ಅಥಣಿ : ಲಾಕ್‌ಡೌನ್ ಜಾರಿಯಲ್ಲಿದ್ದರೂ ಅಥಣಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನ ಗುಂಪಾಗಿ ಸೇರುತ್ತಿದ್ದಾರೆ.
ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಜನರಿಂದ ತುಂಬಿದೆ. ಕೊರೊನಾ ವೈರಸ್ ಪರಿಣಾಮವಾಗಿ ನಾಲ್ಕು ಜನಕ್ಕಿಂತ ಹೆಚ್ಚಿಗೆ ಜನ ಒಂದು ಕಡೆ ಸೇರಬಾರದು, ಸೇರಿದರೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಬೇಕೆಂದು ಕಾನೂನು ಇದ್ದರೂ, ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದಾರೆ.
ಕೊರೊನಾ ವೈರಸ್ ಭೀತಿಯ ನಡುವೆ, ಕೆಲ ಸಿಬ್ಬಂದಿ ಮಾಸ್ಕ ಧರಿಸಿದೆ ಬ್ಯಾಂಕ್‌ನಲ್ಲಿ ವ್ಯವಹರಿಸಿರೋದು ಕಂಡು ಬಂದಿದೆ. ಜನರಿಗೂ ಯಾವುದೇ ಮುಂಜಾಗ್ರತಾ ಕ್ರಮದ ಬಗ್ಗೆ ತಿಳುವಳಿಕೆ ಹಾಗೂ ಬ್ಯಾಂಕ್‌ನಲ್ಲಿ ಸ್ಯಾನಿಟೈಜರ್ ಇಲ್ಲದೆ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಗ್ರಾಹಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜನ ಈ ಬ್ಯಾಂಕ್ಗೆ ಭೇಟಿ ನೀಡುವುದರಿಂದ ಹಾಗೂ ಪಕ್ಕದಲ್ಲಿ ಗ್ರಾಮ ಪಂಚಾಯತ್, ಅಂಚೆ ಕಚೇರಿ ಇರುವುದರಿಂದ ಜನಸೇರುವುದು ಇಲ್ಲಿ ಸಾಮಾನ್ಯ. ಬ್ಯಾಂಕಿನೊ ಳಗೆ ಹೆಚ್ಚಿನ ಜನ ಸೇರದ್ದರಿಂದ ಮಾಧ್ಯಮ ಪ್ರತಿನಿಧಿಗಳು ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ, ಬ್ಯಾಂಕ್ ಸಿಬ್ಬಂದಿ ಎಚ್ಚೆತ್ತು ಜನರನ್ನು ಚದುರಿಸಿದರು. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸಲಿ ಎನ್ನುವುದು ಸಾರ್ವಜನಿಕರು ಆಗ್ರಹ.