ETV Bharat / state

ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ ಪತಿಯ ಎದೆಗೆ ಚಾಕು ಇರಿದು ಹತ್ಯೆ ಮಾಡಿದ ಹೆಂಡತಿ - ಹುಳಿಮಾವು

ಅನೈತಿಕ ಸಂಬಂಧದ ಸಂಶಯ ವ್ಯಕ್ತಪಡಿಸಿದ್ದರಿಂದ ಕುಪಿತಗೊಂಡ ಪತ್ನಿ ತನ್ನ ಪತಿಯ ಎದೆಗೆ ಚೂರಿ ಇರಿದಿದ್ದು, ರಕ್ತಸ್ರಾವದಿಂದ ಆತ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಾಕು ಇರಿದು ಹತ್ಯೆ
ಚಾಕು ಇರಿದು ಹತ್ಯೆ
author img

By ETV Bharat Karnataka Team

Published : Dec 21, 2023, 2:06 PM IST

ಬೆಂಗಳೂರು: ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿದ ಪತಿಯ ಎದೆಗೆ ಪತ್ನಿ ಚೂರಿ ಇರಿದು ಹತ್ಯೆ ಮಾಡಿರುವ ಘಟನೆ ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಕಾಲೇಜಿನ ಬಳಿ ಬುಧವಾರ ತಡರಾತ್ರಿ ನಡೆದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೊಲೀಸರು ಆರೋಪಿ ಪತ್ನಿ ಮನೀಷಾಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಉಮೇಶ್ ದಾಮಿ(27) ಸಾವನ್ನಪ್ಪಿರುವ ವ್ಯಕ್ತಿ. ನೇಪಾಳ ಮೂಲದ ಈ ದಂಪತಿ ಕೆಲ ವರ್ಷಗಳಿಂದ ಬೆಂಗಳೂರಿಗೆ ಬಂದಿದ್ದರು. ಹುಳಿಮಾವಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಪತಿ ಕಾಲೇಜೊಂದರಲ್ಲಿ ಸೆಕ್ಯೂರಿಟಿಯಾಗಿದ್ದರೆ, ಪತ್ನಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು.

ಇಬ್ಬರು ಅನೋನ್ಯವಾಗಿದ್ದರು. ಆದರೆ, ಬುಧವಾರ ರಾತ್ರಿ ಉಮೇಶ್ ಸ್ನೇಹಿತನೊಂದಿಗೆ ಮದ್ಯದ ಪಾರ್ಟಿಗೆ ಹೋಗಿ ತಡರಾತ್ರಿ 12 ಗಂಟೆಗೆ ಮನೆಗೆ ಬಂದಿದ್ದನು. ಈ ವೇಳೆ, ಪತ್ನಿ ಯಾರೊಂದಿಗೋ ಪೋನ್​ ಕಾಲ್​ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ್ದಾನೆ. ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತಪಡಿಸಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ದಂಪತಿ ನಡುವೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ‌.

ಇದರಿಂದ ಕೋಪದಲ್ಲಿದ್ದ ಮನಿಷಾ ಮನೆಯಲ್ಲಿದ್ದ ಚಾಕುವಿನಿಂದ ಗಂಡನ ಎದೆಗೆ ಚುಚ್ಚಿದ್ದಾಳೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಉಮೇಶ್ ಸಾವನ್ನಪ್ಪಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಹತ್ಯೆ ಪ್ರಕರಣ ದಾಖಲಿಸಿಕೊಂಡು ಮನಿಷಾಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಸಹೋದರನ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.