ETV Bharat / state

ಆಗ ಹೆಂಡತಿ ಕಾಣೆ ಎಂದು ಗಂಡ ದೂರು: ಈಗ ಪತಿ ನಾಪತ್ತೆ ಎಂದು ಪೊಲೀಸ್​ ಮೊರೆ ಹೋದ ಪತ್ನಿ! - ಮಗನ ಕೈಗೆ ಮೊಬೈಲ್ ಕೊಟ್ಟು ಮನೆ ಬಿಟ್ಟು ಹೋಗಿದ್ದಾರೆ

ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಗಂಡ ನೀಡಿದ ದೂರಿನ ಮೇರೆಗೆ ಪೊಲೀಸರು ತವರು ಮನೆ ಸೇರಿದ್ದ ಪತ್ನಿಯನ್ನು ಕರೆತಂದ ಕಲವೇ ದಿನಗಳಲ್ಲಿ ಗಂಡ ನಾಪತ್ತೆಯಾಗಿದ್ದಾನೆ.

wife-went-for-police-help-for-her-husband-missing
ಆಗ ಹೆಂಡತಿ ಕಾಣೆ ಎಂದು ಗಂಡ ದೂರು: ಈಗ ಪತಿ ನಾಪತ್ತೆ ಎಂದು ಪೊಲೀಸ್​ ಮೊರೆ ಹೋದ ಪತ್ನಿ!
author img

By

Published : Mar 22, 2023, 8:31 PM IST

ಬೆಂಗಳೂರು: ಹೆಚ್ಚಾಗಿ ಫೋನ್​ನಲ್ಲಿ ಮಾತನಾಡುತ್ತಿದ್ದ ವಿಚಾರವಾಗಿ ದಂಪತಿ‌ ನಡುವಿನ ಜಗಳವೊಂದು ಪೊಲೀಸರನ್ನು ಕಕ್ಕಾಬಿಕ್ಕಿಯಾಗಿಸಿದೆ. ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಗಂಡ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತವರು ಮನೆ ಸೇರಿದ್ದ ಪತ್ನಿಯನ್ನ ಕರೆತಂದ ಕೆಲವೇ ದಿನಗಳಲ್ಲಿ ಗಂಡ ಕಣ್ಮರೆಯಾಗಿದ್ದಾನೆ. ಈಗ ಹೆಂಡತಿ ನನ್ನ ಗಂಡನನ್ನ ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಳಕಿಗೆ ಬಂದಿದೆ.

ಅಶೋಕ್ ಹಾಗೂ ಸುಕನ್ಯಾ ದಂಪತಿ ಕೋಣನಕುಂಟೆಯ ವಡ್ಡರಪಾಳ್ಯ ನಿವಾಸಿಗಳಾಗಿದ್ದಾರೆ. ದಂಪತಿಗೆ‌ ಇಬ್ಬರು ಮಕ್ಕಳಿದ್ದಾರೆ‌.‌ ಸುಕನ್ಯಾ ಹೆಚ್ಚಾಗಿ ಫೋನ್​ನಲ್ಲಿ ಮಾತನಾಡುತ್ತಾಳೆ ಎಂಬ ವಿಚಾರಕ್ಕೆ ಅಶೋಕ್ ಕ್ಯಾತೆ ತೆಗೆದಿದ್ದರು.‌ ನಂತರ ಇಬ್ಬರ ನಡುವೆ ಜಗಳವಾಗಿದೆ.‌‌ ಮುನಿಸಿಕೊಂಡ ಪತ್ನಿಯು ವಾಟ್ಸಾಪ್ ಮಾಡಿ 'ನಾನು ಹೋಗುತ್ತಿದ್ದೇನೆ ಎಂದಿಗೂ ಮನೆಗೆ ಬರುವುದಿಲ್ಲ.‌ ಇಬ್ಬರು ಮಕ್ಕಳಿದ್ದಾರೆ ಬೇಗ ಮನೆಗೆ ಹೋಗು‌.‌ ಇದೇ ನನ್ನ‌ ಕೊನೆ ಮೆಸ್ಸೇಜ್​ 'ಎಂದು ಮೆಸ್ಸೇಜ್​ ಮಾಡಿದ್ದಳು' ಈ ಸಂಬಂಧ‌ ಅಶೋಕ್ ‌ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಉತ್ತರ‌ಕನ್ನಡ ಜಿಲ್ಲೆಯ ಶಿರಸಿಯ ಮನೆಯಲ್ಲಿ ಇದ್ದ ಸುಕನ್ಯಾರನ್ನು ಪತ್ತೆ ಹಚ್ಚಿ ನಗರಕ್ಕೆ ಕರೆತಂದಿದ್ದರು. ಈ ವೇಳೆ ಮುನಿಸಿಕೊಂಡಿದ್ದ ದಂಪತಿ ಸಂಧಾನ ಮಾಡಿಕೊಂಡು ಮನೆಗೆ ಹೋಗಿದ್ದರು‌.‌

