ETV Bharat / state

ಯಶಸ್ವಿನಿ ಯೋಜನೆ ಸದಸ್ಯತ್ವ ನೋಂದಣಿ ಅವಧಿ ಮಾರ್ಚ್ 31ರ ವರೆಗೆ ವಿಸ್ತರಣೆ

ರೈತ ಸಮುದಾಯಕ್ಕೆ ಅನುಕೂಲವಾಗಿರುವ ಯಶಸ್ವಿನಿ ಯೋಜನೆಯ ಸದಸ್ಯತ್ವ ನೋಂದಣಿ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ.

yashaswini yojana
ಯಶಸ್ವಿನಿ ಯೋಜನೆ
author img

By

Published : Mar 9, 2023, 10:58 AM IST

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ'ಗೆ ಹೊಸ ಸದಸ್ಯರ ನೋಂದಾಯಿಸುವ ಅವಧಿಯನ್ನು ಮಾ.31ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯ ನೋಂದಣಿ ದಿನಾಂಕವನ್ನು ಸರ್ಕಾರ ಇದೀಗ ಮತ್ತೆ ವಿಸ್ತರಿಸಿದೆ. ಈ ಮುನ್ನ ಡಿ.31ರ ವರೆಗೆ ಇದ್ದ ಅವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು.

ಫೆಬ್ರವರಿ 28ಕ್ಕೆ ಸದಸ್ಯತ್ವ ನೋಂದಣಿಗೆ ಕೊನೆಯ ದಿನವಾಗಿತ್ತು. ಅರ್ಹ ಎಲ್ಲಾ ಸದಸ್ಯರು ಹೆಸರು ನೋಂದಾಯಿಸಲು ಮುಂದಾಗುತ್ತಿರುವ ಕಾರಣ ಅವಧಿ ವಿಸ್ತರಣೆ ಮಾಡಲಾಗಿದೆ. ಪ್ರಾರಂಭದಲ್ಲಿ 30 ಲಕ್ಷ ನೋಂದಣಿಗೆ ಗುರಿ ನಿಗದಿ ಮಾಡಲಾಗಿತ್ತು. ಈವರೆಗೆ 34.52 ಲಕ್ಷ ಸದಸ್ಯರನ್ನು ನೋಂದಾಯಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ. 2023 ರ ಜ.1ರಿಂದ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಈವರೆಗೆ ಸುಮಾರು ಮೂರು ಸಾವಿರ ಫಲಾನುಭವಿಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯವನ್ನು ಪಡೆದಿದ್ದಾರೆ.

ಈ ನಡುವೆ ವಿವಿಧ ಜಿಲ್ಲೆಗಳಿಂದ ರೈತರು ಮತ್ತು ಸಹಾಯಕರ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ಯಶಸ್ವಿನಿ ಯೋಜನೆ ರದ್ದುಗೊಳಿಸಿ, ಸುಮಾರು ಐದು ವರ್ಷಗಳ ನಂತರ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಹೊಸದಾಗಿ ಜಾರಿಗೊಳಿಸಲಾಗಿದೆ. ಇದೀಗ ಯೋಜನೆ ಬಗ್ಗೆ ಜನರಿಗೆ ತಿಳುವಳಿಗೆ ನೀಡಿದ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚೆಚ್ಚು ಮಂದಿ ಹೆಸರು ನೋಂದಾಯಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಇನ್ನು ಹಲವು ಸದಸ್ಯರು, ಸದಸ್ಯತ್ವ ಪಡೆಯದಿರುವುದರಿಂದ ಸದಸ್ಯತ್ವ ನೋಂದಣಿ ಅವಧಿಯನ್ನು ಮಾರ್ಚ್ ಅಂತ್ಯದವರೆಗೆ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯನ್ನು ಪರಿಗಣಿಸಿರುವ ಸರ್ಕಾರ, ನೋಂದಾಯಿಸುವ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಣೆ ಮಾಡಿದೆ.

