ETV Bharat / state

ಬಿಜೆಪಿ ಕಚೇರಿಯಲ್ಲಿ ಯಜ್ಞ: ಪೂರ್ಣಾಹುತಿ ಸಲ್ಲಿಸಿದ ಬಿಎಸ್​​ವೈ! - BJP office

ನಿನ್ನೆಯ ಚುನಾವಣೋತ್ತರ ಸಮೀಕ್ಷೆಯ ಖುಷಿಯಲ್ಲಿರುವ ರಾಜ್ಯ ಬಿಜೆಪಿ ನಾಯಕರು ಇಂದು ದೈವ ಪ್ರೇರಣೆಗೆ ಮುಂದಾದರು. ಗಣ ಹೋಮ, ರುದ್ರ ಹೋಮ, ಸುದರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಹೋಮಗಳನ್ನು ನಡೆಸಿ ಭೀಕರ ಬರಗಾಲ ಶಮನಗೊಳ್ಳಲೆಂದು ಪಾರ್ಥನೆ ಸಲ್ಲಿಸಿದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದ ಬಿಜೆಪಿ ನಾಯಕರು
author img

By

Published : May 20, 2019, 2:40 PM IST

ಬೆಂಗಳೂರು: ಲೋಕಸಭಾ ಚುನಾವಣಾ ಮುಗಿಯುತ್ತಿದ್ದಂತೆ ಬಿಜೆಪಿ ನಾಯಕರು ಯಜ್ಞ ಯಾಗಾದಿಗಳ ಮೊರೆ ಹೋಗಿದ್ದಾರೆ. ಲೋಕ ಸಮರದಲ್ಲಿ ಉತ್ತಮ ಫಲಿತಾಂಶ ಬರಲಿ ಎನ್ನುವುದಕ್ಕಾಗಿ ಬಿಜೆಪಿ ನಾಯಕರು ಯಜ್ಞ ಮಾಡಿಸಿದರು. ಆ ಮೂಲಕ ರಾಜ್ಯ-ರಾಷ್ಟ್ರದಲ್ಲಿ ಕಮಲ ಅರಳಿಸಲು ದೈವ ಪ್ರೇರಣೆಗೆ ಮುಂದಾದರು.

ಲೋಕಸಭೆ ಮತ್ತು ರಾಜ್ಯದಲ್ಲಿನ ಉಪ ಚುನಾವಣೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಹಿಂದಿರುಗಿರುವ ರಾಜ್ಯ ಬಿಜೆಪಿ ನಾಯಕರು, ಪಕ್ಷದ ಕೇಂದ್ರ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದರು. ಗಣ ಹೋಮ, ರುದ್ರ ಹೋಮ, ಸುದರ್ಶನ ಹೋಮ ಸೇರಿದಂತೆ ಇತರೆ ವಿಶೇಷ ಹೋಮಗಳನ್ನು ನಡೆಸಿದರು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಪೂರ್ಣಹುತಿ ಸಲ್ಲಿಕೆ ಮಾಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಜ್ಞದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿ ಪೂರ್ಣಾಹುತಿ ನೀಡಿವ ಕಾರ್ಯ ಮುಗಿಸಿದರು.

ಪಕ್ಷದ ಕೇಂದ್ರ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದ ಬಿಜೆಪಿ ನಾಯಕರು

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್​ವೈ, ರಾಜ್ಯದಲ್ಲಿ ಕಾಡುತ್ತಿರುವ ಭೀಕರ ಬರಗಾಲ ಶಮನಗೊಳ್ಳಬೇಕು. ಮಳೆ ಬೆಳೆ ಚೆನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಯಜ್ಞ ಯಾಗಾದಿ ಹಾಗೂ ಹೋಮಗಳನ್ನು ನಡೆಸಿದ್ದೇವೆ. ಅಲ್ಲದೆ ಮಳೆ, ಬೆಳೆಯಾಗಿ ಸಮೃದ್ಧಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿರುವುದಾಗಿಯೂ ತಿಳಿಸಿದರು.

ಮೇ 23ರ ನಂತರ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬರುತ್ತದೆ. ಅದಕ್ಕಿಂತ ದೊಡ್ಡ ರಾಜಕೀಯ ಬದಲಾವಣೆ ಇನ್ನೇನು ಬೇಕು ಎಂದು ರಾಜ್ಯದಲ್ಲಿ ಕೂಡ ರಾಜಕೀಯ ಬದಲಾವಣೆ ಸಾಧ್ಯತೆಯ ಸುಳಿವು ನೀಡಿದರು.

ಪಕ್ಷದ ನಾಯಕರ ತಂಡ, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್​.ಸಂತೋಷ್ ನೇತೃತ್ವದಲ್ಲಿ ಅಂಡಮಾನ್ ನಿಕೋಬಾರ್ ಪ್ರವಾಸಕ್ಕೆ ತೆರಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಇಷ್ಟು ದಿನ ಬೇರೆ ಬೇರೆ ರಾಜ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಸ್ನೇಹಿತರು ಅಂಡಮಾನ್​ನಲ್ಲಿ ಸಭೆ ಸೇರಿದ್ದಾರೆ. ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.

