ಚಿಕ್ಕೋಡಿ: ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಎಸ್.ಎಸ್.ಬಾನೆ ತಿಳಿಸಿದ್ದಾರೆ.
ಬಾವನಸೌಂದತ್ತಿ ಗ್ರಾಮ ಮಹಾರಾಷ್ಟ್ರದ ನಂಟು ಹೊಂದಿದ್ದು, ಇದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ 128 ಜನರ ಕೊರೊನಾ ತಪಾಸಣೆ ಮಾಡಲಾಗಿತ್ತು. ಭಾನುವಾರ 190 ಜನರ ತಪಾಸಣೆ ಮಾಡಲಾಗಿತ್ತು. ಇಂದು 150 ಜನರ ಕೊರೊನಾ ತಪಾಸಣೆ ಮಾಡಲಾಗಿದೆ. ಇಂದು ಒಂದೇ ಕುಟುಂಬದ ಮೂವರಿಗೆ ಸೋಂಕು ದೃಢವಾದ ಹಿನ್ನೆಲೆ ಸುತ್ತಮುತ್ತಲು ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.
ಓದಿ: ಭೂ ಕಬಳಿಕೆ ಮಟ್ಟ ಹಾಕಲು ಕಠಿಣ ಕಾನೂನು ತರಲು ನಾನು ಸಿದ್ಧನಿದ್ದೇನೆ: ಸಚಿವ ಆರ್.ಅಶೋಕ್
ಆರೋಗ್ಯ ಇಲಾಖೆ ಬಾವನಸೌಂದತ್ತಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆ ಕೊವೀಡ್ ತಪಾಸಣೆ ಮಾಡುತ್ತಿದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.