ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಒಂದೇ ಏರಿಯಾದ ಯುವಕರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ನಿನ್ನೆ ಸಂಜೆ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಮೃತನನ್ನು 19 ವರ್ಷದ ಥಾಮಸ್ ಎಂದು ಗುರುತಿಸಲಾಗಿದೆ.
ಕೆಲ ಯುವಕರು ಪ್ರತಿನಿತ್ಯ ಥಾಮಸ್ ಮನೆ ಬಳಿ ಬಂದು ವ್ಹೀಲಿಂಗ್, ಗಲಾಟೆ ಮಾಡುತ್ತಿದ್ದರು. ಮನೆ ಬಳಿ ವ್ಹೀಲಿಂಗ್ ಮತ್ತು ಗಲಾಟೆ ಮಾಡ್ಬೇಡಿ ಎಂದು ಥಾಮಸ್ ತಿಳಿ ಹೇಳಿದ್ದ. ಇದೇ ಕಾರಣಕ್ಕೆ ಸಿಟ್ಟಿಗೆದ್ದ ಆರೋಪಿಗಳು, ನಿನ್ನೆ ಸಂಜೆ ಪೈಪ್ ಲೈನ್ ರಸ್ತೆಯ ಚರ್ಚ್ ಬಳಿ ಕುಳಿತಿದ್ದ ಥಾಮಸ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಮನಬಂದಂತೆ ಥಳಿಸಿ ಆತನ ಎದೆ ಮತ್ತು ಪಕ್ಕೆಲುಬಿಗೆ ಚಾಕು ಇರಿದಿದ್ದರು.
ಓದಿ: ಚುನಾವಣೆ ಜಯಭೇರಿ ಬಳಿಕ ತಾಯಿ ಆಶೀರ್ವಾದ ಪಡೆದು ಜೊತೆಗೆ ಉಪಹಾರ ಸೇವಿಸಿದ ಮೋದಿ
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಥಾಮಸ್‌ನನ್ನ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರಾದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಥಾಮಸ್ ಮೃತಪಟ್ಟಿದ್ದಾನೆ. ಘಟನೆಯ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು, ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.