ETV Bharat / state

ಆನೇಕಲ್​ನಲ್ಲಿ ಕಾಡಾನೆ ಹಾವಳಿ: ಮಹಿಳೆ ಸಾವು - wild elephant attack

ಆನೇಕಲ್​​ನಲ್ಲಿ ಕಾಡಾನೆ ದಾಳಿಗೆ ನಾಗಮ್ಮ (50) ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

woman-killed-in-elephant-attack
ಆನೇಕಲ್​ನಲ್ಲಿ ಕಾಡಾನೆ ಹಾವಳಿ, ಮಹಿಳೆ ಸಾವು
author img

By

Published : May 27, 2023, 10:48 PM IST

ಆನೇಕಲ್ (ಬೆಂಗಳೂರು): ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಂಚಿನಲ್ಲಿರುವ ಹಕ್ಕಿ ಪಿಕ್ಕಿ ಕಾಲೋನಿ ಬಳಿ ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಉದ್ಯಾನದ ಸಿಬ್ಬಂದಿ ಕುಮಾರ್​ ಎಂಬವರ ತಾಯಿ ನಾಗಮ್ಮ (50) ಮೃತರು ಎಂದು ಗುರುತಿಸಲಾಗಿದೆ.

ಉದ್ಯಾನದಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಮಗನಿಗೆ ಇಳಿ ಕತ್ತಲಿನಲ್ಲಿ‌ ಊಟ ಕೊಡಲು ಹೋಗುತ್ತಿದ್ದಾಗ ಆನೆ ದಾಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಬನ್ನೇರುಘಟ್ಟ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕತ್ತಲಾಗುತ್ತಿದ್ದಂತೆ ಜೈವಿಕ ಉದ್ಯಾನದ ಬಳಿ ಕಾಡಾನೆಗಳು ಓಡಾಡುವುದು ಸಹಜವಾಗಿದ್ದು, ಆನೆ-ಮಾನವ ಸಂಘರ್ಷ ಇತ್ತೀಚೆಗೆ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ಶ್ವಾನ ಸೈನಿಕ ತರಬೇತಿಯ ಸೈನಿಕ ಹೆಚ್.ಎನ್.ಸಿಂಗ್ (33) ಒಂಟಿ ಸಲಗನ ದಾಳಿಯಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಡಾನೆ ದಾಳಿಗೆ ರೈತ ಬಲಿ: ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ ಮೃತಪಟ್ಟಿದ್ದರು. ದನಗಳನ್ನು ಮೇಯಿಸಲೆಂದು ಹಲಗಪ್ಪ ನಿತ್ಯ ಕಾಡಿಗೆ ಹೋಗುತ್ತಿದ್ದರು. ಎಂದಿನಂತೆ ಹೋಗಿದ್ದಾಗ ಆನೆ ದಾಳಿ ನಡೆಸಿದೆ ಕೊಂದು ಹಾಕಿತ್ತು.

ಇದನ್ನೂ ಓದಿ: ಕೊಡಗು: ಎರಡು ದಿನಗಳ ಹಿಂದೆ ಕಾಡಾನೆ ದಾಳಿಗೆ ಒಳಗಾಗಿದ್ದ ಕಾರ್ಮಿಕ ಸಾವು..

ಅರಣ್ಯ ಇಲಾಖೆ ಕಾವಲುಗಾರನ ಮೇಲೆ ದಾಳಿ: ಇತ್ತೀಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ಪ್ರದೇಶದ ಸೊಳ್ಳಾಪುರ ಎಂಬಲ್ಲಿ ಅರಣ್ಯ ಇಲಾಖೆಯ ಕಾವಲುಗಾರನ ಮೇಲೆ ಆನೆ ದಾಳಿ ನಡೆಸಿದ್ದು ಮಹದೇವಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಮಹದೇವಸ್ವಾಮಿ ರಾತ್ರಿ ವೇಳೆ ಕಾವಲಿನಲ್ಲಿದ್ದಾಗ ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟಿದ್ದರು. ಅಲ್ಲದೇ ಅಲ್ಲೇ ಇದ್ದ ಮತ್ತೊಬ್ಬ ವಾಚರ್​ ಮೇಲೂ ಆನೆ ದಾಳಿ ನಡೆಸಿತ್ತು. ಆದರೆ ಅವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

ಮತದಾನ ಮಾಡಿ ಬರುತ್ತಿದ್ದವನ ಮೇಲೆ ಕಾಡಾನೆ ದಾಳಿ: ಕಳೆದ ಮೇ 10 ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ದಿನದಂದು ಹನೂರು ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೆರೆ ಗ್ರಾಮದ ಮತಗಟ್ಟೆಗೆ ತೆರಳಿ ಮತದಾನ ಮಾಡಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಗದಿಗೇರಿ ದೇವಸ್ಥಾನದ ಸಮೀಪ ಮಾರ್ಟಳ್ಳಿ ಗ್ರಾಮದಲ್ಲಿ ವಾಸವಿರುವ ತೋಕೆರೆ ಗ್ರಾಮದ ಪುಟ್ಟಸ್ವಾಮಿ (42) ಎಂಬ ವ್ಯಕ್ತಿಯ ಮೇಲೆ ಕಾಡಾನೆ ತುಳಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿತ್ತು.

ಇದನ್ನೂ ಓದಿ: ಕೊಡಗಿನಲ್ಲಿ ಕಾಡಾನೆ ಹಾವಳಿ.. ದಂತದಿಂದ ಚುಚ್ಚಿ ವ್ಯಕ್ತಿಯನ್ನ ಬರ್ಬರವಾಗಿ ಕೊಂದ ಸಲಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.