ETV Bharat / state

ಬಿಎಸ್‌ವೈಗೆ ಬಲಭಾಗದ ಪುಷ್ಪಹಾರದ ವರಪ್ರಸಾದ ನೀಡಿದ ಗವಿಗಂಗಾಧರೇಶ್ವರ! - undefined

ಗವಿಗಂಗಾಧರೇಶ್ವರ ದೇಗುಲದಲ್ಲಿ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾರುದ್ರಯಾಗ ಪೂಜೆ ನೆರವೇರಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ
author img

By

Published : Jul 17, 2019, 11:35 AM IST

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಮಾಡಿಸಿದ್ದು,ಪೂಜಾ ವೇಳೆ ದೇವರ ಭಾಗದ ಪುಷ್ಪಮಾಲೆ ಕೆಳಗೆ ಜಾರಿದ್ದು ಬಿಎಸ್ವೈ ಇಷ್ಟಾರ್ಥಕ್ಕೆ ದೈವಬಲ ಸಿಕ್ಕಿದೆ ಎನ್ನಲಾಗುತ್ತಿದೆ.

ಗವಿಗಂಗಾಧರೇಶ್ವರ ದೇಗುಲದ ಮಹಾರುದ್ರಯಾಗದಲ್ಲಿ ಪಾಲ್ಗೊಂಡ ಬಿಎಸ್ವೈ

ಗವಿಗಂಗಾಧರ ದೇಗುಲದಲ್ಲಿ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾರುದ್ರಯಾಗ ಮಾಡಿಸಿದರು. ಸಂಕಲ್ಪ ತೊಟ್ಟು ದೇವರಿಗೆ ಪೂರ್ಣಾಹುತಿ ಅರ್ಪಿಸಿದರು. ಬಿಎಸ್ವೈ ಗೆ ಪುತ್ರಿ ಪದ್ಮಾವತಿ, ಸೊಸೆ ಪ್ರೇಮಾ, ಮೊಮ್ಮಗ, ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ರವಿಸುಬ್ರಮಣ್ಯ ಸಾಥ್ ನೀಡಿದ್ದಾರೆ.

Intro:

ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಮಾಡಿಸಿದ್ದು,ಪೂಜಾ ವೇಳೆ ದೇವರ ಭಾಗದ ಪುಷ್ಪಮಾಲೆ ಕೆಳಗೆ ಜಾರಿದ್ದು ಬಿಎಸ್ವೈ ಇಷ್ಟಾರ್ಥಕ್ಕೆ ದೈವಬಲ ಸಿಕ್ಕಿದೆ ಎನ್ನಲಾಗುತ್ತಿದೆ.

ಗವಿಗಂಗಾಧರ ದೇಗುಲದಲ್ಲಿ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾರುದ್ರಯಾಗ ಮಾಡಿಸಿದರು.ಸಂಕಲ್ಪ ತೊಟ್ಟು ಪೂರ್ಣಾಹುತಿ ನೀಡಿದರು.ಬಿಎಸ್ವೈ ಗೆ ಪುತ್ರಿ ಪದ್ಮಾವತಿ,ಸೊಸೆ ಪ್ರೇಮಾ, ಮೊಮ್ಮಗ, ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ರವಿಸುಬ್ರಮಣ್ಯ ಸಾತ್ ನೀಡಿದರು.

ನಂತರ ಗವಿ ಗಂಗಾಧರೇಶ್ವರ ಸ್ವಾಮಿಗೆ ಬಿಎಸ್ವೈ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಈ ವೇಳೆ ಗಂಗಾಧರ ಸ್ವಾಮಿಯ ಮೇಲೆ ಮುಡಿಸಲಾಗಿದ್ದು ಪುಷ್ಪಗಳಲ್ಲಿನ ಹಾರವೊಂದು ಬಲಭಾಗದ ಕಡೆಗೆ ಜಾರಿ ಕೆಳಗಡೆ ಬಿದ್ದಿತು.ಇದು ಶುಭ ಶಕುನ, ಈ ವೇಳೆ ಅಂದುಕೊಂಡ ಇಷ್ಟಾರ್ಥ ನೆರವೇರಲಿದೆ, ಬೇಡಿಕೊಂಡಿದ್ದಕ್ಕೆ ಅಸ್ತು ಎನ್ನುವ ಸಂದೇಶ ಎಂದು ನಂಬಲಾಗುತ್ತಿದ್ದು ಯಡಿಯೂರಪ್ಪ ಗೆ ದೈವ ಬಲ ಇದೆ ದೇವರ ವರ ಸಿಕ್ಕಿದೆ ಎನ್ನಲಾಗುತ್ತಿದೆ.

ಪೂಜೆ ಬಳಿಕ ಮಾತನಾಡಿದ ಯಡಿಯೂರಪ್ಪ,ದೇವರ ದರ್ಶನ, ಹೋಮ, ಪೂಜೆ ಮಾಡಿ ರೆಸಾರ್ಟ್ ಗೆ ಹೋಗ್ತಿದ್ದೇನೆ, ಸುಪ್ರೀಂ ಕೋರ್ಟ್ ತೀರ್ಪಿಗೆ ಎಲ್ರೂ ಕಾಯ್ತಿದಾರೆ, ಈ ಆದೇಶ ರಾಜೀನಾಮೆ ಕೊಟ್ಟಿರೋ ಯಾವ ಶಾಸಕರಿಗೂ ತೊಂದರೆಯಾಗಲ್ಲ ಎನ್ನುವ ಭರವಸೆ ಇದೆ, ನಾಳೆ ನೂರಕ್ಕೆ ನೂರರಷ್ಟು ನಮಗೆ ಬಹುಮತ ನಿಶ್ಚಿತವಾಗಿ ಸಿಗುತ್ತದೆ, ಅವರಿಗೆ ಹಿನ್ನೆಡೆ ಆಗುತ್ತದೆ ,ನಾಳೆಯೇ ಅವರೆಲ್ಲಾ ರಾಜೀನಾಮೆ ಕೊಡುಬ ಪ್ರಸಂಗ ಬರುತ್ತದೆ ಅದಕ್ಕೆ ಸ್ವಾಮಿಯ ಆಶೀರ್ವಾದ ಪಡೆಯಲು ಬಂದೆ ಎಂದರು.Body:.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.