ETV Bharat / state

ವಿಶ್ವ ಶೌಚಾಲಯ ದಿನ: ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ಕೊರತೆ - ಸಾರ್ವಜನಿಕ ಶೌಚಾಲಯಗಳ ಶುಚಿತ್ವದ ನಿರ್ವಹಣೆ

ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಇ-ಟಾಯ್ಲೆಟ್​​ಗಳನ್ನು ನಿರ್ಮಾಣ ಮಾಡಲಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ 1300 ಸಾರ್ವಜನಿಕ ಶೌಚಾಲಯಗಳು ಇವೆ ಎನ್ನಲಾಗುತ್ತಿದ್ದು, ಸರಿಯಾದ ಅಂಕಿ-ಅಂಶ, ದುರಸ್ತಿಗೆ ಬಂದಿರುವ ಶೌಚಾಲಯಗಳ ಸರಿಯಾದ ಮಾಹಿತಿ ಅಧಿಕಾರಿಗಳ ಬಳಿಯೇ ಇಲ್ಲವಂತೆ.

world-toilet-day-deficiency-continued-toilets-in-silicon-city
ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ಶೌಚಾಲಯಗಳ ಕೊರತೆ.
author img

By

Published : Nov 19, 2020, 8:00 PM IST

ಬೆಂಗಳೂರು: ಇಂದು ವಿಶ್ವ ಶೌಚಾಲಯ ದಿನ. ನಗರದ ಜನಸಾಂದ್ರತೆಗೆ ತಕ್ಕಂತೆ ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳಿರಬೇಕೆಂಬ ನಿಯಮ ಇದೆ. ಪ್ರತಿ ಎರಡು ಕಿ.ಮೀ.ಗೆ ಒಂದು ಶೌಚಾಲಯ ಇರಬೇಕೆಂದು ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಅಭಿಯಾನದ ನಿಯಮವೂ ಇದೆ. ಆದರೆ ಬಿಬಿಎಂಪಿ ಈ ಪ್ರಕಾರ ಶೌಚಾಲಯದ ವ್ಯವಸ್ಥೆ ಕಲ್ಪಿಸುವಲ್ಲಿ ಇನ್ನೂ ಯಶಸ್ವಿಯಾಗಿಲ್ಲ.

ಹಲವೆಡೆ ಈಗಾಗಲೇ ನಿರ್ಮಾಣ ಮಾಡಿರುವ ಶೌಚಾಲಯಗಳು ಕೂಡ ಬಾಗಿಲು ಮುಚ್ಚಿವೆ. ಇತ್ತ ನಿರ್ವಹಣೆ ನೋಡಿಕೊಳ್ಳುತ್ತಿರುವ ಸಂಸ್ಥೆಗಳೂ ಕೂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಪ್ರತಿಕ್ರಿಯಿಸಿ, ನಗರಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಶೌಚಾಲಯ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನೆರಡು ತಿಂಗಳಲ್ಲಿ ಈ ಟಾರ್ಗೆಟ್ ಸಂಪೂರ್ಣಗೊಳಿಸಲಾಗುವುದು ಎಂದಿದ್ದಾರೆ.

ಅಧಿಕಾರಿಗಳು ನಗರದಲ್ಲಿ 1300 ಶೌಚಾಲಯಗಳಿವೆ ಎನ್ನುತ್ತಾರೆ. ಆದರೆ ಪಾಲಿಕೆಯ ವೆಬ್​​ಸೈಟ್​​ನಲ್ಲಿ ಅಧಿಕೃತವಾಗಿ 479 ಶೌಚಾಲಯಗಳ ಪಟ್ಟಿ ಮಾತ್ರ ಪ್ರಕಟಿಸಲಾಗಿದೆ. ನಗರದ ಸ್ವಚ್ಛತೆಗೆ ಪ್ರಮುಖ ಮಾನದಂಡ, ನಗರದ ಶೌಚಾಲಯಗಳ ನಿರ್ವಹಣೆ ಆಗಿರುತ್ತೆ. ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ ರ್ಯಾಂಕ್ ಕೂಡ ಶೌಚಾಲಯಗಳ ಸೌಲಭ್ಯವನ್ನೂ ಆಧರಿಸಿ ನೀಡಲಾಗುತ್ತಿದೆ. ಬಿಬಿಎಂಪಿ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿದ್ದರೂ ನಗರದ ಹಲವೆಡೆ, ಮುಖ್ಯ ರಸ್ತೆಗಳಲ್ಲೇ ಮೂತ್ರ ವಿಸರ್ಜನೆ ಮಾಡುವ ಕೆಟ್ಟ ಅಭ್ಯಾಸ ಇಂದಿಗೂ ಮುಂದುವರೆದಿದೆ. ಶೌಚಾಲಯದಲ್ಲಿ ಐದು ರೂಪಾಯಿ ಹಣ ಕೊಡಬೇಕೆಂಬ ಕಾರಣಕ್ಕೂ ಹೆಚ್ಚಿನ ಜನ ಶೌಚಾಲಯ ಬಳಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ಶೌಚಾಲಯಗಳ ಕೊರತೆ

