ETV Bharat / state

ಅಶ್ಲೀಲ ವಿಡಿಯೋ ವೀಕ್ಷಿಸುವ ಪತಿಯ ವಿರುದ್ದ FIR ದಾಖಲಿಸಿದ ಪತ್ನಿ! - ಬೆಂಗಳೂರು ಸುದ್ದಿ,

ಅಶ್ಲೀಲ ವಿಡಿಯೋ ವೀಕ್ಷಿಸುವ ದುಶ್ಚಟಕ್ಕೆ ಬಿದ್ದಿದ್ದ ಪತಿಯ ವಿರುದ್ಧ ಎಫ್.ಐ.ಆರ್ ದಾಖಲಿಸಲು ಕೋರ್ಟ್ ಮೆಟ್ಟಿಲೇರಿದ್ದ ಪತ್ನಿಗೆ ಜಯ ಸಿಕ್ಕಿದೆ.

Wife filed FIR, Wife filed FIR against her husband, Wife filed FIR against her husband for watching porn, Bengaluru news, Bengaluru crime news, ಪತಿಯ ವಿರುದ್ದ ಎಫ್​ಐಆರ್​, ಅಶ್ಲೀಲ ವಿಡಿಯೋ ವೀಕ್ಷಿಸುವ ಪತಿಯ ವಿರುದ್ದ ಎಫ್​ಐಆರ್​, ಅಶ್ಲೀಲ ವಿಡಿಯೋ ವೀಕ್ಷಿಸುವ ಪತಿಯ ವಿರುದ್ದ ಎಫ್​ಐಆರ್​ ದಾಖಲಿಸಿದ ಪತ್ನಿ, ಬೆಂಗಳೂರು ಸುದ್ದಿ, ಬೆಂಗಳೂರು ಅಪರಾಧ ಸುದ್ದಿ,
ಅಶ್ಲೀಲ ವಿಡಿಯೋ ವೀಕ್ಷಿಸುವ ಪತಿಯ ವಿರುದ್ದ FIR ದಾಖಲಿಸಿದ ಪತ್ನಿ
author img

By

Published : Nov 5, 2021, 5:59 AM IST

Updated : Nov 5, 2021, 9:51 AM IST

ಬೆಂಗಳೂರು: ತನ್ನ ಗಂಡ ಪ್ರತಿದಿನ ಅಶ್ಲೀಲ ವಿಡಿಯೋ ನೋಡುತ್ತಾನೆ. ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಕಂಡಕಂಡ ಯುವತಿಯರ ಜತೆ ಲೈವ್ ವಿಡಿಯೋದಲ್ಲಿ ಮಾತನಾಡುತ್ತಾನೆ. ವೇಶ್ಯೆಯರ ಜೊತೆ ಚಾಟಿಂಗ್ ಮಾಡುತ್ತಾನೆ. ಅಷ್ಟೇ ಅಲ್ಲ ಪತ್ನಿಯಾದ ನಾನು ಜತೆಯಲ್ಲಿ ಇದ್ದರೂ ವಿಚ್ಛೇದಿತ ಎಂದು ಮ್ಯಾಟ್ರಿಮೋನಿಯಲ್‌ನಲ್ಲಿ ಪ್ರೊಫೈಲ್ ತೆರೆದಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಕಣ್ಣೀರು ಹಾಕುತ್ತಾ ದೂರು ನೀಡಿದ್ದು, ಕೋರ್ಟ್ ಸೂಚನೆ ಮೇರೆಗೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿತ್ಯ ಮನೆಯಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ, ಪೋರ್ನ್ ವೆಬ್‌ಸೈಟ್ ಚಾಟಿಂಗ್ ಮಾಡುವುದನ್ನು ಪ್ರಶ್ನಿಸಿದಕ್ಕೆ ಕಿರುಕುಳ ನೀಡಿ ಹಿಂಸೆ ನೀಡುತ್ತಿರುವುದಾಗಿ ಮೊದಲು ಸಂತ್ರಸ್ತೆ ತನ್ನ ಗಂಡನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಳು. ಕೇಸ್ ದಾಖಲಿಸಲು ನಿರಾಕರಿಸಿದ ಪೊಲೀಸರು ಕೇವಲ ಚಾಟಿಂಗ್, ಅಶ್ಲೀಲ ವಿಡಿಯೋ ನೋಡಿದ್ದಕ್ಕೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಈ ಹಿನ್ನೆಲೆ ಮಹಿಳೆ 1ನೇ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರತಿದಿನ ಪೋರ್ನ್ ವಿಡಿಯೋ ವೀಕ್ಷಣೆಯಲ್ಲಿ ಪತಿ ನಿರತರಾಗುತ್ತಾನೆ. ಆನಂತರ ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಯುವತಿಯರ ಜತೆ ