ETV Bharat / state

ಕೊರೊನಾ ತಪಾಸಣೆಗೆ ಸ್ಮಾರ್ಟ್ ಕಿಯೋಸ್ಕ್ ನೀಡಿದ ವಿಪ್ರೋ ಸಂಸ್ಥೆ - Wipro company given smart kiosk for corona inspection ..!

ವಿಪ್ರೋ ಜಿಇ ಹೆಲ್ತ್ ಕೇರ್ ಸಹಯೋಗದೊಂದಿಗೆ ಸ್ಮಾರ್ಟ್ ಕಿಯೋಸ್ಕ್ ಗಳನ್ನು ಸಿದ್ಧಪಡಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದಲ್ಲಿ ಇವುಗಳಿಗೆ ಚಾಲನೆ ನೀಡಿದ್ದಾರೆ.

wipro smart kiosk
ಕೊರೊನಾ ತಪಾಸಣೆಗೆ ಸ್ಮಾರ್ಟ್ ಕಿಯೋಸ್ಕ್ ನೀಡಿದ ವಿಪ್ರೋ ಸಂಸ್ಥೆ
author img

By

Published : May 27, 2020, 3:59 PM IST

ಬೆಂಗಳೂರು: ಕರ್ನಾಟಕ ಸರ್ಕಾರವು ವಿಪ್ರೋ ಜಿ ಇ ಹೆಲ್ತ್ ಕೇರ್ ಸಹಯೋಗದೊಂದಿಗೆ, ಜನಸಂಖ್ಯೆ ಆಧಾರಿತ ಕೋವಿಡ್ -19 ಪರೀಕ್ಷೆಗಾಗಿ 'ಸ್ಮಾರ್ಟ್‌ ಕಿಯೋಸ್'ಗಳನ್ನು ಕೊರೊನಾ ಪತ್ತೆಗೆ ಬಳಸಲು ಮುಂದಾಗಿದೆ. ವಿಪ್ರೊ ಜಿಇ ಹೆಲ್ತ್ ಕೇರ್ ಸಿಎಸ್‌ಆರ್ ಇನಿಶಿಯೇಟಿವ್ ಕಾರ್ಯಕ್ರಮದಡಿ ಈ ಸ್ಮಾರ್ಟ್ ಕಿಯೋಸ್ಕ್ ಗಳನ್ನು ಸಿದ್ಧಪಡಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದಲ್ಲಿ ಇವುಗಳಿಗೆ ಚಾಲನೆ ನೀಡಿದರು.

ಈ ಅತ್ಯಾಧುನಿಕ 'ಸ್ಮಾರ್ಟ್‌ ಕಿಯೋಸ್ಕ್ ಗಳು' ಮಾದರಿ ಸಂಗ್ರಹಣೆ ನಡೆಯುತ್ತಿರುವಾಗ ಆರೋಗ್ಯ ಸಿಬ್ಬಂದಿ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಆರೋಗ್ಯ ಕಾರ್ಯಕರ್ತರು ಮತ್ತು ಶಂಕಿತ ರೋಗಿಗಳ ನಡುವಿನ ಯಾವುದೇ ಸಂಪರ್ಕವನ್ನು ತೊಡೆದು ಹಾಕಲು ಸಹಾಯ ಮಾಡುತ್ತವೆ. ಇದರಿಂದಾಗಿ ಆರೋಗ್ಯ ಕಾರ್ಯಕರ್ತೆಯರು ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ಕಡಿಮೆಯಾಗುತ್ತದೆ.

ಕೊರೊನಾ ತಪಾಸಣೆಗೆ ಸ್ಮಾರ್ಟ್ ಕಿಯೋಸ್ಕ್ ನೀಡಿದ ವಿಪ್ರೋ ಸಂಸ್ಥೆ

ಇವು ಎರಡು ಆವರಣಗಳನ್ನು ಒಳಗೊಂಡಿದ್ದು, ಎರಡೂ ಆವರಣಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳು, ಬೆಳಕು ಮತ್ತು ಗಾಳಿಯಾಡುವ ವ್ಯವಸ್ಥೆ ಮಾಡಲಾಗಿದೆ. ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ನಾಗರಿಕರ ನಡುವಿನ ಸಂವಹನಕ್ಕೆ ಮೈಕ್ ಮತ್ತು ಸ್ಪೀಕರ್​​​​​ನ್ನು ಹೊಂದಿವೆ. ಸುರಕ್ಷಿತ ಮಾದರಿ ಸಂಗ್ರಹಣೆಯನ್ನು ಸಕ್ರಿಯಗೊಳಿಸಲು, ಒಂದು ಜೋಡಿ ಬದಲಾಯಿಸಬಹುದಾದ ಕೈಗವಸುಗಳನ್ನು, ಮತ್ತು ನೈರ್ಮಲ್ಯಗೊಳಿಸುವ ಜೆಲ್ ವಿತರಕವನ್ನು ಹೊಂದಿದೆ.

ಮೊದಲ ಹಂತದಲ್ಲಿ ಈ ಕಿಯೋಸ್ಕ್ ಗಳನ್ನು ಬೆಂಗಳೂರಿನಲ್ಲಿ 15 ಸ್ಥಳಗಳಲ್ಲಿ ಇರಿಸಲು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗೆ ಕಳಿಸುವ ಯೋಜನೆಯನ್ನು ಕೂಡ ಸರ್ಕಾರ ಹೊಂದಿದೆ. ಮೊದಲನೇ ಲಾಟ್​​​ನಲ್ಲಿ 4 ಘಟಕಗಳು ಇಂದು ಪ್ರಾರಂಭವಾಗುತ್ತವೆ. ಎರಡನೇ ಲಾಟ್ ನಲ್ಲಿ 5 ಘಟಕಗಳನ್ನು ಮೇ 29 ರಂದು ನಿಯೋಜಿಸಲಾಗುವುದು. ಹಾಗೂ ಮೂರನೇ ಲಾಟ್​​​ನಲ್ಲಿ 6 ಘಟಕಗಳನ್ನು ಜೂನ್ 1ರಂದು ನಿಯೋಜಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.