ಕೊರೊನಾ ಹಿನ್ನೆಲೆ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸಾರ್ವಜನಿಕ ಶೌಚಾಲಯಗಳ ಶುಚಿತ್ವದ ನಿರ್ವಹಣೆ ಅತ್ಯಗತ್ಯವಾಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಶೌಚಾಲಯ ನಿರ್ಮಾಣಗಳಾಗಿದ್ದರೂ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯಗಳಿದ್ದರೂ ರಾತ್ರಿ ವೇಳೆ ಬಂದ್ ಇರುವ ಸಮಯದಲ್ಲಿ ಸುತ್ತಮುತ್ತ ಗಲೀಜು ಮಾಡುವ ಜನರ ಬೇಜಾವಾಬ್ದಾರಿಯೂ ಅಲ್ಲಲ್ಲಿ ಕಂಡುಬರುತ್ತದೆ. ಜನ ರಸ್ತೆ ಬದಿಗಳಲ್ಲಿ, ಬ್ಲಾಕ್ ಸ್ಪಾಟ್​​​ಗಳಲ್ಲಿ, ಮೈದಾನ, ಖಾಲಿ ಸೈಟ್​​ಗಳ ಪಕ್ಕ ಬಯಲು ಮೂತ್ರ ವಿಸರ್ಜನೆ ಮಾಡಿ ನಗರದ ನೈರ್ಮಲ್ಯಕ್ಕೆ ಅಡ್ಡಿ ತರುತ್ತಿದ್ದಾರೆ.

ಯಶವಂತಪುರ ಸರ್ಕಲ್ ಬಳಿ ಶೌಚಾಲಯ ನಿರ್ಮಾಣವಾಗಿ ಬಳಕೆಯಲ್ಲಿತ್ತು. ಆದರೆ ಕಳೆದ ಒಂದೆರಡು ತಿಂಗಳಿಂದ ಇದಕ್ಕೆ ಬೀಗ ಜಡಿಯಲಾಗಿದೆ. ಜಲಮಂಡಳಿ ಕೆಲಸ ನಡೆಯುತ್ತಿರುವುದರಿಂದ ಚರಂಡಿ ಬ್ಲಾಕ್ ಆಗಿದ್ದು, ಸರಿಪಡಿಸಲು ಲಾಕ್​​ಡೌನ್ ಹಿನ್ನಲೆ ಕೆಲಸಗಾರರು ಸಿಗುತ್ತಿಲ್ಲ ಎಂದು ನಿರ್ವಹಣಾ ಸಂಸ್ಥೆ ಸಬೂಬು ಹೇಳುತ್ತಿದೆ. ಇನ್ನು ಮಲ್ಲೇಶ್ವರಂ ಬಳಿ ಶೌಚಾಲಯ ಇದ್ದರೂ ಕೂಡ ಶೌಚಾಲಯದ ಹೊರ ಭಾಗದ ರಸ್ತೆಯನ್ನು ಸಂಪೂರ್ಣವಾಗಿ ಮೂತ್ರ ವಿಸರ್ಜನೆ, ಕಸ ಎಸೆಯಲು ಸುತ್ತಮುತ್ತಲಿನ ಜನ ದುರುಪಯೋಗಪಡಿಸಿದ್ದಾರೆ. ಇದರಿಂದ ಸೊಳ್ಳೆ ಸಮಸ್ಯೆ ಹೆಚ್ಚಾಗಿದೆ. ಪ್ರತೀ ದಿನ ಕಸವೂ ಸ್ವಚ್ಛ ಆಗುವುದಿಲ್ಲ ಎಂದು ಇಲ್ಲಿ ಕೆಲಸ ಮಾಡುವ ಭರತ್ ಯಾದವ್ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದರು.

ಇನ್ನು ವಾರ್ಡ್ ನಂ. 64ರಲ್ಲಿ ಹೊಸದಾಗಿ ಶೌಚಾಲಯ ನಿರ್ಮಾಣ ಮಾಡಿ ಕೆಲ ತಿಂಗಳಾಗಿದ್ದರೂ ಇನ್ನೂ ಕಾರ್ಯಾರಂಭಗೊಳಿಸಿಲ್ಲ. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದ್ದು, ಇತ್ತ ಶೌಚಾಲಯಕ್ಕೂ ಬೀಗ ಜಡಿಯಲಾಗಿದೆ. ಇನ್ನು ನಗರದ ಹಲವಾರು ಕಡೆ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪಾಳು ಬಿದ್ದಿರುವ ಸ್ಥಿತಿಯಲ್ಲಿ ಶೌಚಾಲಯ ಇದೆ. ಸ್ವಚ್ಛ ಸಿಟಿ ಫೌಂಡೇಶನ್, ವಿಶಾಲ್ ಕಂಟರ್ ನ್ಯಾಷನಲ್ ಸೇರಿದಂತೆ ಹಲವು ಶೌಚಾಲಯಗಳನ್ನು ಖಾಸಗಿ ಸಂಸ್ಥೆಗಳಿಗೆ ಹಾಗೂ ಪೌರಕಾರ್ಮಿಕರ ಅವಲಂಬಿತರಿಗೆ ನಿರ್ವಹಣೆಗಾಗಿ ಐದು ವರ್ಷ ಗುತ್ತಿಗೆ ನೀಡಲಾಗಿದೆ.

