ETV Bharat / state

ಶಿವನಾಮ ಸ್ಮರಣೆ ಮಧ್ಯೆ ಈ ಸ್ಮಶಾನದಲ್ಲಿ ಕಾಳಿಕಾ ಮಾತೆಗೆ ಪೂಜೆ... ಇದು ಶಿವರಾತ್ರಿ ವಿಶೇಷ!

ಬೆಂಗಳೂರು: ನಾಡಿನಾದ್ಯಂತ ‌ಶಿವ ರಾತ್ರಿ ಸಡಗರ ಸಂಭ್ರಮದ ವಾತಾವರಣದ ಜೊತೆ ಎಲ್ಲಿ ನೋಡಿದರೂ ಶಿವನಾಮ ಸ್ಮರಣೆ ನಡೆಯುತಿದ್ದರೆ, ಬೆಂಗಳೂರಿನ ಹಲಸೂರಿನಲ್ಲಿ ವಿಶೇಷ ಕಾಳಿ ಪೂಜೆ ನಡೆಯುತ್ತಿತ್ತು.

ಸ್ಮಶಾನದಲ್ಲಿ ಕಾಳಿಕಾ ಮಾತೆಗೆ ಪೂಜೆ...
author img

By

Published : Mar 5, 2019, 3:35 PM IST

ಹಲಸೂರು ಸ್ಮಶಾನದಲ್ಲಿ ಶಕ್ತಿ ದೇವತೆ ಕಾಳಿ ದೇವಿಯ ಪೂಜೆಯನ್ನು ವಿಭಿನ್ನ ಮತ್ತು ವಿಶೇಷ ಎನ್ನುವ ರೀತಿ ಮಾಡಲಾಯಿತು. ಈ ಒಂದು ಪೂಜೆ ಸುಮಾರು ರಾತ್ರಿ12 ಗಂಟೆಗೆ ಶುರುವಾಗಿತ್ತು. ಮಣ್ಣಿನಲ್ಲಿ‌ ಕಾಳಿ ವಿಗ್ರಹ ‌ನಿರ್ಮಿಸಿ ಹಬ್ಬ ಆಚರಣೆ ಮಾಡಿದ ಜನರು ತಮ್ಮ ಪಾರಂಪರಿಕವಾಗಿ ಬಂದಿರುವ ಹಬ್ಬದ ಪ್ರಕಾರ, ಕಾಳಿ ದೇವಿಗೆ ದೃಷ್ಟಿ ನೀಡುವ ವಿಶೇಷ ಪೂಜೆ ನೆರವೇರಿಸಿದರು.

ಸ್ಮಶಾನದಲ್ಲಿ ಕಾಳಿಕಾ ಮಾತೆಗೆ ಪೂಜೆ...

ಇನ್ನೂ ಈ ಹಬ್ಬವನ್ನು ಒಂದೊಂದು ಸಮುದಾಯದಿಂದ ಒಂದೊಂದು ವಸ್ತು ತಂದು‌ ಪೂಜೆ ಮಾಡಿದ್ದು ವಿಶೇಷವಾಗಿತ್ತು.

ವರ್ಷಕ್ಕೊಮ್ಮೆ ತಾಯಿಗೆ ದೃಷ್ಟಿ ಕೊಟ್ಟು, ರಕ್ತವನ್ನು ನೈವೇದ್ಯ ಮಾಡಿ ನಂತರ ಊರಿನ ಸುತ್ತಲೂ ಅನ್ನ ಎರಚುವ ಮೂಲಕ ಕೆಟ್ಟ ಶಕ್ತಿಗಳನ್ನ ದೂರ ಮಾಡುವ ಆಚರಣೆ ಇದಾಗಿದೆ.

ಶಿವರಾತ್ರಿ ಮುಗಿದ ಮೇಲೆ ಕಾಳಿ‌ ಮಾತೆಯ ಆರಾಧನೆ ಪ್ರತಿ ವರ್ಷ ಮಾಡುತ್ತಾ ಬಂದಿದ್ದಾರೆ.

