ETV Bharat / state

ಕೃಷ್ಣೆಗೆ ಹರಿದು ಬಂದ 'ಮಹಾ' ನೀರು.. ಬಿಡುಗಡೆಯಾದ ನೀರಿಗೆ ಅಳತೆಯೇ ಇಲ್ಲ.. - Krishna river

ಕೃಷ್ಣಾ ನದಿಯಲ್ಲಿ ಒಳ ಹರಿವಿನ ಪ್ರಮಾಣ ದಿಢೀರ್ ಹೆಚ್ಚಾಗಿದೆ. ಒಣಗಿ ಹೋಗಿದ್ದ ಹಿಪ್ಪರಗಿ ಬ್ಯಾರೇಜ್‌ಗೆ ನೀರು ತಲುಪಿದ್ದರಿಂದ ಆ ಭಾಗದ ರೈತರು ಮತ್ತು ಜನರು ನಿಟ್ಟುಸಿರು ಬಿಡುವಂತಾಗಿದೆ.

ಕೃಷ್ಣೆಗೆ ಹರಿದು ಬಂದ 'ಮಹಾ' ನೀರು
author img

By

Published : Jun 29, 2019, 8:34 PM IST

ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಡ್ಯಾಂ ಬಳಿ ಹಾಕಲಾಗಿದ್ದ ಬೃಹತ್ ಮಣ್ಣಿನ ಒಡ್ಡು ಒಡೆದಿದ್ದು, ಡ್ಯಾಂನ ಎಲ್ಲಾ ಗೇಟ್‌ಗಳ‌ ಮೂಲಕ ನೀರು ಕೃಷ್ಣಾ ನದಿ ಪ್ರವೇಶಿಸುತ್ತಿದೆ. ಬಿಡುಗಡೆಯಾದ ನೀರಿಗೆ ಅಳತೆಯೇ ಇಲ್ಲದಂತಾಗಿದೆ.

ನೀರಿನ ಒತ್ತಡದಿಂದಾಗಿ ರಾಜಾಪುರ ಬ್ಯಾರೇಜ್ ಬಳಿ ಹಾಕಲಾಗಿದ್ದ ಮಣ್ಣಿನ ಒಡ್ಡು ಒಡೆದಿದೆ. 64 ಗೇಟುಗಳ ಪೈಕಿ 11 ಗೇಟ್​ಗಳಿಂದ ಕೃಷ್ಣಾ ನದಿಗೆ ನೀರು ಬಿಡಲಾಗುತ್ತಿತ್ತು. ಉಳಿದ ಗೇಟುಗಳು ದುರಸ್ತಿ ಕಾರ್ಯ ನಡೆದಿದ್ದರಿಂದ ಬ್ಯಾರೇಜ್‌ನಿಂದ ಸುಮಾರು 30 ಕಿ ಮೀವರೆಗೆ ನೀರು ಸಂಗ್ರಹವಾಗಿತ್ತು. ಅಲ್ಲದೆ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿ ಬೃಹತ್ ಪ್ರಮಾಣದ ಒಡ್ಡು ಒಡೆದಿದೆ.

ಕೃಷ್ಣೆಗೆ ಹರಿದು ಬಂದ 'ಮಹಾ' ನೀರು

ಮಹಾರಾಷ್ಟ್ರದಲ್ಲಿ ಬಿಡದೆ ಮಳೆಯಾಗುತ್ತಿದೆ. ನೆರೆಹಾವಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್​ಗೆ ನೀರು ಹರಿದು ಬರುತ್ತಿದೆ. ಇದೆ ನೀರನ್ನ ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು, ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ದಾಟಿ ಹಿಪ್ಪರಗಿ ಬ್ಯಾರೇಜ್‌ಗೆ ತಲುಪಿದೆ.

ಸದ್ಯ ಕೃಷ್ಣಾ ನದಿಯಲ್ಲಿ ಒಳ ಹರಿವಿನ ಪ್ರಮಾಣ ದಿಢೀರ್ ಹೆಚ್ಚಾಗಿದೆ. ಒಣಗಿ ಹೋಗಿದ್ದ ಹಿಪ್ಪರಗಿ ಬ್ಯಾರೇಜ್‌ಗೆ ನೀರು ತಲುಪಿದ್ದರಿಂದ ಆ ಭಾಗದ ರೈತರು ಮತ್ತು ಜನರು ನಿಟ್ಟುಸಿರು ಬಿಡುವಂತಾಗಿದೆ.

