ETV Bharat / state

ಲೈಂಗಿಕ ನಿರಾಸಕ್ತಿ ಹೊಂದಿದ್ದ ಪತಿಗೆ ಮಸಣದ ಹಾದಿ.. ಗಂಡನ ಕೊಂದ ಪತ್ನಿ, ಸುಪಾರಿ ಪ್ರಿಯಕರ ಅರೆಸ್ಟ್​ - ಲೈಂಗಿಕ ನಿರಾಸಕ್ತಿ ಹೊಂದಿದ್ದ ಪತಿಗೆ ಮಸಣದ ಹಾದಿ

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಪತ್ನಿ ಮತ್ತು ಬಾಯ್​​ಫ್ರೆಂಡ್​ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

wife killed her husband with help of lover
ಪತಿಯನ್ನು ಸಾಯಿಸಲು ಪ್ರಿಯಕರನಿಗೆ ಸುಪಾರಿ‌ ನೀಡಿದ ಪತ್ನಿ
author img

By

Published : Nov 13, 2022, 3:07 PM IST

Updated : Nov 13, 2022, 3:18 PM IST

ಬೆಂಗಳೂರು: ಪತಿಗೆ ಮದ್ಯ ಕುಡಿಸಿ‌ ನಶೆಯಲ್ಲಿರುವಾಗಲೇ ಪ್ರಿಯತಮನ ಜೊತೆಗೂಡಿ ಗಂಡನನ್ನೇ ಮನೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದಡಿ ವಿದ್ಯಾರಣ್ಯಪುರ ಪೊಲೀಸರು ಮೃತನ ಪತ್ನಿ ಹಾಗು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ರಾಕೇಶ್ ತೋಮಾಂಗ (52) ಅವರನ್ನು ಕೊಲೆಗೈದ ಆರೋಪದಡಿ ಪತ್ನಿ ದೇವಿ (46) ಮತ್ತು ಪ್ರಿಯಕರ ಅಸ್ಸೋಂ ಮೂಲದ ಜೈನುಲ್ ಅಲಿ(28) ಎಂಬುವರನ್ನು ಬಂಧಿಸಲಾಗಿದೆ. ಇದೇ ತಿಂಗಳು 6 ರಂದು ತನ್ನ ಗಂಡ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ದೇವಿ ಹೇಳಿದ್ದರು. ಆದರೆ ರಾಕೇಶ್ ಸಾವು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆ ಸಂಬಂಧಿಕರು ವಿದ್ಯಾರಣ್ಯಪುರ ಪೊಲೀಸರಿಗೆ‌ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆ ಸಂಗತಿಯನ್ನು ಬಯಲಿಗೆಳೆದಿದ್ದಾರೆ.

ಪತಿಯನ್ನು ಹತ್ಯೆಗೈದ ಪತ್ನಿ: ರಾಕೇಶ್ ಕಳೆದ 30 ವರ್ಷಗಳಿಂದ ವಡೇರಹಳ್ಳಿಯಲ್ಲಿ ವಾಸವಾಗಿದ್ದ. ಗಂಡ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರೆ, ಪತ್ನಿ ದೇವಿ ಮನೆಗೆಲಸ ಮಾಡಿಕೊಂಡಿದ್ದರು. ಪ್ರತಿದಿನ ಗಂಡನಿಗೆ ಊಟ ಕೊಡಲು ಹೋದ ದೇವಿಗೆ ಜೈನುಲ್ ಎಂಬಾತನ ಪರಿಚಯವಾಗಿ ಅದು ಬಳಿಕ ವಿವಾಹೇತರ ಸಂಬಂಧಕ್ಕೆ ತಿರುಗಿತ್ತು. ಕಳೆದ ಜುಲೈನಲ್ಲಿ ಇಬ್ಬರು ಓಡಿಹೋಗಿದ್ದರು. ಮತ್ತೆ ವಾಪಸ್ ಬಂದ ದೇವಿಗೆ ಜೈನುಲ್‌ ಸಹವಾಸ ಬಿಡುವಂತೆ ಗಂಡ ತಾಕೀತು‌ ಮಾಡಿದ್ದರು. ಅದರೂ ಜೈನುಲ್ ಜೊತೆಗಿನ ಸಂಬಂಧವನ್ನು ದೇವಿ ಮುಂದುವರೆಸಿದ್ದರು. ಇದೇ ಕಾರಣಕ್ಕಾಗಿ ರಾಕೇಶ್ ಕುಡಿದು ಪತ್ನಿಯೊಂದಿಗೆ ಜಗಳವಾಡುತ್ತಿದ್ದರಂತೆ. ಇದರಿಂದ ಅಸಮಾಧಾನಗೊಂಡಿದ್ದ ಪತ್ನಿ ದೇವಿ ಪ್ರಿಯಕರನ ಬಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದರು.

ಇದನ್ನೂ ಓದಿ: ಮೈಸೂರು: ಕಾಡುಹಂದಿ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಹುಲಿ ಸಾವು

ಕುಡಿತದ ಚಟ ಅಂಟಿಸಿಕೊಂಡಿದ್ದ ರಾಕೇಶ್ ಲೈಂಗಿಕ ನಿರಾಸಕ್ತಿ ಹೊಂದಿದ್ದರು. ದಿನೇ ದಿನೇ ರಾಕೇಶ್ ಕಿರುಕುಳ ತಾಳಲಾರದ ದೇವಿ, ಪ್ರಿಯಕರನಿಗೆ ಗಂಡನ ಕೊಲ್ಲಲು ಸುಪಾರಿ ನೀಡಿದ್ದರು. ಇದರಿಂದ‌ ಜೈನುಲ್ ರೊಚ್ಚಿಗೆದ್ದು ಹತ್ಯೆ ಮಾಡಲು ನಿರ್ಧರಿಸಿದ್ದ. ಅದೇ ಪ್ರಕಾರ ವ್ಯವಸ್ಥಿತ ಸಂಚು ರೂಪಿಸಿಕೊಂಡು ಕಳೆದ ಅ.29 ರಂದು ಜೈನುಲ್​ರನ್ನು ಕರೆಸಿ ಮನೆಯ ಸ್ಟೋರ್ ರೂಮ್ ನಲ್ಲಿ ಪತ್ನಿ ಕೂರಿಸಿದ್ದರು. 9 ದಿನಗಳಲ್ಲಿ ಕೊಲೆ ಯತ್ನ ವಿಫಲಗೊಂಡ ಬಳಿಕ ನ.6 ರಂದು ಗಂಡನಿಗೆ ಮದ್ಯ ಕುಡಿಸಿ, ಕಬಾಬ್ ನೀಡಿದ್ದರು. ರಾಕೇಶ್ ನಶೆಯಲ್ಲಿ ಮಲಗಿರುವಾಗಲೇ ಇಬ್ಬರು ಜೊತೆಗೂಡಿ ಕತ್ತುಹಿಸುಕಿ ಹತ್ಯೆ ಮಾಡಿದ್ದಾರೆ‌.‌ ಕೃತ್ಯದ ಬಳಿಕ ಜೈನುಲ್ ತಮಿಳುನಾಡಿಗೆ ಪರಾರಿಯಾದರೆ, ಹೆಂಡತಿ ದೇವಿ ಏನು ಗೊತ್ತಿಲ್ಲದಂತೆ ನಟಿಸಿದ್ದರು. ಸದ್ಯ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಎಂದು ವಿದ್ಯಾರಣ್ಯಪುರ ಪೊಲೀಸರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Last Updated : Nov 13, 2022, 3:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.