ಈ ಪೂಜೆಯಲ್ಲಿ ತಾಯಿಯ‌ ಮಣ್ಣಿನ ಮೂರ್ತಿಯ ಬಾಯಲ್ಲಿ ನಿಂಬೆಹಣ್ಣು ಇಟ್ಟು ನಂತರ ಅದನ್ನು ಮನೆಯಲ್ಲಿ ಕಟ್ಟಿದರೆ, ದುಷ್ಟಶಕ್ತಿಯಿಂದ ಮುಕ್ತಿ ಪಡೆಯಬಹುದು ಎಂಬ ಪ್ರತೀತಿ ಇದೆ. ನಂತರ ತಾಯಿಯ ವಿಗ್ರಹವನ್ನು ಮಣ್ಣಿನಲ್ಲಿ‌ ಮುಚ್ಚಿ ನಿತ್ಯ ಮುಂದಿನ ವರ್ಷದವರೆಗೆ ಪೂಜೆ ಮಾಡಲಾಗುತ್ತದೆ. ಕೇವಲ ನಮ್ಮ ರಾಜ್ಯವಲ್ಲದೆ ಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದಿಂದಲೂ ಭಕ್ತರು ಬಂದು ಈ ಪೂಜೆಯಲ್ಲಿ ಪಾಲ್ಗೊಂಡು ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.

Intro:Body:

ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಿರಿ: ಜಿಲ್ಲಾಡಳಿತಕ್ಕೆ ಸ್ವಾಮೀಜಿ ಎಚ್ಚರಿಕೆ!

kannada newspaper, kannada news, etv bharat, Prevent, animal sacrifice, Durga Devi Fair, Swamiji, ದುರ್ಗಾದೇವಿ ಜಾತ್ರೆ, ಪ್ರಾಣಿಬಲಿ ತಡೆಯಿರಿ, ಜಿಲ್ಲಾಡಳಿತ, ಸ್ವಾಮೀಜಿ ಎಚ್ಚರಿಕೆ,

Prevent animal sacrifice at Durga Devi Fair:  Swamiji

ಕೊಪ್ಪಳ: ಇಂದಿನಿಂದ ನಡೆಯಲಿರುವ ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ‌. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಜಾತ್ರೆಗೆ ಸಾವಿರಾರು ಪ್ರಾಣಿಗಳನ್ನು ಬಲಿ ಕೊಡಲಾಗುತ್ತದೆ. ಇಂದಿನಿಂದ‌ ಮಾರ್ಚ್ 8ರವರೆಗೆ ನಡೆಯಲಿರುವ ಈ ಜಾತ್ರೆಯಲ್ಲಿ ಪ್ರಾಣಿಬಲಿ ನೀಡಲಾಗುತ್ತದೆ. ಪ್ರಾಣಿಬಲಿ ನೀಡದಂತೆ ಈಗಾಗಲೇ ಜಾಗೃತಿ‌ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಆದರೂ ಸಹ ಪ್ರಾಣಿಬಲಿ‌ ನೀಡಲು ಭಕ್ತರು ಬರ್ತಾರೆ. ಹೀಗಾಗಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಪ್ರಾಣಿಬಲಿ ನಿಷೇಧಕ್ಕೆ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳಬೇಕು ಎಂದು ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. 

ಇತ್ತೀಚಿಗೆ ನಡೆದಿರುವ ಕುಂಬಳಾವತಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದೊಣ್ಣೆಗುಡ್ಡದಲ್ಲಾದರೂ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವ ಮೂಲಕ ಪ್ರಾಣಿವಧೆ ನಿಲ್ಲಿಸಬೇಕು ಎಂದು ದಯಾನಂದ‌ ಸ್ವಾಮೀಜಿ ಹೇಳಿದರು. 

ಪ್ರಾಣಿ ಬಲಿ ನೀಡದಂತೆ ಭಕ್ತರಲ್ಲಿ ದೇವಸ್ಥಾನದ ಆಡಳಿತ ಮಂಡಳಿ‌ ಕರಪತ್ರ ಹಂಚಿದೆ. ಅದು ಕರಪತ್ರಕ್ಕೆ ಮಾತ್ರ ಸೀಮಿತವಾಗಬಾರದು. ಒಂದು ವೇಳೆ ಪ್ರಾಣಿಬಲಿ ತಡೆಯದಿದ್ದರೆ ನ್ಯಾಯಾಲಯದಲ್ಲಿ‌ ಪ್ರಕರಣ ದಾಖಲಿಸಲಾಗುವುದು ಎಂದು ದಯಾನಂದ ಸ್ವಾಮೀಜಿ ಇದೇ ಸಂದರ್ಭದಲ್ಲಿ ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.