ಚಿಕ್ಕೋಡಿ (ಬೆಳಗಾವಿ): ಗೋವಾದಿಂದ ಅಕ್ರಮವಾಗಿ ಸುಮಾರು 6,22,300 ರೂಪಾಯಿ ಬೆಲೆ ಬಾಳುವ ಮದ್ಯ ಸಾಗಿಸುವ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೋವಾದಿಂದ ನಿಪ್ಪಾಣಿ ಕಡೆಗೆ ಲಾರಿಯಲ್ಲಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಳಗಾವಿ ಜಿಲ್ಲಾ ಸಿಇಎನ್ ಕ್ರೈಂ ಪೊಲೀಸರು ಯಮಕನಮರಡಿ ಪೊಲೀಸ್ ಸರಹದ್ದಿನಲ್ಲಿ ವಶಕ್ಕೆ ಪಡೆದಿದ್ದಾರೆ. ಹುಕ್ಕೇರಿ ತಾಲೂಕಿನ ಎನ್‌ಎಚ್-4 ರಸ್ತೆ ಮೆಣಗತ್ತಿ ಕ್ರಾಸ್ ಬಳಿ ಒಟ್ಟು 6,22,300 ಬೆಲೆ ಬಾಳುವ 173 ಬಾಕ್ಸ್ನಲ್ಲಿ ತುಂಬಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ.
ಘಟನೆ ಸಂಬಧ ಓರ್ವನನ್ನು ಬಂಧಿಸಲಾಗಿದ್ದು, ಆತನನ್ನು ಬೆಳಗಾವಿ ಜಿಲ್ಲೆಯ ಹೊನಗಾ ಗ್ರಾಮದ ಜನತಾ ಪ್ಲಾಟ್ನ ನಿವಾಸಿ ಶಕೀಲ ಕಾಸೀಮಸಾಬ ಶೇಖ (34) ಎಂದು ಗುರುತಿಸಲಾಗಿದೆ. ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.