ETV Bharat / state

ಬಿಎಸ್​​ವೈ ನಿವಾಸದಲ್ಲಿ ದೀಪಾವಳಿ ಸಂಭ್ರಮ: ಗೋ ಪೂಜೆ ನೆರವೇರಿಸಿದ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋವಿಗೆ ಪೂಜೆ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು.

Yeddiyurappa performed cow Pooja
ಗೋ ಪೂಜೆ ನೆರವೇರಿಸಿದ ಯಡಿಯೂರಪ್ಪ
author img

By

Published : Oct 26, 2022, 12:10 PM IST

ಬೆಂಗಳೂರು: ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತಿದೆ. ರಾಜ್ಯ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಳಿ ವಯಸ್ಸಿನಲ್ಲೂ ಅತ್ಯಂತ ಉತ್ಸಾಹದಿಂದ ಬಿಎಸ್​ವೈ ಗೋ ಪೂಜೆ ನೆರವೇರಿಸಿ ಬೆಳಕಿನ ಹಬ್ಬವನ್ನು ಸಂಭ್ರಮಿಸಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಸ್ವತಃ ಯಡಿಯೂರಪ್ಪ ಅವರೇ ಗೋಪೂಜೆ ಮಾಡಿದರು.

ಗೋ ಪೂಜೆ ನೆರವೇರಿಸಿದ ಯಡಿಯೂರಪ್ಪ

ಮುಖ್ಯಮಂತ್ರಿ ಆಗಿದ್ದಾಗ ಉಡುಗೊರೆಯಾಗಿ ಪಡೆದಿದ್ದ ಗಿರ್ ತಳಿಯ ಹಸುಗಳನ್ನು ಸಾಕುತ್ತಿರುವ ಯಡಿಯೂರಪ್ಪ ಹಸು, ಕರು ಜೊತೆ ಕಾಲ ಕಳೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಅಂತೆಯೇ ನೆಚ್ಚಿನ ಹಸು ಕರುಗಳಿಗೆ ಗೋಪೂಜೆ ಸಲ್ಲಿಸಿ ಧಾನ್ಯಗಳನ್ನು ತಿನ್ನಿಸಿ ಭಕ್ತಿ ಸಮರ್ಪಿಸಿದರು. ಬಲಿಪಾಡ್ಯಮಿ ದಿನದಂದು ಗೋ ಪೂಜೆ ನೆರವೇರಿಸುವುದು ಸಂಪ್ರದಾಯವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಯಡಿಯೂರಪ್ಪ ಗೋ ಪೂಜೆ ನೆರವೇರಿಸಿದರು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೇರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್​ವೈ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.