ETV Bharat / state

ಬೆಳಗಾವಿಯಲ್ಲಿದೆ ವಿಶೇಷ ತಳಿ ಮಾವು.. ಏನಿದರ ಸ್ಪೆಷಾಲಿಟಿ ಎಂದರೆ?

ಬೆಳಗಾವಿಯಲ್ಲೊಂದು ವಿಶೇಷವಾದ ಮಾವಿನ ಹಣ್ಣಿನ ಮರವಿದ್ದು,ಇದು ವರ್ಷಕ್ಕೆ ಎರಡು ಬಾರಿ ಫಸಲು ನೀಡುತ್ತದೆ. ಒಂದು ಬಾರಿಗೆ ಕೇವಲ 1200 ರಿಂದ 1500 ಮಾವಿನ ಹಣ್ಣು ಬಿಡುವ ಈ ಮರದ ಕಾಯಿಗಳು 2 ರಿಂದ 2.5 ಕೆಜಿ ವರೆಗೆ ತೂಗುತ್ತದೆ ಎಂದು ಮಾಲೀಕ ಅಬ್ದುಲ್ ರಹಮಾನ್ ಭೇಪಾರಿ ಹೇಳುತ್ತಾರೆ.

a-special-breed-of-mango-is-in-belgaum
ಬೆಳಗಾವಿಯಲ್ಲಿದೆ ವಿಶೇಷ ತಳಿಯ ಮಾವು
author img

By

Published : May 23, 2022, 7:40 PM IST

ಬೆಳಗಾವಿ: ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ಹಣ್ಣು ಪ್ರಿಯರಿಗೆ ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು ಸವಿಯುವ ಆಸೆಯಾಗುತ್ತದೆ. ರಾಜ್ಯದಲ್ಲಿ ವಿವಿಧ ತಳಿಗಳ ಮಾವು ಈಗಾಗಲೇ ಲಭ್ಯವಿದೆ ಕೂಡಾ. ಆದರೆ, ಬೆಳಗಾವಿ ನಗರದಲ್ಲೊಂದು ವಿಶೇಷವಾದ ಮಾವಿನ‌ ತಳಿಯಿದೆ. ಇದು ರಾಜ್ಯದಲ್ಲಿ ಅತ್ಯಂತ ವಿಶೇಷ ತಳಿಯ ಮಾವಿನ ಹಣ್ಣು ಬಿಡುವ ಮರವಾಗಿದೆ. ಈ ಮರವು ವರ್ಷದಲ್ಲಿ ಎರಡು ಭಾರಿ ಫಸಲು ನೀಡುತ್ತದೆ. ಪ್ರತಿ ಮಾವಿನ ಹಣ್ಣಿನ ತೂಕವು ಸುಮಾರು 2ರಿಂದ 2.5 ಕೆ.ಜಿವರೆಗೂ ತೂಗುತ್ತದೆ. ತಿನ್ನಲು ಅತ್ಯಂತ ಸಿಹಿಯಾಗಿರುವ ಈ ಹಣ್ಣನ್ನು ತಿನ್ನಲು ಜನರು ಮುಗಿಬೀಳುತ್ತಾರೆ.