Intro:ರಾಜಾಪೂರ ಡ್ಯಾಂನ ಎಲ್ಲ ಗೇಟಗಳ‌ ಮೂಲಕ ಕೃಷ್ಣಾ ನದಿಗೆ ಹರಿದು ಬಂದ ನೀರು
Body:
ಚಿಕ್ಕೋಡಿ :

ಮಹಾರಾಷ್ಟ್ರದ ರಾಜಾಪುರ ಡ್ಯಾಂ ಬಳಿ ಹಾಕಲಾಗಿದ್ದ ಬೃಹತ್ ಮಣ್ಣಿನ ಒಡ್ಡು ಒಡೆದಿದ್ದು ಡ್ಯಾಂನ ಎಲ್ಲ ಗೇಟಗಳ‌ ಮೂಲಕ ನೀರು ಕೃಷ್ಣಾ ನದಿ ಪ್ರವೇಶಿಸುತ್ತಿದ್ದು. ಬಿಡುಗಡೆಯಾದ ನೀರಿಗೆ ಅಳತೆಯೇ ಇಲ್ಲದಂತ್ತಾಗಿದೆ.

ಮಹಾ ದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ನೆರೆಹಾವಳಿಯ ಸಾಧ್ಯತೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ರಾಜಾಪುರ ಬ್ಯಾರೇಜ್ ಗೆ ನೀರು ಹರಿದು ಬರುತ್ತಿದೆ. ಈ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದ್ದು ಈ ನೀರು ಈಗ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ದಾಟಿ ಹಿಪ್ಪರಗಿ ಬ್ಯಾರೇಜ್ ತಲುಪಿದೆ.

ರಾಜಾಪುರ ಬ್ಯಾರೇಜ್ ಬಳಿ ಹಾಕಲಾಗಿದ್ದ ಮಣ್ಣಿನ ಒಡ್ಡು ನೀರಿನ ಒತ್ತಡದಿಂದಾಗಿ ಒಡೆದು ಹೋಗಿದ್ದು ಒಟ್ಟು 64 ಗೇಟುಗಳ ಪೈಕಿ 11 ಗೇಟುಗಳಿಂದ ಮಾತ್ರ ಕೃಷ್ಣಾ ನದಿಗೆ ಬಿಡಲಾಗುತ್ತಿತ್ತು. ಉಳಿದ ಗೇಟುಗಳ ದುರಸ್ತಿ ಕಾರ್ಯ ನಡೆದಿತ್ತು. ಈ ಬ್ಯಾರೇಜಿನಿಂದ ಸುಮಾರು 30 ಕಿ.ಮೀ.ವರೆಗೆ ಮಹಾರಾಷ್ಟ್ರದ ನರಸೋವಾಡಿಯವರೆಗೂ ನೀರು ಹಿಂದೆ ಸರಿದು ನಿಂತಿತ್ತು. ಅಲ್ಲದೇ ಭಾರೀ ಮಳೆ ಸುರಿಯುತ್ತಿರುವುದರಿಂದ ಹೆಚ್ಚೆಚ್ಚು ನೀರು ಸಂಗ್ರಹವಾಗತೊಡಗಿದಾಗ ನೀರಿನ ಒತ್ತಡ ತಡೆಯಲಾರದೇ ಬೃಹತ್ ಪ್ರಮಾಣದಲ್ಲಿ ಹಾಕಿದ್ದ ಒಡ್ಡು ಒಡೆದಿದೆ.

ಸದ್ಯ ಕೃಷ್ಣಾ ನದಿಯಲ್ಲಿ ಒಳ ಹರಿವಿನ ಪ್ರಮಾಣ ಧಿಡೀರ್ ಹೆಚ್ಚಾಗಿದೆ. ಒಣಗಿ ಹೋಗಿದ್ದ ಹಿಪ್ಪರಗಿ ಬ್ಯಾರೇಜ್ ನ್ನು ನೀರು ತಲುಪಿದ್ದರಿಂದ ಆ ಭಾಗದ ರೈತರು ಮತ್ತು ಜನರು ನಿಟ್ಟುಸಿರು ಬಿಡುವಂತಾಗಿದೆ.
Conclusion:
ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.