ETV Bharat / state

ಚಿಕ್ಕೋಡಿ: ಟಿಪ್ಪರ್ ಲಾರಿ ಹಾಯ್ದು ಐವತ್ತಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಸಾವು..! - More than 50 sheep died on the spot when the tipper lorry ran over it

ಗ್ರಾಮದ ಹೊರವಲಯದಲ್ಲಿ ರಸ್ತೆ ಮೇಲೆ ಕುರಿಗಳು ಬರುವ ಸಂದರ್ಭದಲ್ಲಿ ಟಿಪ್ಪರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹರಿದು 50ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ.

a-tipper-lorry-overturns-and-kills-sheep-in-ammanagi-village-of-belgaum
ಚಿಕ್ಕೋಡಿ : ಟಿಪ್ಪರ್ ಲಾರಿ ಹಾಯ್ದು ಐವತ್ತಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಸಾವು...!
author img

By

Published : Jul 21, 2022, 10:31 PM IST

ಚಿಕ್ಕೋಡಿ : ಟಿಪ್ಪರ್ ಲಾರಿ ಹರಿದು ಐವತ್ತಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದಲ್ಲಿ ನಡೆದಿದೆ. ಅಮ್ಮಣಗಿ ಗ್ರಾಮದ ಕುರಿಗಾಯಿ ಹಾಲಪ್ಪ ಸಿದ್ದಪ್ಪ ಹೆಗಡೆ ಎಂಬುವವರಿಗೆ ಸೇರಿದ ಐವತ್ತಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ.

ಗ್ರಾಮದ ಹೊರವಲಯದಲ್ಲಿ ರಸ್ತೆ ಮೇಲೆ ಕುರಿಗಳು ಬರುವ ಸಂದರ್ಭದಲ್ಲಿ ಟಿಪ್ಪರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕುರಿಗಳ ಮೇಲೆ ಹರಿದು 50ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ.

ಘಟನೆಯಲ್ಲಿ ಟಿಪ್ಪರ್ ಲಾರಿ ಪಲ್ಟಿ ಆಗಿದ್ದು,ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಂಕೇಶ್ವರದ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

ಓದಿ : ಬ್ಯಾಂಕ್ ದರೋಡೆ ಮಾಡಲು ಯತ್ನ: ಮೂವರು ಕಳ್ಳರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.