ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಕೂಡ ಮಳೆ ಸುರಿದಿದ್ದು, ಸಂಜೆಯ ವೇಳೆಗೆ ಭಾರಿ ಪ್ರಮಾಣದಲ್ಲಿ ವರುಣನ ಆರ್ಭಟ ಮುಂದುವರಿಯಲಿದೆ.
ಬಂಗಾಳ ಉಪಸಾಗರದ ಸಮುದ್ರದಲ್ಲಿ ಪ್ರತ್ಯೇಕ ಎರಡು ಕಡೆ ತೀವ್ರವಾಗಿ ಸುಳಿಗಾಳಿ ಉಂಟಾಗಿರುವ ಹಿನ್ನೆಲೆ ಅಕ್ಟೋಬರ್ 13ರವರೆಗೂ ರಾಜ್ಯದೆಲ್ಲೆಡೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಮನಗರ ಹೊರತುಪಡಿಸಿ ಯೆಲ್ಲೋ ಅಲರ್ಟ್:
ಇಂದು ಮತ್ತೆ ನಾಳೆ ರಾಮನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ಉತ್ತರ, ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಮತ್ತು ಗಾಳಿ ಸಹಿತ ಧಾರಾಕಾರ ಮಳೆ ಸುರಿಯಲಿದೆ. ಅಕ್ಟೋಬರ್ 12 ಮತ್ತು 13ರಂದು ಮಳೆ ಪ್ರಮಾಣ ತುಸು ಕಡಿಮೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.