ETV Bharat / state

ಪಾಲಿಕೆ ಚುನಾವಣೆಯಲ್ಲಿ AIMIM ಸ್ಪರ್ಧೆ: ಬೆಳಗಾವಿಗೆ ಆಗಮಿಸಿದ ಓವೈಸಿ - ಎಐಎಂಐಎಂ ಅಭ್ಯರ್ಥಿ ಪರ ಪ್ರಚಾರಕ್ಕೆ ಅಸಾದುದ್ದೀನ್ ಓವೈಸಿ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಳಗಾವಿಗೆ ಬಂದಿದ್ದಾರೆ.

aimim-founder-asaduddin-owaisi-visit-to-belagavi
ಬೆಳಗಾವಿಗೆ ಆಗಮಿಸಿದ ಓವೈಸಿ
author img

By

Published : Aug 30, 2021, 3:25 PM IST

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ(AIMIM) ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಪರ ಪ್ರಚಾರಕ್ಕಾಗಿ ಎಐಎಂಐಎಂ ಸಂಸ್ಥಾಪಕ, ಸಂಸದ ಅಸಾದುದ್ದೀನ್ ಓವೈಸಿ ಇಂದು ನಗರಕ್ಕೆ ಆಗಮಿಸಿದ್ದಾರೆ.

ಹೈದರಾಬಾದ್​​ನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಓವೈಸಿ ಬಳಿಕ ರಸ್ತೆ ಮಾರ್ಗವಾಗಿ ಖಾಸಗಿ ಹೋಟೆಲ್​ಗೆ ಆಗಮಿಸಿದ್ದಾರೆ. ನೂರಾರು ಎಐಎಂಐಎಂ ಕಾರ್ಯಕರ್ತರು ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ಸ್ವಾಗತಿಸಿದರು. ಓವೈಸಿ ಹಾಗೂ ಎಐಎಂಐಎಂ ಪರ ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಿಸಿದರು.

aimim-founder-asaduddin-owaisi-visit-to-belagavi
ಅಸಾದುದ್ದೀನ್ ಓವೈಸಿ

ಅಸಾದುದ್ದೀನ್ ಭೇಟಿಗಾಗಿ ನೂರಾರು ಕಾರ್ಯಕರ್ತರು ಹೋಟೆಲ್ ಎದುರು ಜಮಾವಣೆಗೊಂಡಿದ್ದಾರೆ. ಬೆಳಗಾವಿಯ 58 ವಾರ್ಡ್​ಗಳ ಪೈಕಿ 7 ವಾರ್ಡ್​ಗಳಲ್ಲಿ ಎಐಎಂಐಎಂ ಸ್ಪರ್ಧಿಸಿದೆ.

ಸೆಪ್ಟಂಬರ್​ 3ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದ್ದು, ಪ್ರಚಾರ ಅಬ್ಬರ ಜೋರಾಗಿದೆ.

ಇದನ್ನೂ ಓದಿ: NEP ವಿರೋಧಿಸಿ ಸಚಿವ ಅಶ್ವತ್ಥ ನಾರಾಯಣ್​ಗೆ ‌ಮುತ್ತಿಗೆ ಯತ್ನ: ಮಂಗಳೂರಲ್ಲಿ 50ಕ್ಕೂ ಹೆಚ್ಚು CFI ಕಾರ್ಯಕರ್ತರು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.