ETV Bharat / state

ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ... ಸಿಎಂ ಭೇಟಿ ಮಾಡಿದ ವಿಚಾರ ತಿಳಿಸಿದ ಕೆ.ಎಚ್.ಮುನಿಯಪ್ಪ - ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್​ ಮುಖಂಡ ಕೆ ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಸಿಎಂರನ್ನು ಯಾಕೆ ಭೇಟಿ ಮಾಡಿದ್ದೆ ಎಂಬುದನ್ನೂ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ
ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ
author img

By

Published : Aug 26, 2022, 4:39 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ ಎಂದು ಕೆ.ಹೆಚ್.ಮುನಿಯಪ್ಪ ತಿಳಿಸಿದರು. ಪಕ್ಷ ತೊರೆಯುವ ವಿಚಾರವಾಗಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ. ಪಕ್ಷದ ಸಕ್ರಿಯ ಕಾರ್ಯಕ್ರಮಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಲ್ಲವೂ ಊಹಾಪೋಹಗಳಷ್ಟೇ ಎಂದರು.

ಪಕ್ಷಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ: ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಹೈಕಮಾಂಡ್​​ಗೆ ಎಲ್ಲವೂ ಕೂಡ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ. ಸುರ್ಜೆವಾಲಾ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಸುಧಾಕರ್ ತಂದೆ ಜೊತೆಗೆ 40 ವರ್ಷದ ಒಡನಾಟವಿದೆ. ಸುಧಾಕರ್ ಜೊತೆಗೂ ಕೂಡ ಒಡನಾಟವಿದೆ, ಅದು ರಾಜಕೀಯ ವಿಚಾರವಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ

ಸಿಎಂ ಭೇಟಿ ಮಾಡಿದ್ದೇಕೆ?: ಆದಿಜಾಂಬವ 2 ಸಾವಿರ ವರ್ಷಗಳ ಇತಿಹಾಸ ಇರುವ ಮಠ. ಕಡಪ, ಆಂಧ್ರ, ತಮಿಳುನಾಡಿನಲ್ಲಿ ಮಠಗಳಿವೆ. ಇವತ್ತು ಸಿಎಂ ಭೇಟಿ ಮಾಡಿ ಮನವಿ ಕೊಟ್ಟು ಚಿಕ್ಕಬಳ್ಳಾಪುರ, ಕೋಲಾರ, ಆವಣಿಯಲ್ಲಿ ಮಠದ ವಿಚಾರವಾಗಿ ಚರ್ಚಿಸಿದ್ದೇನೆ. ಮಠಕ್ಕೆ ಭೂಮಿಯನ್ನೂ ಕೊಡಬೇಕು, ಅನುದಾನವನ್ನು ಕೊಡಬೇಕು ಅಂತ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮಠ ಅಭಿವೃದ್ಧಿ ಆಗಬೇಕು, ಶೈಕ್ಷಣಿಕ ಸಂಸ್ಥೆ ಮಾಡಬೇಕು ಅಂತ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ತೀರಾ ಅವಶ್ಯಕತೆ ಇರೋದ್ರಿಂದ ಮಂತ್ರಿಗಳ ಮೂಲಕ ಭೇಟಿ ಮಾಡಿದ್ದೇವೆ ಎಂದು ತಿಳಿಸಿದರು.

ಗುಲಾಂ ನಬಿ ಆಜಾದ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಗುಲಾಂ ನಬಿ ಆಜಾದ್ 40 ವರ್ಷಗಳಿಂದ ಪಕ್ಷದಲ್ಲಿ ಇದ್ದವರು. ಅವರಿಗೆ ಹೀಗೆ ಆಗಬಾರದಿತ್ತು. ಬಹಳಷ್ಟು ವಿಚಾರಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈಗ ಪಕ್ಷದಲ್ಲಿ ಇದ್ದೇನೆ ಮುಂದುವರಿಯುತ್ತೇನೆ ಎಂದಷ್ಟೇ ಹೇಳಿದರು.

ಇದನ್ನೂ ಓದಿ: ಶೇ 40 ಕಮಿಷನ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.