ಚಿಕ್ಕೋಡಿ (ಬೆಳಗಾವಿ): ಕೊರೊನಾ ಲಾಕ್ಡೌನ್ ಸಮಯದಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಿದ್ದ ಕಾಲದಲ್ಲಿ ವಿದ್ಯಾರ್ಥಿಗಳು ಖಾಲಿ ಕುಳಿತ್ತಿದ್ದರು. ಆದರೆ, ಈ ಸಮಯದಲ್ಲಿ ಗುಜರಿ ವಸ್ತುಗಳ ಸಹಾಯದಿಂದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಎಲೆಕ್ಟ್ರಿಕ್ ಬೈಕ್ ತಯಾರಿಸಿ ಗಮನ ಸೆಳೆದಿದ್ದಾನೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ 10ನೇ ತರಗತಿ ಓದುತ್ತಿರುವ ಪ್ರಥಮೇಶ್ ಸುತಾರ ಕೊರೊನ ಲಾಕ್ಡೌನ್ ವೇಳೆ ಸಮಯವನ್ನು ವ್ಯರ್ಥ ಮಾಡದೇ ಅತಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಚಾರ್ಜಿಂಗ್ನಿಂದ ಬೈಕ್ವೊಂದನ್ನು ಮನೆಯಲ್ಲಿಯೆ ತಯಾರಿಸಿದ್ದಾನೆ.
ಕುಟುಂಬಸ್ಥರ ಸಹಕಾರದಿಂದ ಹಳೆಯ ನಿರುಪಯುಕ್ತ ಬೈಕ್ ಬಿಡಿ ಭಾಗಗಳನ್ನು ಉಪಯೋಗಿಸಿ ಅವುಗಳಿಗೆ 48 ವೋಲ್ಟ್ ಬ್ಯಾಟರಿ, 48 ವೋಲ್ಟ್ ಮೋಟಾರ್, 750 ವ್ಯಾಟ್ ಸಾಮರ್ಥ್ಯದ ಮೋಟರ್ ಬಳಕೆ ಮಾಡಿ, ಮೋಟಾರ್ ಮತ್ತು ಬ್ಯಾಟರಿ ನಿಯಂತ್ರಣ ಯಂತ್ರ ಬಳಸಿ 25 ಸಾವಿರ ವೆಚ್ಚದಲ್ಲಿ ಬೈಕ್ ತಯಾರಿಸಿ ಸಾಧನೆ ಮಾಡಿದ್ದಾನೆ.
ಈಗ ಈ ಬೈಕ್ ತಯಾರಿಸಿದ ಪ್ರಥಮೇಶ್ ತನ್ನ ದಿನನಿತ್ಯದ ಕೆಲಸಗಳಿಗೆ ಈ ಬೈಕ್ ಉಪಯೋಗಿಸಲು ಸಹಕಾರಿಯಾಗಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಪಾರಾಗಲು ವಿದ್ಯುತ್ ಚಾಲಿತ ಬೈಕ್ಗಳ ಅವಶ್ಯಕತೆಯಿದ್ದು. ಈ ಎಲೆಕ್ಟ್ರಿಕಲ್ ಬೈಕ್ ತಯಾರಿಸಲಾಗಿದೆ ಎಂದಿದ್ದಾನೆ.
ಇನ್ನು ಈ ಎಲೆಕ್ಟ್ರಿಕಲ್ ಬೈಕ್ ಒಮ್ಮೆ ಫುಲ್ ಚಾರ್ಜಿಂಗ್ ಮಾಡಿದರೆ ಸುಮಾರು 35 ಕಿ.ಮೀ ಸಂಚರಿಸುತ್ತದೆ ಹಾಗೂ ಗಂಟೆಗೆ 40 ಕಿ.ಮೀ ವೇಗದಲ್ಲಿ ಓಡುವ ಈ ಬೈಕ್ನ ವಿಶೇಷ ಎಂದರೆ ರಿವರ್ಸ್ ಕೂಡ ಚಲಿಸುತ್ತದೆ.
ಪ್ರಥಮೇಶ್ನ ಈ ಸಾಧನೆಗೆ ಕುಟುಂಬಸ್ಥರು ಸಹಕಾರ ನೀಡಿದ್ದಾರೆ. ಇವರ ತಂದೆ ಪ್ರಕಾಶ ಸುತಾರ ಅವರು ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಾರೆ. ಕೊರೊನಾ ಲಾಕ್ಡೌನ್ ವೇಳೆ ತಮ್ಮ ಮಗ ಈ ಎಲೆಕ್ಟ್ರಿಕಲ್ ಬೈಕ್ ತಯಾರಿಸಿದ್ದು, ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿ, ಮಗನನ್ನು ಇಂಜಿನಿಯರಿಂಗ್ ಕಲಿಸಲು ಆಸಕ್ತಿ ಹೊಂದಿದ್ದಾರೆ.
ಇದನ್ನೂ ಓದಿ: ಸಿನಿಮೀಯ ಶೈಲಿಯಲ್ಲಿ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು: ಹಲವರಿಗೆ ಗಾಯ, ದವಸ-ಧಾನ್ಯ ಭಸ್ಮ