ನೆಲಮಂಗಲ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಯಶವಂತಪುರ ಮಾರುಕಟ್ಟೆಯಿಂದ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಸಗಟು ವ್ಯಾಪಾರವನ್ನು, ಮಾರ್ಚ್ 30 ರಿಂದ ನೆಲಮಂಗಲ ಸಮೀಪದ ದಾಸನಪುರ ಮಾರುಕಟ್ಟೆಗೆ ವರ್ಗಾಯಿಸಲಾಗಿದೆ.
ಆದರೆ, ಕೆಲ ಕಿಡಿಗೇಡಿಗಳು ದಾಸನಪುರ ಉಪ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಂದ್ ಆಗಿದೆ ಎಂದು ಸುಳ್ಳುವದಂತಿ ಹಬ್ಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು, ವರ್ತಕರು ರೈತರು, ಗ್ರಾಹಕರಿಗೆ ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕೃಷಿ ಮಾರಾಟ ಇಲಾಖೆಯ ನಿದೇರ್ಶಕ ಕರೀಗೌಡ ಎಚ್ಚರಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಪಿಎಂಸಿ ನಿದೇರ್ಶಕ ಕರೀಗೌಡ ಸುಮಾರು 62 ಎಕರೆ ವಿಸ್ತೀರ್ಣ ಉಳ್ಳ ದಾಸನಪುರ ಉಪ ಮಾರುಕಟ್ಟೆ ಅತಿ ದೊಡ್ಡದಾಗಿದೆ, ಕೊರೊನಾ ಮಹಾಮಾರಿ ತಡೆಯಲು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಅತಿ ಮುಖ್ಯ ಈ ಹಿನ್ನೆಲೆಯಲ್ಲಿ ದಾಸನಪುರ ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರು, ಗೋದಾಮುಗಳು, ಮಳಿಗೆಗಳು, ಹರಾಜುಕಟ್ಟೆಗಳು, ವಿದ್ಯುತ್ ಸೌಕರ್ಯ ಒದಗಿಸಿದ್ದೇವೆ. ಎಲ್ಲ ಮೂಲ ಸೌಲಭ್ಯ ಒದಗಿಸಿದ್ದೇವೆ, ರೈತರು, ವರ್ತಕರು, ಮತ್ತು ಯಾವುದೇ ಗೊಂದಲಿವಿಲ್ಲದೇ ಮಾರಾಟ ಮಾಡಬಹುದು ಎಂದು ಕರೀಗೌಡ ತಿಳಿಸಿದ್ಧಾರೆ.