತು. ಇವೆರಡರ ನಡುವೆ ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗಳಿಂದ ಬಿಎಸ್​ವೈ ರೋಸಿ ಹೋಗಿದ್ದರು. ಇದೀಗ ಅಮಿತ್ ಶಾ ಅವರೇ ಸಿಎಂ ಕೆಲಸಕ್ಕೆ ಮೆಚ್ಚುಗೆ ನೀಡುವ ಮೂಲಕ, ಎಲ್ಲವನ್ನೂ ತಣ್ಣಗೆ ಮಾಡಿದ್ದಾರೆ.

Last Updated : Jan 17, 2021, 8:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.