ETV Bharat / state

ಕೊರೊನಾ ಸೋಂಕಿತರಿಗೆ ಉಚಿತ ಊಟ.. ಹಸಿವು ನೀಗಿಸುವ ಯುವ ಬ್ರಿಗೇಡ್ ಕಾರ್ಯಕ್ಕೆ ಸಲಾಂ - ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಊಟ ನೀಡುತ್ತಿರುವ ಯುವ ಬ್ರಿಗೇಡ್ ಸುದ್ದಿ

ಕೊರೊನಾ ದೃಢಪಟ್ಟು ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಬೆಂಗಳೂರಲ್ಲಿ ಯುವ ಬ್ರಿಗೇಡ್​ ಸಹಾಯ ಹಸ್ತ ಚಾಚಿದೆ. ಯುವ ಬ್ರಿಗೇಡ್​ನ 16 ಕಾರ್ಯಕರ್ತರು ಬೈಕ್‌ಗಳಲ್ಲಿ ಮನೆ ಮನೆಗೆ ತೆರಳಿ ಊಟ ವಿತರಿಸುತ್ತಿದ್ದಾರೆ.

Yuva brigade distributing free meal for covid patients
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಊಟ ನೀಡುತ್ತಿರುವ ಯುವ ಬ್ರಿಗೇಡ್
author img

By

Published : May 8, 2021, 7:16 AM IST

ಬೆಂಗಳೂರು: ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಅದೆಷ್ಟೋ ಜನ ಸೋಂಕಿತರಿಗೆ ಉಪಚರಿಸುವವರಿಲ್ಲದೇ ಒದ್ದಾಡುತ್ತಿದ್ದಾರೆ. ಮನೆಯಲ್ಲಿ ಒಂಟಿಯಾಗಿರುವ ಕೆಲವು ಜನ ಕೋವಿಡ್​ ಸೋಂಕಿಗೆ ತುತ್ತಾಗಿದ್ದಾರೆ. ಹೀಗೆ ಕೊರೊನಾ ದೃಢಪಟ್ಟು ಅಡುಗೆ ಮಾಡಿಕೊಳ್ಳಲು ಸಾಧ್ಯವಾಗದವರಿಗೆ ಯುವ ಬ್ರಿಗೇಡ್​ ಸಹಾಯ ಹಸ್ತ ಚಾಚಿದೆ. ಈ ಬಗ್ಗೆ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿಶೇಷ ವಿಡಿಯೋ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಊಟ ನೀಡುತ್ತಿರುವ ಯುವ ಬ್ರಿಗೇಡ್

ರಾಜಧಾನಿಯ ಜಯನಗರ, ಗಿರಿನಗರ, ಬಸವನಗುಡಿ, ಬನಶಂಕರಿ ಪ್ರದೇಶಗಳಲ್ಲಿ ಪ್ರತಿ ಮಧ್ಯಾಹ್ನ 250 ಜನರಿಗೆ ಊಟ ಒದಗಿಸಲಾಗುತ್ತಿದೆ. ಬಿಎನ್‌ಎಮ್‌ಐಟಿ ಮತ್ತು ಸ್ವಾಮಿ ವಿವೇಕಾನಂದ ಶೇಷ್ಠ ಭಾರತ ಸಹಯೋಗದಲ್ಲಿ ಈ ಕೆಲಸ ನೆಡೆಯುತ್ತಿದ್ದು, ಯುವ ಬ್ರಿಗೇಡ್​ನ 16 ಕಾರ್ಯಕರ್ತರು ಬೈಕ್‌ಗಳಲ್ಲಿ ಮನೆ ಮನೆಗೆ ತೆರಳಿ ಊಟ ವಿತರಿಸುತ್ತಿದ್ದಾರೆ. ಹುಬ್ಬಳ್ಳಿ -ಧಾರವಾಡದಲ್ಲೂ ಈ ಸೇವೆ ಇತ್ತೀಚೆಗೆ ಆರಂಭಗೊಂಡಿದೆ.

ಇದನ್ನೂ ಓದಿ: ಮಂಡ್ಯದಲ್ಲಿ 1,110 ಜನರಿಗೆ ಕೋವಿಡ್ ಪಾಸಿಟಿವ್ : 11 ಮಂದಿ ಮಹಾಮಾರಿಗೆ ಬಲಿ

"ತೀವ್ರ ಬಳಲಿಕೆ ಇರುವವರಿಗೆ ವಿಶ್ರಾಂತಿ ಅಗತ್ಯ. ಈ ಹೊತ್ತಲ್ಲಿ ರುಚಿ-ಶುಚಿಯಾದ ಊಟ ಅವರಿರುವಲ್ಲಿಗೆಯೇ ತಲುಪಿಸಿಬಿಟ್ಟರೆ, ಸೋಂಕಿತರಿಗೆ ದೊಡ್ಡ ಹೊರೆ ಕಡಿಮೆಯಾದಂತೆ. ಆದ್ದರಿಂದ ಎಲ್ಲ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಲೇ ಈ ಕೆಲಸ ಮಾಡುತ್ತಿದ್ದು, ವಿಶಿಷ್ಟ ಬಗೆಯ ತೃಪ್ತಿಯನ್ನು ನೀಡಿದೆ" ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಮೈಸೂರಿನಲ್ಲಿ ಜಿಲ್ಲಾಡಳಿತ ನಡೆಸುತ್ತಿರುವ ವಾರ್ ರೂಮ್‌ನಲ್ಲಿ ಕೂಡ ಯುವಾ ಬ್ರಿಗೇಡ್ ಕಾರ್ಯಕರ್ತರು ರಾತ್ರಿ ಪಾಳಿಯಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಹಾವೇರಿ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕಿತರ ಹಸಿವು ನೀಗಿಸುತ್ತಿರುವ ಯುವ ಬ್ರಿಗೇಡ್​ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.