ಅಥಣಿ/ಬೆಳಗಾವಿ: ಇಂಡಿ ತಾಲೂಕಿನ ಯುವಕ ತನ್ನ ಗದ್ದೆಯಲ್ಲಿ ನಿಂತು ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಜಾನಪದ ಹಾಡಿನ ಮೂಲಕ ವಿವರಿಸಿದ್ದಾನೆ. ಅದರಲ್ಲೂ ಮನಕಲಕುವ ಜಾನಪದ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ ಬಿಡದೆ ಸುರಿದ ಮಹಾಮಳೆಗೆ ಜನರು ತತ್ತರಿಸಿಹೋಗಿದ್ದಾರೆ, ಮಳೆ ಪರಿಣಾಮದಿಂದ ಕೃಷ್ಣಾ ನದಿಯಲ್ಲಿ ಕೂಡ ಪ್ರವಾಹ ಪರಿಸ್ಥಿತಿ ಎದುರಾಗಿದೆ, ರಾಜ್ಯಾದ್ಯಂತ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ, ಮಳೆಯಿಂದ ದಿಕ್ಕುತೋಚದೆ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ, ಹೀಗಾಗಿ ಜಾನಪದ ಹಾಡಿನ ರೂಪಕ ಜನರ ಕಷ್ಟಗಳನ್ನು ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಂಡಿ ತಾಲೂಕಿನ ಯುವಕ ಜಟ್ಟು ಹೊಸಮನಿ, ತನ್ನ ಗದ್ದೆಯಲ್ಲಿ ನಿಂತು ಮಳೆ ಮತ್ತು ಪ್ರವಾಹ ಪರಿಸ್ಥಿತಿ ಜಾನಪದ ಹಾಡಿನ ಮೂಲಕ ವಿವರಿಸಿದ್ದಾನೆ. ಲಕ್ಷ್ಮಣ ಜುರಗಿ ಈ ಹಾಡಿನ ಸಾಹಿತ್ಯ ರಚಿಸಿದ್ದಾರೆ.ಮನಕಲಕುವ ಈ ಜಾನಪದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.