ಇದನ್ನೂ ಓದಿ: ಯಶಸ್ವಿನಿ ಯೋಜನೆ ಖಾಸಗಿ ಸಂಸ್ಥೆ ನೌಕರರರಿಗೂ ವಿಸ್ತರಣೆ: ರಾಜ್ಯ ಸರ್ಕಾರ ಸೂಚನೆ

ಏನಿದು ಯಶಸ್ವಿನಿ ಯೋಜನೆ?: ಯಶಸ್ವಿನಿ ಯೋಜನೆಯು ಗ್ರಾಮೀಣ ಸಹಕಾರಿಗಳ ಆರೋಗ್ಯ ರಕ್ಷಣಾ ಯೋಜನೆಯಾಗಿದೆ. ರಾಜ್ಯದ ಗ್ರಾಮೀಣ ಸಹಕಾರಿಗಳಿಗಾಗಿಯೇ ರೂಪುಗೊಂಡಿರುವ ಒಂದು ಸ್ವಯಂ ನಿಧಿ ಶಸ್ತ್ರಚಿಕಿತ್ಸಾ ಯೋಜನೆ.

ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?: ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಮಾಡಿಸಬೇಕಾದಲ್ಲಿ ತಮ್ಮ ಯೂನಿಕ್ ಐಡಿ ಸಂಖ್ಯೆ ಹೊಂದಿರುವ ಅಂದರೆ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿ ಅಂಗೀಕೃತವಾದ ಆಸ್ಪತ್ರೆಗೆ ಭೇಟಿ ನೀಡಬೇಕು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಫಲಾನುಭವಿಗಳ ಆರೋಗ್ಯ ತಪಾಸಣೆ ಮಾಡುತ್ತಾರೆ. ಒಂದು ವೇಳೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಂಡು ಬಂದಲ್ಲಿ ಮತ್ತು ಸದರಿ ಶಸ್ತ್ರಚಿಕಿತ್ಸೆಯ ಯೋಜನೆಯಲ್ಲಿ ಒಳಗೊಂಡಿದ್ದಲ್ಲಿ, ವಿವರಗಳೊಂದಿಗೆ ಅನುಷ್ಠಾನ ಸಂಸ್ಥೆಗೆ ಇಂಟರ್​ನೆಟ್ ಮುಖಾಂತರ ಪ್ರಸ್ತಾಪ ಕಳಿಸುತ್ತಾರೆ.

ಇದನ್ನೂ ಓದಿ: ಯಶಸ್ವಿನಿ ಯೋಜನೆ ಮರು ಜಾರಿ: ನವೆಂಬರ್ 1ರಿಂದ ನೋಂದಣಿ ಪ್ರಾರಂಭ

ಅನುಷ್ಠಾನ ಸಂಸ್ಥೆಯವರು ಪ್ರಸ್ತಾಪವನ್ನು ಪರಿಶೀಲಿಸಿ ಚಿಕಿತ್ಸಾ ಪೂರ್ವಾನುಮತಿ ನೀಡಿದ ನಂತರ ಆಸ್ಪತ್ರೆಯವರು ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ. ಯಶಸ್ವಿನಿ ಫಲಾನುಭವಿಗಳು ಆಸ್ಪತ್ರೆಗೆ ಸೇರಿದಾಗ ಶಸ್ತ್ರಚಿಕಿತ್ಸೆಗೆ ಹಣ ಪಾವತಿ ಮಾಡಬೇಕಾಗಿಲ್ಲ, ಈ ಯೋಜನೆಯಲ್ಲಿ ಗುರುತಿಸಿದ ಶಸ್ತ್ರಚಿಕಿತ್ಸೆಗಳು ಕೆಲವೊಂದು ಷರತ್ತುಗಳಿಗೆ ಒಳಪಟ್ಟು ನಗದು ರಹಿತವಾಗಿರುತ್ತದೆ. ಈ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗೆ ಟ್ರಸ್ಟ್ ಭರಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.