ETV Bharat / state

ಕೊಲೆ ಪ್ರಕರಣದಲ್ಲಿ ಅಮಾಯಕರಿಂದ ₹15 ಲಕ್ಷ ಹಣ ಪೀಕಿದ್ರಾ ಗೋಕಾಕ್ ಸಿಪಿಐ,ಪಿಎಸ್‍ಐ? - ಕೊಲೆ ಪ್ರಕರಣದಲ್ಲಿ ಅಮಾಯಕರಿಂದ 15ಲಕ್ಷ ಹಣ ಪೀಕಿದ್ರಾ ಗೋಕಾಕ್ ಸಿಪಿಐ ಹಾಗೂ ಪಿಎಸ್‍ಐ...?

ಗೋಕಾಕ ಪಟ್ಟಣದ ಮಹಾಂತೇಶ ನಗರದಲ್ಲಿ ಯುವಕನ ಕೊಲೆ ಪ್ರಕರಣದಲ್ಲಿ ಗೋಕಾಕ್ ಸಿಪಿಐ ಹಾಗೂ ಪಿಎಸ್‍ಐ ಸಿದ್ದಪ್ಪ ಬಬಲಿ ಅವರ ಮಕ್ಕಳನ್ನು ಬಂಧಿಸಿ ನಂತರ ಎಫ್​ಐಆರ್ ಮಾಡದಿರಲು 15 ಲಕ್ಷ ರೂ ಲಂಚ ಪಡೆದಿದ್ದಾರೆ ಎಂದು ಬಬಲಿ ಕುಟುಂಬದವರು ಆರೋಪಿಸಿದ್ದಾರೆ.

Allegations of bribery against Belagavi police
ಸಿದ್ದಪ್ಪ ಬಬಲಿ ಕುಟುಂಬ
author img

By

Published : Apr 23, 2022, 10:14 PM IST

ಬೆಳಗಾವಿ: ಗೋಕಾಕ ಪಟ್ಟಣದ ಮಹಾಂತೇಶ ನಗರದಲ್ಲಿ ಯುವಕನ ಕೊಲೆ ನಡೆದಿತ್ತು. ಈ ಕೊಲೆಯ ಆರೋಪಿಗಳೆಂದು ಅಮಾಯಕರಾದ ಸಿದ್ದಪ್ಪ ಬಬಲಿ ಕುಟುಂಬದವರನ್ನು ಬಂಧಿಸಿ ಅವರಿಂದ 15 ಲಕ್ಷ ರೂ ಹಣ ಪಡೆದಿದ್ದಾರೆ ಎಂದು ಗೋಕಾಕನ ಸಿದ್ದಪ್ಪ ಬಬಲಿ ಅಳಲು ತೋಡಿಕೊಂಡರು. ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಮತ್ತು ಪಿಎಸ್ಐ ಪೊಲೀಸ್ ಅಧಿಕಾರಿಗಳು ಅನ್ಯಾಯ ಮಾಡಿ ಬೆದರಿಕೆ ಹಾಕಿ 15 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಕಳೆದ ಜೂನ್ 2021ರಂದು ಗೋಕಾಕ ತಾಲೂಕಿನ ಮಹಾಂತೇಶ ನಗರ ಬಡಾವಣೆಯ ಮಾಲದಿನ್ನಿ ಕ್ರಾಸ್ ಬಳಿ ಸಂಜೆ 7ಕ್ಕೆ ಮಂಜು ಶಂಕರ ಮುರುಕಿಬಾವಿ ಎಂಬ ವ್ಯಕ್ತಿಯ ಅನುಮಾನಸ್ಪಾದವಾಗಿ ಕೊಲೆಯಾಗಿದ್ದನು. ಆದರೆ, ಬಸಪ್ಪ ರಂಗೇನಕೊಪ್ಪ ಎಂಬಾತನ ಹೇಳಿಕೆಯ ಅಧಾರದ ಮೇಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮನಸೋ ಇಚ್ಚೆ ಥಳಿಸಿದ್ದಾರೆ. ನನ್ನ ಪತಿ ಸಿದ್ದಪ್ಪ ಪೊಲೀಸ್ ಠಾಣೆಗೆ ವಿಚಾರಿಸಲು ತೆರಳಿದಾಗ ಲಾಕಪ್‍ನಲ್ಲಿ ಹಾಕಿ ಅವರಿಗೂ ಥಳಿಸಿದ್ದಾರೆ ಎಂದು ರಾಯವ್ವಾ ಕಾನಟ್ಟಿ ದೂರಿದರು.