Intro:ಬೆಂಗಳೂರು: ಲೋಕಸಭಾ ಚುನಾವಣಾ ಮುಗಿಯುತ್ತಿದ್ದಂತೆ ಬಿಜೆಪಿ ಯಜ್ಞ ಯಾಗಾದಿ ಮೊರೆ ಹೋಗಿದೆ,ಲೋಕಸಮರದಲ್ಲಿ ಉತ್ತಮ ಫಲಿತಾಂಶ ಬರಲಿ ಎನ್ನುವುದಕ್ಕಾಗಿ ರಾಜ್ಯದ ಕೇಂದ್ರ ಕಚೇರಿಯಲ್ಲಿ ಯಜ್ಞ ಯಾಗಾದಿಗಳನ್ನು ಮಾಡಿಸಿದೆ.ಆ ಮೂಲಕ ರಾಜ್ಯ-ರಾಷ್ಟ್ರದಲ್ಲಿ ಕಮಲ ಅರಳಿಸಲು ದೈವ ಪ್ರೇರಣೆಗೆ ಮುಂದಾಗಿದೆ
Body:ಹೌದು, ಲೋಕಸಭೆ ಮತ್ತು ಚಿಂಚೋಳಿ,ಕುಂದಗೋಳ ವಿಧಾನಸಭಾ ಉಪ ಚುನಾವಣೆ ಮುಗಿಯುತ್ತಿದ್ದಂತೆ ಬೆಂಗಳೂರಿಗೆ ಹಿಂದಿರುಗಿರುವ ರಾಜ್ಯ ಬಿಜೆಪಿ ನಾಯಕರು ಪಕ್ಷದ ಕೇಂದ್ರ ಕಚೇರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿದರು.ಗಣ ಹೋಮ,ರುದ್ರಹೋಮ,ಸುದರ್ಶನ ಹೋಮ ನಡೆಸಿದರು.ಮಧ್ಯಾಹ್ನ 12ಗಂಟೆಗೆ ಸರಿಯಾಗಿ ಪೂರ್ಣಹುತಿ ಸಲ್ಲಿಕೆ ಮಾಡಲಾಯಿತು.ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಯಜ್ಞದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿ ಪೂರ್ಣಾಹುತಿ ನೀಡಿವ ಕಾರ್ಯ ಮುಗಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ,ರಾಜ್ಯದಲ್ಲಿ ಕಾಡುತ್ತಿರುವ ಭೀಕರ ಬರಗಾಲ ಶಮನಗೊಳ್ಳಬೇಕು,ಮಳೆ ಬೆಳೆ ಚನ್ನಾಗಿ ಆಗಬೇಕು ಎನ್ನುವ ಕಾರಣಕ್ಕೆ ಯಜ್ಞ ಯಾಗಾದಿ ಹೋಮ ಗಳನ್ನು ನಡೆಸಿದ್ದೇವೆ,ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ, ಮಳೆ, ಬೆಳೆಯಾಗಿ ಸಮೃದ್ದಿಯಾಗಲಿ ಎಂದು‌ ಪ್ರಾರ್ಥನೆ ಮಾಡಿದ್ದೇವೆ ಜೊತೆಗೆ. ಒಳ್ಳೆಯ ಫಲಿತಾಂಶ‌ ಬಂದು ಒಳ್ಳೆಯ ಆಡಳಿತ‌ ಕೊಡುವಂತಾಗಲಿ,ಒಳ್ಳೆಯ ಕಾಲ ಎಂದು‌ ಪ್ರಾರ್ಥನೆ ಮಾಡಿದ್ದೇವೆ ಎಂದರು.

ಮೇ.23 ರ ನಂತರ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬರುತ್ತದೆ.ಅದಕ್ಕಿಂತ ದೊಡ್ಡ ರಾಜಕೀಯ ಬದಲಾವಣೆ ಇನ್ನೇನು ಬೇಕು ಎಂದು ರಾಜ್ಯದಲ್ಲಿ ಕೂಡ ರಾಜಕೀಯ ಬದಲಾವಣೆ ಸಾಧ್ಯತೆಯ ಸುಳಿವು ನೀಡಿದರು.

ಪಕ್ಷದ ನಾಯಕರ ತಂಡ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಕ್ ಸಂತೋಷ್ ನೇತೃತ್ವದಲ್ಲಿ ಅಂಡಮಾನ್ ನಿಕೋಬಾರ್ ಪ್ರವಾಸಕ್ಕೆ ತೆರಳಿರಿವ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಇಷ್ಟು ದಿನ ಬೇರೆ ಬೇರೆ ರಾಜ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಸ್ನೇಹಿತರು ಅಂಡಮಾನ್ ನಲ್ಲಿ ಸಭೆ ಸೇರಿದ್ದಾರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ‌ ಎಂದರು.Conclusion:-ಪ್ರಶಾಂತ್ ಕುಮಾರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.