ಚಿಕ್ಕೋಡಿ : ಕೊರೊನಾ ಮಹಾಮಾರಿ ಎರಡನೇ ಅಲೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ 22 ಜನ ಶಿಕ್ಷಕರು ಬಲಿಯಾಗಿದ್ದಾರೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
![22-teachers-killed-in-chikkodi](https://etvbharatimages.akamaized.net/etvbharat/prod-images/kn-ckd-3-corona-2ne-alege-22-shikshakaru-bali-script-ka10023_15052021164742_1505f_1621077462_375.jpg)
ಕಳೆದ ಬಾರಿ ಕೊರೊನಾ ಮಹಾಮಾರಿಗೆ 18 ಜನ ಶಿಕ್ಷಕರು ಬಲಿಯಾಗಿದ್ದು, ಎರಡನೇ ಅಲೆಯಲ್ಲಿ ಕೇವಲ ಹದಿನೈದು ದಿನಗಳಲ್ಲಿ 22 ಜನ ಶಿಕ್ಷಕರು ಮೃತಪಟ್ಟಿದ್ದಾರೆ.
ಈ ಪೈಕಿ 18 ಜನ ಸರ್ಕಾರಿ ಮತ್ತು ನಾಲ್ವರು ಅನುದಾನಿತ ಶಾಲೆಯ ಶಿಕ್ಷಕರಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಈವರೆಗೆ ಕೊರೊನಾಗೆ ಒಟ್ಟು 40 ಜನ ಶಿಕ್ಷಕರು ಬಲಿಯಾದಂತಾಗಿದೆ.