ETV Bharat / state

ಸಿಲಿಕಾನ್ ಸಿಟಿಯಲ್ಲಿ "ರಕ್ತರಾತ್ರಿ ಅಶ್ವತ್ಥಾಮ"ನಾಗಿ ಅಬ್ಬರಿಸಿದ ಗುಂಡಿಮಜಲು

ಟಿ.ದಾಸರಹಳ್ಳಿಯ ಯೋಗಕೇಂದ್ರದಲ್ಲಿ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮೇಳದಿಂದ "ಮಹಿಷ ಮರ್ದಿನಿ" ಹಾಗೂ "ರಕ್ತರಾತ್ರಿ" ಪ್ರಸಂಗ ಏರ್ಪಡಿಸಲಾಗಿತ್ತು. ಈ ವೇಳೆ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಅಮೋಘ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

Yakshagana programme
author img

By

Published : Sep 9, 2019, 9:14 AM IST

ಬೆಂಗಳೂರು: ಟಿ. ದಾಸರಹಳ್ಳಿಯ ಯೋಗಕೇಂದ್ರದಲ್ಲಿ ನಡೆದ ಯಕ್ಷಗಾನದಲ್ಲಿ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ನಟನೆ ಸಿಲಿಕಾನ್ ಸಿಟಿಯ ಜನರನ್ನು ನಿಬ್ಬೆರಗಾಗಿಸಿತು.

ಯಕ್ಷಗಾನದಲ್ಲಿ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು

ಟಿ.ದಾಸರಹಳ್ಳಿಯ ಯೋಗಕೇಂದ್ರದಲ್ಲಿ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮೇಳದಿಂದ "ಮಹಿಷ ಮರ್ದಿನಿ" ಹಾಗೂ "ರಕ್ತರಾತ್ರಿ" ಪ್ರಸಂಗ ಏರ್ಪಡಿಸಲಾಗಿತ್ತು. ಈ ವೇಳೆ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಅಮೋಘ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

ಅಭಿಮನ್ಯು, ಬಬ್ರುವಾಹನ, ದೇವಿಮಹಾತ್ಮೆಯ ಚಂಡ ಮೊದಲಾದ ವೀರಾವೇಶ ಪಾತ್ರಗಳನ್ನು ಕಂಡ ಪ್ರೇಕ್ಷಕರು ಗೋಪಾಲ ಕೃಷ್ಣರ ಪ್ರತಿಭೆಗೆ ಮರುಳಾಗದೆ ಇರುವುದಿಲ್ಲ. ಇವರು ಕಟೀಲು, ಧರ್ಮಸ್ಥಳದಂತಹ ಪ್ರಮುಖ ಮೇಳಗಳಲ್ಲಿ ದುಡಿದ ಕಲಾವಿದರಾಗಿದ್ದು, ತಮ್ಮ ಅರವತ್ತರ ಹರೆಯದಲ್ಲೂ ಯುವಕರಂತೆ ಕುಣಿಯುತ್ತಾರೆ.

ಈ ಕಾರ್ಯಕ್ರಮದಲ್ಲಿ ಗೋಪಾಲ ಕೃಷ್ಣಭಟ್ಟರಿಗೆ "ಯಕ್ಷ ಸಂಜೀವಿನಿ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Intro:ಸಿಲಿಕಾನ್ ಸಿಟಿಯಲ್ಲಿ "ರಕ್ತರಾತ್ರಿ ಅಶ್ವತ್ಥಾಮ" ನಾಗಿ ಅಬ್ಬರಿಸಿದ ಗುಂಡಿಮಜಲು

ಬೆಂಗಳೂರು- ವಾರಾಂತ್ಯದಲ್ಲಿ ಟಿ.ದಾಸರಹಳ್ಳಿಯ ಯೋಗಕೇಂದ್ರದಲ್ಲಿ ನಡೆದ ಯಕ್ಷಗಾನ, ಸಿಲಿಕಾನ್ ಸಿಟಿಯ ಜನರನ್ನು ನಿಬ್ಬೆರಗಾಗಿಸಿತು. ಸಿಡಿಲಮರಿಯಂತೆ ಅಬ್ಬರಿಸಿ, ಮಿಂಚಿನ ವೇಗದಲ್ಲಿ ಕುಣಿದು, "ರಕ್ತರಾತ್ರಿ ಅಶ್ವತ್ಥಾಮ" ಯಕ್ಷಗಾನ ಪ್ರಸಂಗವನ್ನು ಆಡಿತೋರಿಸಿ, ಅರವತ್ತರ ವಯಸ್ಸಲ್ಲೂ ವಿಸ್ಮಯದ ರೀತಿಯಲ್ಲಿ ಪ್ರದರ್ಶನ ನೀಡಿದ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರು ನೆರೆದಿದ್ದವರನ್ನು ಭರಪೂರ ರಂಜಿಸಿದರು.
ಅಭಿಮನ್ಯು, ಬಬ್ರುವಾಹನ, ದೇವಿಮಹಾತ್ಮೆಯ ಚಂಡ ಮೊದಲಾದ ವೀರಾವೇಶ ಪಾತ್ರಗಳನ್ನು ಕಂಡ ಪ್ರೇಕ್ಷಕರು ಗೋಪಾಲಕೃಷ್ಣಭಟ್ಟರ ಅಪಾರ ಪ್ರತಿಭೆಗೆ ಮರುಳಾಗುತ್ತಾರೆ.
ಕಟೀಲು, ಧರ್ಮಸ್ಥಳದಂತಹ ಪ್ರಮುಖ ಮೇಳಗಳಲ್ಲಿ ದುಡಿದ ಕಲಾವಿದರಾಗಿದ್ದು, ತಮ್ಮ ಅರವತ್ತರ ಹರೆಯದಲ್ಲೂ ಯುವಕರ ಉತ್ಸಾಹದಲ್ಲಿ ಕುಣಿಯುತ್ತಿದ್ದಾರೆ.
ಇಂದು ಟಿ ದಾಸರಹಳ್ಳಿಯ ಯಕ್ಷಗಾನ ಪ್ರದರ್ಶನದ ವೇಳೆ, ಗೋಪಾಲಭಟ್ಟರಿಗೆ "ಯಕ್ಷ ಸಂಜೀವಿನಿ" ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ, ಹಾಗೂ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಮೇಳದಿಂದ "ಮಹಿಷ ಮರ್ದಿನಿ" ಹಾಗೂ "ರಕ್ತರಾತ್ರಿ" ಪ್ರಸಂಗ ಏರ್ಪಡಿಸಲಾಗಿತ್ತು. ಈ ವೇಳೆ ಗುಂಡಿಮಜಲು ಗೋಪಾಲಕೃಷ್ಣ ಭಟ್ಟರ ಅಮೋಘ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

ಸೌಮ್ಯಶ್ರೀ
Kn_bng_01_Yakshagana_7202707 Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.