ಎಲ್ಲಾ ಸರಿಯಿದೆ ಅನ್ನುವಾಗಲೇ ಅಶೋಕ್ ಮಗನ ಕೈಗೆ ಮೊಬೈಲ್ ಕೊಟ್ಟು ಮನೆ ಬಿಟ್ಟು ಹೋಗಿದ್ದಾರೆ. ಎಷ್ಟೇ ಹುಡುಕಾಡಿದರೂ ಪ್ರಯೋಜನವಾಗದ ಕಾರಣ ಪತಿರಾಯನನ್ನ‌ ಹುಡುಕಿಕೊಡುವಂತೆ ಪತ್ನಿ ಕೋಣನಕುಂಟೆ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ರಿಮ್ಯಾಂಡ್​ ಹೋಮ್​ನ ಗೋಡೆ ಹಾರಿ 9 ಮಂದಿ ಬಾಲಾಪರಾಧಿಗಳು ಪರಾರಿ

ಯುವತಿಗೆ ಬಣ್ಣ ಹಚ್ಚಿದ್ದ ಯುವಕ, ಸುಪಾರಿ ಕೊಟ್ಟು ಯುವಕನಿಗೆ ಹಲ್ಲೆ ಮಾಡಿಸಿದ ಯುವತಿ!: ಹೋಳಿ ಹಬ್ಬದ ವೇಳೆ ಪಕ್ಕದ ಮನೆಯ ಯುವತಿಗೆ ಯುವಕನೊಬ್ಬ ಬಣ್ಣ ಹಚ್ಚಿದ ಪರಿಣಾಮ, ರೊಚ್ಚಿಗೆದ್ದ ಯುವತಿ ಯಾವುದೇ ಸಿನಿಮಾ ಸ್ಟೈಲ್​ಗೂ ಕಡಿಮೆ ಇಲ್ಲದಂತೆ ಸುಪಾರಿ ನೀಡಿ, ಯುವಕನನ್ನು ಕಿಡ್ನಾಪ್ ಮಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿಸಿರುವ ಆರೋಪ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಮಾ.17 ರಂದು ನಡೆದಿತ್ತು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಬೆಳಮಾರನಹಳ್ಳಿಯ ಬಿ.ಸಿ. ಮಧು ಎಂಬ ಕಾನೂನು ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿ ಸಿ ಮಧು ಮೈಮೇಲೆ ಕೆಲವರು ತೀವ್ರ ಹಲ್ಲೆ, ದೌರ್ಜನ್ಯ ಎಸಗಿದ್ದಾರೆ ಎಂದು ಆತನ ಪೋಷಕರು ಆರೋಪಿಸಿದ್ದಾರೆ.

ಪ್ರಕರಣ ಹಿನ್ನೆಲೆ ಏನು?: ಕೋಲಾರ ತಾಲೂಕು ಬೆಳಮಾರನಹಳ್ಳಿಯ ಕಾನೂನು ವಿದ್ಯಾರ್ಥಿ ಬಿ.ಸಿ. ಮಧು ಮಾರ್ಚ್​17 ರಂದು ಹೋಳಿ ಹಬ್ಬದಂದು ಅದೇ ಗ್ರಾಮದ ಎಂಜಿನಿಯರಿಂಗ್ ಓದುತ್ತಿದ್ದ ಪಕ್ಕದ ಮನೆಯ ಯುವತಿ ಅನು ಪ್ರಿಯಾಗೆ ಬಸ್​ನಲ್ಲಿ ಬಣ್ಣ ಹಚ್ಚಿದ್ದ. ಬಣ್ಣ ಹಚ್ಚಿದ್ದಕ್ಕೆ ಅನುಪ್ರಿಯಾ ಪಕ್ಕದ ದಾನಹಳ್ಳಿ ಗ್ರಾಮದ ಡಿ.ಎನ್.ಡಿ ಮಧು ಹಾಗೂ ಆತನ ಸಹಚರರಿಗೆ ಸುಪಾರಿ ಕೊಟ್ಟು ಬಣ್ಣಹಚ್ಚಿದ ಕಾನೂನು ವಿದ್ಯಾರ್ಥಿ ಬಿ ಸಿ ಮಧುಗೆ ಹಲ್ಲೆ ಮಾಡುವಂತೆ ತಿಳಿಸಿದ್ದಳು. ಈ ವೇಳೆ ಸುಪಾರಿ ಪಡೆದ D.N.D. ಮಧು ಅದೇ ಗ್ರಾಮದ ಪ್ರಮೋದ್, ಶಿವರಾಜ್, ಸುದರ್ಶನ್ ಅವರ ಸಹಾಯದಿಂದ ಮಧುಗೆ ದೂರವಾಣಿ ಮೂಲಕ ಗ್ರಾಮದ ಬೇಕರಿ ಬಳಿ ಬರುವಂತೆ ಕರೆಸಿಕೊಂಡು‌ ಅಲ್ಲಿಂದ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದರು ಎಂದು ಹಲ್ಲೆಗೊಳಗಾದ ಯುವಕನ ಸಂಬಂಧಿಕರು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.