ವಿಶೇಷ ತಳಿಯ ಮಾವಿನ ಬಗ್ಗೆ ತಿಳಿಸುತ್ತಿರುವ ಮಾಲೀಕ ಅಬ್ದುಲ್ ರಹಮಾನ್ ಭೇಪಾರಿ

ಬೆಳಗಾವಿಯ ಹೃದಯ ಭಾಗದಲ್ಲಿರುವ ಕ್ಯಾಂಪ್ ಪ್ರದೇಶದ ಮನೆಯ ಆವರಣದಲ್ಲಿ ಬೆಳೆದಿರುವ ಮಾವಿನ ಮರದ ತಳಿಯೂ ಯಾವುದು..? ಎಲ್ಲಿಂದ ಈ ತಳಿ ತರಲಾಗಿದೆ ಎಂಬ ಮಾಹಿತಿ ಅಬ್ದುಲ್ ರಹಮಾನ ಭೇಪಾರಿ ಅವರನ್ನು ಬಿಟ್ಟರೇ ಬೇರೆ ಯಾರಿಗೂ ಗೊತ್ತಿಲ್ಲ. ಅಬ್ದುಲ್ ಭೇಪಾರಿ ಅವರ ಸೋದರ ಮಾವ ರೈಲ್ವೆ ಇಲಾಖೆಯ ಸರಕು ಸಾಗಾಣಿಕಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಒಂದು ದಿನ ಅವರು ಸರಕು ಸಾಗಾಣಿಕೆ ಮಾಡುವ ವೇಳೆ ಮಾವಿನ ರಾಶಿಯೊಂದನ್ನು ಕಂಡು ಅಚ್ಚರಿಗೆ ಒಳಗಾಗಿದ್ದಾರೆ. ಅಲ್ಲದೇ ಆ ರಾಶಿಯಲ್ಲಿ ಸ್ವಲ್ಪ ಹಣ್ಣನ್ನು ಮನೆಗೆ ತಂದಿದ್ದರಂತೆ. ಬಳಿಕ ಆ ಹಣ್ಣಿನ‌ ಬೀಜವನ್ನು ಪೋಷಿಸಿ, ಸಸಿ ಮಾಡಿ ಮನೆಯ ಆವರಣದಲ್ಲಿ ಅಬ್ದುಲ್ ಭೇಪಾರಿ ನೆಟ್ಟು ಪೋಷಿಸಿದರು. ಪ್ರಸ್ತುತ 97 ವರ್ಷದ ಅಬ್ದುಲ್ ಭೇಪಾರಿ ಅವರು ಕಳೆದ 50 ವರ್ಷಗಳಿಂದಲೂ ಈ ಮರ ಪೋಷಿಸಿಕೊಂಡು ಬಂದಿದ್ದಾರೆ.

ಮರದಲ್ಲಿ 1200 ರಿಂದ 1500 ಹಣ್ಣುಗಳ ಫಸಲು ಬರುತ್ತೆ : ರಾಜ್ಯದಲ್ಲಿ ಎಲ್ಲಿಯೂ ಕಾಣದ ಈ ಮರ ಕೇವಲ‌ 1200ರಿಂದ 1500 ಹಣ್ಣುಗಳು ಮಾತ್ರ ನೀಡುತ್ತದೆ.‌ ಈ ಹಣ್ಣಿಗಾಗಿ ನಾನಾ ಕಡೆಗಳಿಂದ ಜನರು ಆಗಮಿಸುತ್ತಾರೆ. ಯಾರೇ ಬಂದರೂ ಅವರಿಗೆ ನಿರಾಸೆಯಾಗದಂತೆ ಹಣ್ಣುಗಳನ್ನು ಕೊಟ್ಟು ಮರದ ಕುರಿತು ಪೂರ್ಣ ತಿಳಿವಳಿಕೆಯನ್ನು ನೀಡಲಾಗುತ್ತಿದೆ. ಅಲ್ಲದೇ ಈ ಮರದ ಇನ್ನೊಂದು ವಿಶೇಷತೆ ಎಂದರೆ ವರ್ಷಕ್ಕೆ ಈ ಮರವು ಎರಡು ಭಾರಿ ಫಸಲು ನೀಡುತ್ತದೆ.

ಸಾಮಾನ್ಯವಾಗಿ ಮಾವಿನ ಫಸಲು ಮಾರ್ಚ್, ಏಪ್ರಿಲ್ ನಲ್ಲಿ ಬರುತ್ತದೆ. ಆದರೆ, ಈ ಮರದ ಫಸಲು ಜೂನ್, ಜುಲೈ ತಿಂಗಳಲ್ಲಿ, ಬಳಿಕ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಲಭಿಸುತ್ತದೆ ಎಂದು ಅಬ್ದುಲ್ ಅವರು ಮಾಹಿತಿ ನೀಡಿದ್ದಾರೆ. ವಿವಿಧ ತಳಿಯ ವಿಶೇಷ ಮರಗಳನ್ನು ಬೆಳೆಸುವುದೇ ಅಬ್ದುಲ್ ಅವರ ಹವ್ಯಾಸವಾಗಿದೆ. ಇವರಲ್ಲಿ ಬ್ರಿಟೀಷ್ ಅಂಜೂರ, ಸಕ್ಕರೆ ನೇರಳೆ, ಕರಿ ಹತ್ತಿಹಣ್ಣು ಸೇರಿದಂತೆ ರಾಜ್ಯದಲ್ಲಿ ಕಾಣಸಿಗದ ಮರಗಳು ಇವರ ಮನೆಯ ಆವರಣದಲ್ಲಿ ಕಾಣಸಿಗುತ್ತವೆ.

ಓದಿ : ಅಬ್ಬಾಬ್ಬಾ..! ಶಿವಮೊಗ್ಗದಲ್ಲಿ ಬರೋಬ್ಬರಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.