ಇನ್ನು ಎಷ್ಟೋ ಕಡೆ ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಇ-ಟಾಯ್ಲೆಟ್​ಗಳನ್ನು ನಿರ್ಮಾಣ ಮಾಡಲಾಗಿದ್ದು, ಬೆರಳೆಣಿಕೆಯಷ್ಟು ಮಾತ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ 1300 ಸಾರ್ವಜನಿಕ ಶೌಚಾಲಯಗಳು ಇವೆ ಎನ್ನಲಾಗುತ್ತಿದ್ದು, ಸರಿಯಾದ ಅಂಕಿ-ಅಂಶ, ದುರಸ್ತಿಗೆ ಬಂದಿರುವ ಶೌಚಾಲಯಗಳ ಸರಿಯಾದ ಮಾಹಿತಿ ಅಧಿಕಾರಿಗಳ ಬಳಿಯೇ ಇಲ್ಲ.

ಹೈಟೆಕ್ ಶೌಚಾಲಯಗಳ ನಿರ್ಮಾಣ:

ನಗರದಲ್ಲಿ ಈಗಿರುವ ಸಾರ್ವಜನಿಕ ಶೌಚಾಲಯಗಳಲ್ಲಿ ಬಹುತೇಕ ಶೌಚಾಲಯಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಆದರೆ ಈ ನಡುವೆಯೇ 25 ಹೈಟೆಕ್ ಶೌಚಾಲಯಗಳ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಶುಭ್ರ ಬೆಂಗಳೂರು ಹಾಗೂ ಸ್ವಚ್ಛ ಬೆಂಗಳೂರು ಯೋಜನೆಗಳ ಅಡಿ 75 ಕೋಟಿ ರೂಪಾಯಿ ಅನುದಾನವಿದ್ದು, ಇದನ್ನು ಬಳಸಿಕೊಂಡು ಮೊದಲ ಹಂತದಲ್ಲಿ ನಗರದ ವಿವಿಧೆಡೆ 25 ಶೌಚಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿದೆ.

ಈಗಿರುವ ಶೌಚಾಲಯ ಕಟ್ಟಡಗಳನ್ನು ಕೆಡವಿ ಪ್ರಿಕಾಸ್ಟ್ ಸ್ಟ್ರಕ್ಚರ್ (ರೆಡಿಮೇಡ್ ಗೋಡೆಗಳು) ಮೂಲಕ ತ್ವರಿತವಾಗಿ ನಿರ್ಮಾಣ ಮಾಡಿ, ಎಸಿ ಸೌಲಭ್ಯ ಹಾಗೂ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ. ರೇಸ್ ಕೋರ್ಸ್ ಹಾಗೂ ಬಸವೇಶ್ವರ ನಗರದಲ್ಲಿ ಪ್ರಾಯೋಗಿಕವಾಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರಕ್ಕೆ ಅನುಮತಿಗಾಗಿ ಕಳಿಸಲಾಗಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಅಭಿಯಂತರ ವಿಶ್ವನಾಥ್ ತಿಳಿಸಿದರು.

ಇನ್ನು ಪೌರಕಾರ್ಮಿಕರಿಗೆ ಕೆಲಸದ ವೇಳೆ ಶುಚಿಗೊಳ್ಳಲು, ಬಟ್ಟೆ ಬದಲಾಯಿಸಲು ಹಾಗೂ ಶೌಚಾಲಯ ಬಳಸಲು 550 ಮಸ್ಟರಿಂಗ್ ಸೆಂಟರ್ ನಿರ್ಮಾಣದ ಯೋಜನೆಯಿದ್ದು, ಪಾಲಿಕೆಗೆ ಜಾಗದ ಕೊರತೆ ಇರುವುದರಿಂದ ಆರಂಭದ ಹಂತದಲ್ಲಿ 250 ನಿರ್ಮಾಣ ಮಾಡಲಿದೆ. ಆದರೆ ಈ ಎಲ್ಲಾ ಯೋಜನೆಗಳು ಹಲವಾರು ವರ್ಷದಿಂದಲೂ ಕಡತಗಳಲ್ಲಿಯೇ ಇದ್ದು, ಇನ್ನಾದರೂ ಜಾರಿಗೆ ಬರುತ್ತದಾ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.