ETV Bharat / state

ಗುರಾಯಿಸಿದ್ದಕ್ಕೆ ಲಾಂಗ್ ಬೀಸಿದ ಪುಂಡರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಈಟಿವಿ ಭಾರತ ಕನ್ನಡ

ಗುರಾಯಿಸಿದನೆಂದು ಯುವಕನಿಗೆ ಲಾಂಗ್​ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

youth-attacked-by-miscreants-in-bengaluru
ಗುರಾಯಿಸಿದ್ದಕ್ಕೆ ಲಾಂಗ್ ಬೀಸಿದ ಪುಂಡರು : ಸಿಸಿಟಿವಿಯಲ್ಲಿ ದೃಶ್ಯ ಸೆರೆ
author img

By

Published : Nov 11, 2022, 8:12 PM IST

ಬೆಂಗಳೂರು : ಗುರಾಯಿಸಿದ ಎಂಬ ಕಾರಣಕ್ಕೆ ಯುವಕನಿಗೆ ಲಾಂಗ್​ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂದೀಪ್​ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಯೇಸುದಾಸ್​, ಮನೋಜ್​ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಗುರಾಯಿಸಿದ್ದಕ್ಕೆ ಲಾಂಗ್ ಬೀಸಿದ ಪುಂಡರು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಲ್ಲೆಗೊಳಗಾದ ಸಂದೀಪ್​ ಎಸ್ಎಲ್​ವಿ ಪಾರ್ಟಿ ಹಾಲ್ ಬಳಿ ನ.8ರಂದು ರಾತ್ರಿ ಗೆಳೆಯರ ಜೊತೆ ಮಾತನಾಡುತ್ತಾ ನಿಂತಿದ್ದ. ಈ ಸಂದರ್ಭ ಏಕಾಏಕಿ ದ್ವಿಚಕ್ರ ವಾಹನದಲ್ಲಿ ಬಂದ ಯೇಸುದಾಸ್ ಹಾಗೂ ಮನೋಜ್ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಸಂದೀಪ್​ನ ಕಾಲು ಮತ್ತು ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಈ ವೇಳೆ, ಆಂಬ್ಯುಲೆನ್ಸ್​ಗೆ ಕರೆ ಮಾಡಿದ್ದು ಆಂಬ್ಯುಲೆನ್ಸ್ ಲಭ್ಯವಾಗಿಲ್ಲ. ಬಳಿಕ ಸಂದೀಪ್​ನ ಸಹೋದರ ಆಟೋದಲ್ಲಿ ಕೊಂಡೊಯ್ದು ಸಂದೀಪ್​ನನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು,ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬೆಳಗಾವಿಯಲ್ಲಿ ಕುಖ್ಯಾತ ಅಂತಾರಾಜ್ಯ ಮನೆಗಳ್ಳರ ಬಂಧನ : ಒಂದು ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.