ETV Bharat / state

ಕೃಷ್ಣಾ ನದಿಯಲ್ಲಿ ದಾರುಣ ಅಂತ್ಯ ಕಂಡ ನಾಲ್ವರು ಸಹೋದರರು.. ಗ್ರಾಮದಲ್ಲಿ ಮಡುಗಟ್ಟಿದ ಶೋಕ - brothers died in Krishna River Disaster

ಕೃಷ್ಣಾ ನದಿ ದುರಂತದಲ್ಲಿ ನಾಲ್ವರು ಸಹೋದರರು ಕೊನೆಯುಸಿರೆಳೆದಿದ್ದಾರೆ. ಮಂಗಳವಾರದಂದು ಪರಶುರಾಮ್ ಗೋಪಾಲ ಬನಸೋಡೆ (24) ಎಂಬುವರ ಮೃತದೇಹ ಪತ್ತೆಯಾಗಿತ್ತು. ಮೂರನೇ ದಿನವೂ(ಇಂದು) ಕಾರ್ಯಾಚರಣೆ ಮುಂದುವರೆಸಿದಾಗ, ಧರೇಪ್ಪ ಗೋಪಾಲ ಬನಸೋಡೆ (29), ಸದಾಶಿವ ಬನಸೋಡೆ (22), ಶಂಕರ ಗೋಪಾಲ ಬನಸೋಡೆ (20) ಅವರ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕೃಷ್ಣಾ ನದಿ ದುರಂತ
ಕೃಷ್ಣಾ ನದಿ ದುರಂತ
author img

By

Published : Jun 30, 2021, 2:51 PM IST

Updated : Jun 30, 2021, 8:51 PM IST

ಅಥಣಿ(ಬೆಳಗಾವಿ): ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣಾ ನದಿಯ ದುರಂತದಲ್ಲಿ ನಾಲ್ಕು ಜನ ಸಹೋದರರು ದಾರುಣ ಅಂತ್ಯ ಕಂಡಿದ್ದಾರೆ. ಜೂನ್​ 25ರಂದು ಗ್ರಾಮ ದೇವರ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಹೋದರರು ಹಾಸಿಗೆ ತೊಳೆಯಲು ನದಿಯಲ್ಲಿ ಇಳಿದಾಗ ಓರ್ವ ಸಹೋದರ ನೀರಿಗೆ ಬಿದ್ದಿದ್ದು, ಅವನನ್ನು ರಕ್ಷಿಸಲು ಮೂರು ಜನ ಸಹೋದರರು ಮುಂದಾಗುತ್ತಿದ್ದಂತೆ ಅವರು ಕೂಡ ಆಯತಪ್ಪಿ ನೀರುಪಾಲಾಗಿದ್ದರು. ಜಿಲ್ಲಾಡಳಿತ ಕಳೆದ 40 ಗಂಟೆಗಳಿಂದ ಹುಡುಕಾಟ ನಡೆಸಿದ್ದು, ಇಂದು ಮೂವರು ಸೇರಿದಂತೆ ಒಟ್ಟು ನಾಲ್ಕು ಜನ ಸಹೋದರರ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.

ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ನಾಲ್ವರು ಸಹೋದರರ ಪೈಕಿ ಮಂಗಳವಾರ ಓರ್ವನ ಮೃತದೇಹ ಪತ್ತೆಯಾಗಿತ್ತು. ಇಂದು ಮತ್ತೆ ಮೂವರ ಶವಗಳು ದೊರೆತಿವೆ.

ಕೃಷ್ಣಾ ನದಿಯಲ್ಲಿ ದಾರುಣ ಅಂತ್ಯ ಕಂಡ ನಾಲ್ವರು ಸಹೋದರರು

ಎನ್​ಡಿಆರ್​ಎಫ್​ ಹಾಗೂ ಸ್ಕೂಬಾ ಡೈವಿಂಗ್ ಮತ್ತು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಸತತ ಹುಡುಕಾಟ ನಡೆಸಿದ್ದು, ಮಂಗಳವಾರದಂದು ಪರಶುರಾಮ್ ಗೋಪಾಲ ಬನಸೋಡೆ (24) ಎಂಬುವರ ಶವ ಪತ್ತೆಯಾಗಿತ್ತು. ಮೂರನೇ ದಿನವೂ(ಇಂದು) ಕಾರ್ಯಾಚರಣೆ ಮುಂದುವರೆಸಿದಾಗ ಮೂವರ ಮೃತದೇಹಗಳು ಪತ್ತೆಯಾಗಿವೆ. ಅವರನ್ನು ಧರೇಪ್ಪ ಗೋಪಾಲ ಬನಸೋಡೆ (29), ಸದಾಶಿವ ಬನಸೋಡೆ (22), ಶಂಕರ ಗೋಪಾಲ ಬನಸೋಡೆ (20) ಸಹೋದರರು ಎಂದು ಗುರುತಿಸಲಾಗಿದೆ. ನಾಲ್ವರು ಮಕ್ಕಳನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಈ ಘಟನೆಯಿಂದ ನೀರವ ಮೌನ ಆವರಿಸಿದೆ.

ಪರಿಹಾರಕ್ಕೆ ಗ್ರಾಮಸ್ಥರು ಪಟ್ಟು:

ಕೃಷ್ಣಾ ನದಿಯಲ್ಲಿ ಧಾರುಣ ಅಂತ್ಯ ಕಂಡ ಸಹೋದರರಿಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪರಿಹಾರಕ್ಕೆ ಆಗ್ರಹಿಸಿದ ಗ್ರಾಮಸ್ಥರು ಶವ ಸಂಸ್ಕಾರ ನಡೆಸುವುದಿಲ್ಲ ಎಂದು ಮರಣೋತ್ತರ ಪರೀಕ್ಷೆ ಎದುರಿಗೆ ಪ್ರತಿಭಟನೆ ನಡೆಸಿದರು.

ಪರಿಹಾರ ಕೊಡಿಸುವುದಾಗಿ ಮಹೇಶ ಕುಮಟಳ್ಳಿ ಭರವಸೆ

ನಂತರ ಶಾಸಕ ಮಹೇಶ್​ ಕುಮಟಳ್ಳಿ ದೂರವಾಣಿ ಮೂಲಕ ಮಾತನಾಡಿ, 15 ದಿನಗಳ ಕಾಲಾವಕಾಶ ನೀಡಿ. ಅಷ್ಟರಲ್ಲಿ ಮುಖ್ಯಮಂತ್ರಿ ಪರಿಹಾರ‌ ನಿಧಿಯಿಂದ ಪರಿಹಾರ ಕಲ್ಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಶವ ಸಂಸ್ಕಾರಕ್ಕೆ ಒಪ್ಪಿಗೆ ನೀಡಿದರು.

ಇದನ್ನೂ ಓದಿ: ಅಥಣಿ: ಕೃಷ್ಣಾ ನದಿ ನೀರು ಪಾಲಾಗಿದ್ದ ಮೂವರ ಶವಗಳು ಪತ್ತೆ

Last Updated : Jun 30, 2021, 8:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.