ಈ ವೇಳೆ ನನ್ನ ಮಗಳಿಗೂ ಹಾಗೂ ಕೊಲೆಯಾದ ವ್ಯಕ್ತಿಗೂ ಸಂಬಂಧ ಇದೆ ಎಂದು ಊಹಿಸಿಕೊಂಡು ವಿಠ್ಠಲ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾನೆ. ಇದಕ್ಕೂ ನಮಗೂ ಸಂಬಂದ ಇಲ್ಲ ಎಂದು ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದರೆ ಠಾಣೆಯಿಂದ ನಿಮ್ಮ ಮಕ್ಕಳನ್ನು ಆಚೆಗೆ ತರಲು ಹಣ ಖರ್ಚಾಗುತ್ತದೆ. ಹಣದ ವ್ಯವಸ್ಥೆ ಮಾಡಿದರೆ ನಿಮ್ಮ ಮಕ್ಕಳನ್ನು ಬಿಡುವುದಾಗಿ ಗೋಕಾಕ ಸಿಪಿಐ ಮತ್ತು ಪಿಎಸ್ಐ ಹೇಳಿದ್ದರು.

ಅಲ್ಲದೆ, ಈ ಪ್ರಕರಣದಲ್ಲಿ ನಮ್ಮ ಸಂಬಂಧಿಕರಾರ ಲಕ್ಷ್ಮಣ, ಮಾನಿಂಗ್, ರೇಣುಕಾ, ರಾಯವ್ವ ಐದು ಜನರ ಮೇಲೆ ಎಫ್​ಐಆರ್ ಆಗಿದೆ. ಅದನ್ನು ಆಗದಂತೆ ನೋಡಿಕೊಳ್ಳಲು 15 ಲಕ್ಷ ರೂ. ಕೊಡಬೇಕೆಂದು ಹೇಳಿದಾಗ ಭಯದಿಂದ ಒಪ್ಪಿಕೊಂಡಿದ್ದೇವೆ ಎಂದು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು.

ಹಂತ ಹಂತವಾಗಿ ಲಕ್ಷ ವಸೂಲಿ: 21 ಜುಲೈ 2021ರಂದು ರಾತ್ರಿ 9ಕ್ಕೆ ಪೊಲೀಸ್ ಕಾನ್‌ಸ್ಟೇಬಲ್ ಗೋಕಾಕದ ಬ್ಯಾಳಿ ಕಾಟದ ಬಳಿ ಬಂದು 4 ಲಕ್ಷ 50 ಸಾವಿರ ರೂ. ಪಡೆದರು. ಬಳಿಕ ನಾಲ್ಕೈದು ದಿನಗಳ ನಂತರ ಬಿ.ಎಸ್.ಆಫೀಸ್ ಹೋಟೆಲ್ ಬಳಿ 3ಲಕ್ಷ, ಮತ್ತೆ 5ಲಕ್ಷ 50 ಸಾವಿರ ಹಣವನ್ನು ಸಿದ್ದಪ್ಪ ಬಬಲಿ ಅವರು ಅಡಿಯಪ್ಪ, ಸಣ್ಣ ಸಲಗನ್ನವರ, ಸಿದ್ರಾಮ ಹಳ್ಳೂರೆ ಸೇರಿಕೊಂಡು ಕಾನ್‍ಸ್ಟೇಬಲ್ ಪಾಟೀಲರ ಎಂಬವರ ಕೈಯಲ್ಲಿ ಹಣ ತಲುಪಿಸಿದ್ದೇವೆ. ಗೋಕಾಕ ಕೋರ್ಟ್ ಸರ್ಕಲ್ ಬಳಿ 2ಲಕ್ಷ ಸೇರಿದಂತೆ ಒಟ್ಟು 15 ಲಕ್ಷ ರೂ. ಹಣ ನೀಡಿದ್ದೇವೆ ಎಂದು ಗೋಕಾಕ ಸಿಪಿಐ ಹಾಗೂ ಪಿಎಸ್​ಐ ಮೇಲೆ ನೇರವಾಗಿ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಎರಡು ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆ: ತಜ್ಞರಿಂದ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.