ಬೆಳಗಾವಿ: ವಿವಾಹೇತರ ಸಂಬಂಧ ಬಿಡು ಎಂದು ಬುದ್ಧಿವಾದ ಹೇಳಿದ್ದಕ್ಕೆ ಕೆರಳಿದ ಪತ್ನಿವೋರ್ವಳು ಪತಿಯ ಕತ್ತು ಹಿಸುಕಿ ಕೊಲೆಗೈದಿರುವ ಆರೋಪ ಪ್ರಕರಣ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ನಡೆದಿದೆ.
ಸಿದ್ದಪ್ಪ ಚುಂಚನೂರ (25) ಹತ್ಯೆಯಾಗಿರುವ ವ್ಯಕ್ತಿ. ಸಿದ್ದಪ್ಪನ ಪತ್ನಿ ಕೌಶಲ್ಯ ಈ ಕೃತ್ಯ ಎಸಗಿರುವ ಆರೋಪಿ. ರಾತ್ರಿ ಮಲಗಿದ್ದಾಗ ಹಗ್ಗದಿಂದ ಸಿದ್ದಪ್ಪನ ಕುತ್ತಿಗೆ ಬಿಗಿದು ಕೌಶಲ್ಯ ಕೊಲೆ ಮಾಡಿದ್ದಾಳೆ. ಕೌಶಲ್ಯಗೆ ಬೇರೆ ವ್ಯಕ್ತಿ ಜತೆಗೆ ವಿವಾಹೇತರ ಸಂಬಂಧ ಇದೆ ಎನ್ನಲಾಗ್ತಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಸಿದ್ದಪ್ಪ ಪತ್ನಿಗೆ ಬುದ್ಧಿವಾದ ಹೇಳಿದ್ದ. ಇದರಿಂದ ಕುಪಿತಗೊಂಡ ಕೌಶಲ್ಯಳು ತನ್ನ ಪತಿ ಸಿದ್ದಪ್ಪ ರಾತ್ರಿ ಮಲಗಿದ್ದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು. ಕೊಲೆಯಾದ ಸಿದ್ದಪ್ಪನ ತಂದೆ ಮಾಯಪ್ಪ ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.