ETV Bharat / state

ಕೇಸರಿ ಸರ್ಕಾರ ಅನ್ನೋ ಬಿಜೆಪಿಯವರಿಗೆ ಕೇಸರಿಕರಣ ಮಾಡೋಕೂ ಧೈರ್ಯ ಇಲ್ಲ.. ಭಾಸ್ಕರ್ ರಾವ್ ವ್ಯಂಗ್ಯ

ಕರ್ನಾಟಕದಲ್ಲಿ ಕೇಸರಿ ಸರ್ಕಾರ ಇದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ಇವರಿಗೆ ಕೇಸರೀಕರಣ ಮಾಡೋಕೂ ಧೈರ್ಯ ಇಲ್ಲ. ಇವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಬಗ್ಗೆ ಆಪ್ ಮುಖಂಡ ಭಾಸ್ಕರ್ ರಾವ್ ವ್ಯಂಗ್ಯ ಮಾಡಿದರು.

aap-leader-bhaskar-rao-statement-against-bjp
ಕೇಸರಿ ಸರ್ಕಾರ ಅನ್ನೋ ಬಿಜೆಪಿಯವರಿಗೆ ಕೇಸರಿಕರಣ ಮಾಡೋಕೂ ಧೈರ್ಯ ಇಲ್ಲ.. ಬಿಜೆಪಿ ಬಗ್ಗೆ ಭಾಸ್ಕರ್ ರಾವ್ ವ್ಯಂಗ್ಯ
author img

By

Published : Sep 1, 2022, 6:21 PM IST

ಬೆಳಗಾವಿ : ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಪ್ರಧಾನಿ ಘೋಷಣೆ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಶೇ 40ರಷ್ಟು ಸರ್ಕಾರ ಇದೆ ಎಂದು ಗುತ್ತಿಗೆದಾರರು 4 ತಿಂಗಳ ಹಿಂದೆಯೇ ಪತ್ರ ಬರೆದಿದ್ದಾರೆ. ಸದ್ಯ ಶೇ 50ರಷ್ಟು ಆಗಿದೆ ಎಂದು ಪ್ರಧಾನಿಗೆ ಪತ್ರ ಬರೆಯಲು ಮುಂದಾಗಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಏನಾಗುತ್ತಿದೆ ಅನ್ನೋದು ಪ್ರಧಾನಿಗೆ ಗೊತ್ತಾಗಬೇಕಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದ್ದಾರೆ.

ಕೇಸರಿ ಸರ್ಕಾರ ಅನ್ನೋ ಬಿಜೆಪಿಯವರಿಗೆ ಕೇಸರಿಕರಣ ಮಾಡೋಕೂ ಧೈರ್ಯ ಇಲ್ಲ.. ಬಿಜೆಪಿ ಬಗ್ಗೆ ಭಾಸ್ಕರ್ ರಾವ್ ವ್ಯಂಗ್ಯ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಸಚಿವರೇ ಸದನದಲ್ಲಿ ಪಿಎಸ್ಐ ಹಗರಣ ಆಗಿಲ್ಲ ಎಂದಿದ್ದರು. ಆದರೆ, ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಯ್ರಾಂಕ್ ಇದ್ದ ಅಧಿಕಾರಿಯನ್ನು ಬಂಧನ ಮಾಡಿದ್ದಾರೆ. ಪರೀಕ್ಷೆ ರದ್ದು ಮಾಡಿ ಹೊಸದಾಗಿ ಪರೀಕ್ಷೆ ನಡೆಸಬೇಕು. ಕೋವಿಡ್ ಕಾಲದಲ್ಲಿ ಆರೋಗ್ಯ ಸಚಿವರ ಭ್ರಷ್ಟಾಚಾರ ಬಗ್ಗೆಯೂ ಸದನದಲ್ಲಿ ಚರ್ಚೆ ಆಗಿದೆ. ನಮ್ಮ ರಾಜ್ಯದಲ್ಲಿ ಶೇ 100ರಷ್ಟು ನಡೆದ ಪ್ರಕರಣಗಳು ಇವೆ. ಸಚಿವ ಮುನಿರತ್ನ ವಿರುದ್ಧವೂ ಕ್ರಮ ಆಗಬೇಕು ಎಂದು ಹೇಳಿದರು.

ಮಂಗಳೂರಿಗೆ ಪ್ರಧಾನಿ ಬರುತ್ತಿದ್ದು, ಈ ಬಗ್ಗೆ ಮಾತನಾಡುವ ಧೈರ್ಯ ಅವರಿಗಿದೆಯೇ? ಕರ್ನಾಟಕ ಸರ್ಕಾರಕ್ಕೆ ಒಬ್ಬ ಸಚಿವ ಮೇಲೆ ಕ್ರಮ ಕೈಗೊಳ್ಳುವ ಆತ್ಮಶಕ್ತಿ ಇದೆಯೇ ಎಂದು ಪ್ರಶ್ನಿಸಿದರು. ಅಲ್ಲದೇ ಪ್ರಧಾನಿ ಮೋದಿ ಪತ್ರಕರ್ತರ ಜೊತೆಗೆ ಮಾತನಾಡಲು ಹೆದರುತ್ತಾರೆ. ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದು,ಈ ಬಿಟ್‌ಕಾಯಿನ್ ಹಗರಣ ಅಂತಾರಾಷ್ಟ್ರೀಯ ಹಗರಣವಾಗಿದೆ.ಈ ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಕೇಸರಿಕರಣ ಮಾಡಲು ಧೈರ್ಯ ಇಲ್ಲ : ಕೇಸರಿ ಸರ್ಕಾರ ಅನ್ನೋ ಬಿಜೆಪಿಯವರಿಗೆ, ಕೇಸರಿಕರಣ ಮಾಡೋಕೂ ಧೈರ್ಯ ಇಲ್ಲ. ಇವರೆಲ್ಲ ಸೋಷಿಯಲ್ ಮಿಡಿಯಾ ಪೈಲ್ವಾನರು. ಸೋಷಿಯಲ್ ಮೀಡಿಯಾದಲ್ಲಿ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ. ಲೋಕಾಯುಕ್ತ ಬಗ್ಗೆ ಇವರು ನೀಡಿದ ವಾದ ವಿಫಲವಾಗಿದೆ‌. ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿಲ್ಲ.ಕಳೆದ 20 ದಿನಗಳಿಂದ ಭ್ರಷ್ಟಾಚಾರ ಬಗ್ಗೆ ಯಾವುದೇ ತನಿಖೆ ಆಗಿಲ್ಲ ಎಂದು ಹೇಳಿದರು.

ಬಿಜೆಪಿಯವರು ಸಾವರ್ಕರ್ ಅವರನ್ನು ಬೀದಿಗೆ ತಂದಿದ್ದಾರೆ : ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಕೂರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸಾವರ್ಕರ್ ಅವರನ್ನು ಬೀದಿಗೆ ತಂದು ಅವಮಾನ ಮಾಡ್ತಿದ್ದಾರೆ. ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಿದ್ದು ಎಲ್ಲರಗೂ ಗೊತ್ತಿರುವ ವಿಷಯವಾಗಿದೆ.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿನಲ್ಲಿ ಇದ್ದವರು. ಸಾರ್ವಜನಿಕ ಗಣೇಶೋತ್ಸವಕ್ಕೆ ಬಾಲಗಂಗಾಧರ ತಿಲಕ್ ಚಾಲನೆ ನೀಡಿದ್ರು. ಬಾಲಗಂಗಾಧರ ತಿಲಕ್ ಅವರ ಭಾವಚಿತ್ರ ಬಿಟ್ರೆ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡರ ಭಾವಚಿತ್ರ ಇಡಬೇಕು. ಸಾವರ್ಕರ್ ಅವರ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಏಕೆ ಬಿಜೆಪಿಯವರು ಮೇಲಿಂದ್ಮೇಲೆ ಸಾವರ್ಕರ್ ಗೆ ಅವಮಾನ ಮಾಡ್ತಿದ್ದಾರೆ.

ಸಿಕ್ಕ ಸಿಕ್ಕ ಕಡೆ ಅವರ ಪೋಸ್ಟರ್ ಹಚ್ಚಿ ಕಸದ ತೊಟ್ಟಿಗೆ ಫೋಟೋ ಹಾಕುವ ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಕೂಡ ಕಲಿಯಬೇಕು.ಸಾವರ್ಕರ್ ಸ್ವಾತಂತ್ರ್ಯ ಸೇನಾನಿ ಅವರು ತ್ಯಾಗ ಬಲಿದಾನ ಮಾಡಿದ್ದಾರೆ ಎಂದರು.

ಇದನ್ನೂ ಓದಿ : ಭ್ರಷ್ಟಾಚಾರ ನಡೆಸಲು ರಾಜ್ಯ ಸರ್ಕಾರಕ್ಕೆ ಕೇಂದ್ರದ ಸಹಕಾರ ಸಿಕ್ಕಿದೆ: ಕೃಷ್ಣ ಬೈರೇಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.