ETV Bharat / state

ಬೆಳಗಾವಿ: ಎಣ್ಣೆ ಪಾರ್ಟಿ ಮಾಡಿದ್ದ 7 ಸಿಬ್ಬಂದಿ ಅಮಾನತು ಮಾಡಿ DHO ಆದೇಶ - ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ

ಬೆಳಗಾವಿಯ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಂಬಂಧ ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

Etv Bharat
Etv Bharat
author img

By ETV Bharat Karnataka Team

Published : Oct 12, 2023, 1:38 PM IST

ಬೆಳಗಾವಿ : ನಗರದ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಏಳು ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಬುಧವಾರ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಕಾರು ಚಾಲಕ ಮಂಜುನಾಥ ಪಾಟೀಲ್​​, ಸಿಬ್ಬಂದಿ ಮಹೇಶ ಹಿರೇಮಠ, ರಮೇಶ ನಾಯಿಕ, ಸತ್ಯಪ್ಪ ತಮ್ಮನ್ನವರ, ಅನಿಲ ತಿಪ್ಪನ್ನವರ, ದೀಪಕ ಗಾವಡೆ, ಯಲ್ಲಪ್ಪ ಮುನ್ನವಳ್ಳಿ ಎಂಬವರನ್ನು ಅಮಾನತು ಮಾಡಲಾಗಿದೆ.

ನಗರದ ಟಿಳಕವಾಡಿಯಲ್ಲಿರುವ ಡಿಹೆಚ್​​ಒ ಕಚೇರಿ ಹಿಂಭಾಗದಲ್ಲಿರುವ ಕೊಠಡಿಯಲ್ಲಿ ಗಾಂಧಿಜೀ ಫೋಟೋ ಎದುರೇ ಸಿಬ್ಬಂದಿ ಮದ್ಯಪಾನ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಆದರೆ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ವಿಡಿಯೋದಲ್ಲಿ ಸಿಬ್ಬಂದಿ ಸಾರಾಯಿ ಕುಡಿಯುತ್ತಿರುವುದು, ಸಿಗರೇಟು ಸೇದುತ್ತಿರುವುದು, ಡ್ಯಾನ್ಸ್ ಹಾಗೂ ಹರಟೆ ಹೊಡೆಯುತ್ತಿರುವುದು ಸೆರೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಡಿಎಚ್ಒ ಡಾ. ಮಹೇಶ ಕೋಣಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 7 ಸಿಬ್ಬಂದಿ ವಿರುದ್ಧ ಕ್ರಮ‌ ಕೈಗೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ್ದ ಡಿಹೆಚ್​ಒ ಡಾ. ಮಹೇಶ ಕೋಣಿ, ’’ವಿಡಿಯೋದಲ್ಲಿ ನೋಡಿದಾಗ ಮೇಲ್ನೋಟಕ್ಕೆ ನಮ್ಮ ಸಿಬ್ಬಂದಿಗಳೇ ಪಾರ್ಟಿ ಮಾಡಿರುವುದು ಕಂಡುಬಂದಿದೆ. ಇದಕ್ಕೂ ಮುಂಚೆ ಈ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಕೂಲಂಕಷವಾಗಿ ತನಿಖೆ ಮಾಡಿ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಸರ್ಕಾರಿ ಸಿಬ್ಬಂದಿಗಳು ಕಚೇರಿಯಲ್ಲಿ ಎಣ್ಣೆ ಪಾರ್ಟಿ ಮಾಡುವುದು ಸರ್ಕಾರಿ ಕರ್ತವ್ಯಕ್ಕೆ ವಿರುದ್ಧವಾಗಿದೆ. ಈ ರೀತಿ ಮಾಡಿರುವುದು ತಪ್ಪು. ಈ ವಿಡಿಯೋವನ್ನು ಪರಿಶೀಲನೆ ಮಾಡಿ ತಪ್ಪು ಕಂಡು ಬಂದಲ್ಲಿ ನಮ್ಮ ಕಚೇರಿ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುತ್ತೇನೆ‘‘ ಎಂದು ಹೇಳಿದ್ದರು.

ಇದನ್ನೂ ಓದಿ : ಬೆಳಗಾವಿಯಲ್ಲಿ ಎಣ್ಣೆ ಪಾರ್ಟಿ ವಿಡಿಯೋ ವೈರಲ್​ : ಡಿಎಚ್​ಒ ಕಚೇರಿ ಸಿಬ್ಬಂದಿಯಿಂದ ಪಾರ್ಟಿ ಆಯೋಜನೆ ಆರೋಪ

ಅತ್ತಿಬೆಲೆ ಪಟಾಕಿ ದುರಂತ ಪ್ರಕರಣ.. ತಹಶೀಲ್ದಾರ್​ ಸೇರಿ ನಾಲ್ವರು ಅಮಾನತು( ಬೆಂಗಳೂರು) : ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಪಟಾಕಿ ದುರಂತ ಸಂಬಂಧ ತಹಶೀಲ್ದಾರ್ ಸೇರಿ ನಾಲ್ವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

ಈ ಹಿಂದಿನ ತಹಶೀಲ್ದಾರ್ ಶಶಿಧರ್ ಮಡ್ಕಳ್, ಅತ್ತಿಬೆಲೆ ನಾಡ ಕಚೇರಿ ಡೆಪ್ಯುಟಿ ತಹಶೀಲ್ದಾರ್ ಶ್ರೀಧರ್ ವಿ.ಸಿ, ಅತ್ತಿಬೆಲೆಯ ಈ ಹಿಂದಿನ ವೃತ್ತ ರಾಜಸ್ವ ನಿರೀಕ್ಷಕ ಪುಷ್ಪರಾಜ್, ಗ್ರಾಮ ಆಡಳಿತಾಧಿಕಾರಿ ಭಾಗೇಶ್ ಹೊಸಮನಿ ಅಮಾನತಿಗೆ ಆದೇಶಿಸಿ, ಇಲಾಖಾ ತನಿಖೆಗೆ ಸರ್ಕಾರದ ಅಧೀನ ಕಾರ್ಯದರ್ಶಿ ಸೂಚಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.