ETV Bharat / state

ಸುಪಾರಿಕೊಟ್ಟು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ: ಐವರು ಆರೋಪಿಗಳ ಬಂಧನ

ಸರ್ವರಿ ಬೇಗಂ ಎಂಬ ಮಹಿಳೆ 4.5 ಲಕ್ಷ ರೂ.ಗೆ ಗಂಡನನ್ನು ಕೊಲ್ಲುವಂತೆ ಸುಪಾರಿ ನೀಡಿ, ಕೊಲೆ ಮಾಡಿಸಿದ್ದಳು. ಇದೀಗ ರಾಜಗೋಪಾಲನಗರ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Wife who murdered her husband
ಸುಪಾರಿಕೊಟ್ಟು ಪತಿಯನ್ನೇ ಕೊಲೆಗೈಸಿದಿದ್ದ ಪತ್ನಿ
author img

By

Published : Mar 1, 2021, 5:46 PM IST

ಬೆಂಗಳೂರು: ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ಮೊಹಮ್ಮದ್ ಹಂಜಲನನ್ನು ಸುಪಾರಿ ನೀಡಿ ಪತ್ನಿ ಸರ್ವರಿ ಬೇಗಂ ಕೊಲೆ ಮಾಡಿಸಿದ್ದಳು.

Wife who murdered her husband
ಸುಪಾರಿಕೊಟ್ಟು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ

ತಾಯಿಯ ಈ ಕೃತ್ಯಕ್ಕೆ ಸಹಾಯ ಮಾಡಿದ ಮಗ ಶಫಿಉರ್ ರೆಹಮಾನ್​ನನ್ನು ಕೂಡ ಬಂಧಿಸಲಾಗಿದೆ. ಫೆಬ್ರವರಿ 10 ರಂದು ಈ ಮರ್ಡರ್​ ನಡೆದಿತ್ತು. ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಬಳಿಕ ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು.

ಪುತ್ರ ಶಫಿಉರ್ ರೆಹಮಾನ್, ಅಪ್ತಾಬ್, ಮೊಹಮ್ಮದ್ ಸೈಫ್, ಸೈಯದ್ ಅವೇಜ್​ರಿಂದ ಈ ಕೃತ್ಯ ನಡೆದಿತ್ತು. ಕೊಲೆ ಮಾಡಲು 4.5 ಲಕ್ಷ ರೂ.ಗೆ ಸುಪಾರಿ ನೀಡಲಾಗಿತ್ತು. ಕೊಲೆಗೈದು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ನಂಬಿಸಲಾಗಿತ್ತು.

ಓದಿ:WATCH: ಹೊಸಪೇಟೆ ಕೋರ್ಟ್​ ಆವರಣದಲ್ಲಿ ವಕೀಲನ ಹತ್ಯೆಯ ಮೈ ಜುಂ ಎನ್ನುವ ದೃಶ್ಯ

ರಾಜಗೋಪಾಲನಗರ ಪೊಲೀಸರ ತನಿಖೆ ವೇಳೆ ಈ ಸತ್ಯ ಬಟಾಬಯಲಾಗಿದ್ದು, ಪೋಸ್ಟ್ ಮಾರ್ಟ್ಂ ರಿಪೋರ್ಟ್​ನಲ್ಲಿ ಕೂಡ ಇದು ಸಾಬೀತಾಗಿದೆ. ಸದ್ಯ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಿಂದ 98 ಸಾವಿರ ರೂ. ಮೌಲ್ಯದ ಮೂರು ಮೊಬೈಲ್ ಜಪ್ತಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.