ಬೆಳಗಾವಿ: ಕೊರೊನಾ ವೈರಸ್ ಅಟ್ಟಹಾಸವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವೊಂದಿಷ್ಟು ಆ್ಯಂಬುಲೆನ್ಸ್ ಚಾಲಕರು ಪ್ರತಿ ವಾಹನಕ್ಕೆ 3ರಿಂದ 5ಸಾವಿರದವರೆಗೆ ಹಣ ಪೀಕುತ್ತಿರುವ ಆರೋಪ ಕೇಳಿ ಬಂದಿದೆ.
ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ 36 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ನಿಂದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದರು. ಆ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಮೂರು ಸಾವಿರ ರೂ. ತೆಗೆದುಕೊಂಡರು. ಹೀಗಾಗಿ ಕೊರೊನಾ ಸಂಕಷ್ಟದ ಸಮಯದಲ್ಲೂ ಕೆಲವೊಂದಿಷ್ಟು ಜನರು ಮಾನವೀಯತೆ ಮರೆತಿದ್ದಾರೆಯೇ ಅನ್ನೋ ಪ್ರಶ್ನೆ ಮೂಡುತ್ತಿದೆ.
ಇದಲ್ಲದೇ ಕೋವಿಡ್ನಿಂದ ಮೃತಪಟ್ಟ ಶವವನ್ನು ಸ್ಮಶಾನಕ್ಕೆ ಸಾಗಣೆ ಮಾಡುವುದಕ್ಕಾಗಿಯೇ ಮೃತನ ಸಂಬಂಧಿಕರಿಂದ ಸಾವಿರಾರು ರೂ. ಪಡೆಯುತ್ತಿರೋ ಆರೋಪಗಳು ಮೊದಲಿನಿಂದಲೂ ಬೆಳಕಿಗೆ ಬರುತ್ತಿದೆ. ಆದರೂ ಜಿಲ್ಲಾಡಳಿತ ಮಾತ್ರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ಜಿಲ್ಲಾಡಳಿತ ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಸ್ಥರ ನೋವಿನೊಂದಿಗೆ ಇರಬೇಕು. ಕೊರೊನಾ ವೈರಸ್ ಅನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಂಬುಲೆನ್ಸ್ ಚಾಲಕರು ಸೇರಿದಂತೆ ಇತರರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ.