ಅಥಣಿ: ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿಬಿದ್ದ ಪರಿಣಾಮ 4 ಜನ ನೀರಲ್ಲಿ ಬಿದ್ದಿದ್ದು, ಅವರಲ್ಲಿ ಓರ್ವ ಮಹಿಳೆ ನೀರುಪಾಲಾಗಿರುವ ಘಟನೆ ತಾಲೂಕಿನ ಜನವಾಡ ಗ್ರಾಮದ ಬಳಿ ಸಂಭವಿಸಿದೆ.
ಜನವಾಡ ಗ್ರಾಮದ ಹತ್ತಿರ ಕೃಷ್ಣ ನದಿ ದಾಟುವ ವೇಳೆ ಆಯತಪ್ಪಿ ತೆಪ್ಪ ಮಗುಚಿಬಿದ್ದ ಪರಿಣಾಮ ಪ್ರೇಮಾ ಯಲ್ಲಪ್ಪ ಅಲಗೂರು (30) ಘಟನಟ್ಟಿ ಗ್ರಾಮದ ಮಹಿಳೆ ನೀರುಪಾಲಾಗಿದ್ದಾಳೆ. ಉಳಿದ ಮೂವರು ಈಜಿ ದಡ ಸೇರಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಅಥಣಿ ಜಮಖಂಡಿ ಮಧ್ಯದ ಹಿಪ್ಪರಗಿ ಬ್ಯಾರೇಜ್ ರೋಡ್ ಬಂದ ಮಾಡಲಾಗಿದೆ. ಅಥಣಿ ತಾಲೂಕಿನ ಜನವಾಡದಿಂದ ಜಮಖಂಡಿ ತಾಲೂಕಿನ ಹಿಪ್ಪರಗಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.
ಕೃಷ್ಣಾ ನದಿಯಲ್ಲಿ ನಾಪತ್ತೆಯಾಗಿರುವ ಮಹಿಳೆ ದೇಹ ಇನ್ನೂ ಪತ್ತೆಯಾಗಿಲ್ಲ, ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.