ETV Bharat / state

ಕೆ.ಕಲ್ಯಾಣ್ ಕೌಟುಂಬಿಕ ಕಲಹ ಪ್ರಕರಣಕ್ಕೆ ತಿರುವು!​: ಆರೋಪಿ ಶಿವಾನಂದ ಕೊಟ್ಟ ಟ್ವಿಸ್ಟ್​​​ ಏನು? - shivanada vaali enquiry

ಕೆ.ಕಲ್ಯಾಣ್ ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾನಂದ ವಾಲಿ ಜೊತೆ ಮತ್ತೊಬ್ಬ ಆರೋಪಿ ಸೇರಿದ್ದು, ಆಕೆಯನ್ನು ಗಂಗಾ ಕುಲಕರ್ಣಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಗಂಗಾ ಅವರನ್ನು ಪೊಲೀಸರು ಹುಡುಕುತ್ತಿದ್ದು, ಆವರ ಫೋನ್​ ಸ್ವಿಚ್ಡ್​​​​ ಆಫ್​ ಆಗಿದೆ.

accused shivanada vaali enquiry
ಕೆ.ಕಲ್ಯಾಣ್ ಕೌಟುಂಬಿಕ ಕಲಹ ಪ್ರಕರಣಕ್ಕೆ ಟ್ವಿಸ್ಟ್​​ ಕೊಟ್ಟ ಆರೋಪಿ ಶಿವಾನಂದ
author img

By

Published : Oct 8, 2020, 3:22 PM IST

ಬೆಳಗಾವಿ : ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ ವಿಚಾರಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಶಿವಾನಂದ ವಾಲಿಯ ವಿಚಾರಣೆ ವೇಳೆ ಉತ್ತರ ಕರ್ನಾಟಕದಲ್ಲಿ ಹಲವರಿಗೆ ವಂಚಿಸಿ ಕೋಟ್ಯಂತರ ರೂ.ಆಸ್ತಿ ಸಂಪಾದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಾನಂದ ವಾಲಿಯನ್ನು ಪೊಲೀಸರು ಸ್ಥಳ ಪರಿಶೀಲನೆಗೆ ಕರೆದೊಯ್ದಿದ್ದಾರೆ.

ಕೆ.ಕಲ್ಯಾಣ್ ಕೌಟುಂಬಿಕ ಕಲಹ ಪ್ರಕರಣಕ್ಕೆ ಟ್ವಿಸ್ಟ್​​ ಕೊಟ್ಟ ಆರೋಪಿ ಶಿವಾನಂದ

ಇನ್ನು ಶಿವಾನಂದ ವಾಲಿ ಜೊತೆ ಮತ್ತೊಬ್ಬ ಆರೋಪಿ ಸೇರಿದ್ದು, ಅವರನ್ನ ಗಂಗಾ ಕುಲಕರ್ಣಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಗಂಗಾ ಅವರನ್ನು ಪೊಲೀಸರು ಹುಡುಕುತ್ತಿದ್ದು, ಅವರ ಫೋನ್​ ಸ್ವಿಚ್ಡ್​​​ ಆಫ್​ ಆಗಿದೆ.

ಬ್ರಾಹ್ಮಣ ಕುಟುಂಬಗಳನ್ನೇ ಟಾರ್ಗೆಟ್:

ಈ ಹಿಂದೆ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಇಬ್ಬರು ಆರೋಪಿಗಳು ಬ್ರಾಹ್ಮಣ ಕುಟುಂಬಗಳನ್ನೇ ಟಾರ್ಗೆಟ್​ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಗಂಗಾ ಕುಲಕರ್ಣಿ ಕೆ ಕಲ್ಯಾಣ್​ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು. ಇವರು ಮನೆಗೆ ಸೇರಿದ ನಂತರ ಕಲ್ಯಾಣ್​ ಕಟುಂಬದಲ್ಲಿ ಬಿರುಕು ಮೂಡಿದೆ. ಅಲ್ಲದೇ ಗಂಗಾ ಮೇಲೆ ಅಪಹರಣ, ಆಸ್ತಿ, ಹಣ ವರ್ಗಾವಣೆ ಆರೋಪ ಕೂಡ ಇದೆ. ಈ ಕುರಿತು ಸೆಪ್ಟೆಂಬರ್ 30ರಂದು ಪ್ರೇಮಕವಿ ಕೆ.ಕಲ್ಯಾಣ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್‌ಐಆರ್ ಸಹ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.