ETV Bharat / state

ಅಕ್ರಮ ಸಂಬಂಧ ಹೊಂದಿ ಕಿರುಕುಳ ನೀಡುತ್ತಿದ್ದ ಗಂಡನ ಕೊಂದು ಶೌಚಗುಂಡಿಗೆ ಶವ ಎಸೆದ ಪತ್ನಿ, ಸಹೋದರಿ ಬಂಧನ - ​ ETV Bharat Karnataka

ಗಂಡನನ್ನು ಕೊಲೆಗೈದ ಆರೋಪಿಗಳು ಶವವನ್ನು ಮೂಟೆ ಕಟ್ಟಿ ಶೌಚ ಗುಂಡಿಗೆ ಎಸೆದಿದ್ದರು.

ಗಂಡನನ್ನು ಹತ್ಯೆಗೈದ ಹೆಂಡತಿ, ಆಕೆ ಸಹೋದರಿ ಬಂಧನ

author img

By ETV Bharat Karnataka Team

Published : Oct 19, 2023, 9:53 PM IST

ಬೆಂಗಳೂರು: ಮಾನಸಿಕ ಕಿರುಕುಳ ತಾಳಲಾರದೆ ತಂಗಿಯೊಂದಿಗೆ ಸೇರಿ ಗಂಡನನ್ನು ಹತ್ಯೆಗೈದು ಶವವನ್ನು ಬೆಡ್‌ಶೀಟ್​ನಲ್ಲಿ ಸುತ್ತಿ ಶೌಚಗುಂಡಿಯಲ್ಲಿ ಬಿಸಾಕಿದ್ದ ಆರೋಪದಡಿ ಪತ್ನಿ ಹಾಗೂ ಸಹೋದರಿಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಂಪಿಗೆಹಳ್ಳಿಯ ಕೋಗಿಲು ರಸ್ತೆಯ 3ನೇ ಕ್ರಾಸ್ ನಿವಾಸಿಯಾಗಿದ್ದ ಬಿಹಾರ ಮೂಲದ ಶಕೀಲ್ ಅಕ್ತರ್ ಸೈಪಿ (28) ಎಂಬಾತನನ್ನು ಕೊಲೆಗೈದ ಆರೋಪದಡಿ ಪತ್ನಿ ನಾಜೀರಾ, ಸಹೋದರಿ ಕಶ್ಮೀರಿ ಎಂಬವರನ್ನು ಬಂಧಿಸಲಾಗಿದೆ.

ಸಂಪೂರ್ಣ ವಿವರ: ನಗರದಲ್ಲಿ ಕಳೆದ 10 ವರ್ಷಗಳಿಂದ ವಾಸವಾಗಿದ್ದ ಶಕೀಲ್​, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದರಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಪತ್ನಿ ನಾಜೀರಾಳನ್ನು ಬಿಹಾರದಿಂದ ಕೆಲ ತಿಂಗಳ ಹಿಂದೆ ಕರೆಯಿಸಿಕೊಂಡಿದ್ದ. ಗಂಡ-ಹೆಂಡತಿ ಹಾಗೂ ಆರೋಪಿತೆ ಕಶ್ಮೀರಿ ಎಂಬಾಕೆ ಒಂದೇ ಕಡೆ ವಾಸ ಮಾಡುತ್ತಿದ್ದರು. ಆದರೆ, ಅ.14ರಂದು ಕೋಗಿಲು ಬಳಿಯ ಖಾಲಿ ನಿವೇಶನದ ಬಳಿಯ ಶೌಚಗುಂಡಿ ಬಳಿ ಬೆಡ್ ಶೀಟ್​ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದು ಪರಿಶೀಲಿಸಿದ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ಪ್ರಿಯಕರನೊಂದಿಗೆ ಸೇರಿ ಅತ್ತೆಯ ಹತ್ಯೆ, ಮೊಬೈಲ್​ ಚಾಟಿಂಗ್​ನಿಂದ ಸಂಚು ಬಯಲು: ಸೊಸೆ ಸಹಿತ ಮೂವರ ಬಂಧನ

ಶವ ಪತ್ತೆಯಾದ ನಾಲ್ಕು ದಿನಗಳ ಹಿಂದೆ ಅ.10ರಂದು ನಾಜೀರಾ ತನ್ನ ಗಂಡ ಶಕೀಲ್ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ನಾಜೀರಾನನ್ನು ಕರೆಸಿ ಶವ ತೋರಿಸಿದಾಗ ಈತನೇ ನನ್ನ ಗಂಡ ಎಂದು ಗುರುತಿಸಿದ್ದಳು. ಆದರೆ, ಕೊಲೆಯಾದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ನಾಜೀರಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೊಲೆ ಸಂಗತಿ ಬಾಯ್ಬಿಟ್ಟಿದ್ದಾಳೆ. ಕೃತ್ಯದಲ್ಲಿ ತಂಗಿ ಭಾಗಿಯಾಗಿರುವುದಾಗಿ ಹೇಳಿಕೆ ನೀಡಿದ್ದಳು.

ಕೊಲೆಗೆ ಅಕ್ರಮ ಸಂಬಂಧ ಕಾರಣ: ಕೊಲೆಯಾದ ಶಕೀಲ್ ಪರಸ್ತ್ರೀಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು. ಇದೇ ವಿಚಾರಕ್ಕಾಗಿ ದಂಪತಿ ನಡುವೆ ಜಗಳ ನಡೆಯುತಿತ್ತು. ಅಲ್ಲದೆ ಹೆಂಡತಿಗೆ ಮಾನಸಿಕ ಕಿರುಕುಳವನ್ನೂ ನೀಡುತ್ತಿದ್ದು, ಇದರಿಂದ ಬೇಸತ್ತಿದ್ದ ಪತ್ನಿ, ತಂಗಿಯೊಂದಿಗೆ ಸೇರಿ ಹತ್ಯೆಗೆ ನಿರ್ಧರಿಸಿದ್ದಳು. ಕೆಲಸ ಮುಗಿಸಿ ಮನೆಗೆ ಬಂದಿದ್ದ ಶಕೀಲ್‌ನನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಶವ ಮೂಟೆಕಟ್ಟಿ ಬೆಡ್ ಶೀಟ್‌ನಿಂದ ಸುತ್ತಿ ನಿವೇಶನವೊಂದರಲ್ಲಿ ಬಿಸಾಕಿ ಏನೂ ಗೊತ್ತಿಲ್ಲದಂತೆ ನಟಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹತ್ಯೆಗೈದು ಮೂಟೆ ಕಟ್ಟಿರುವ ಸ್ಥಿತಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಶವ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.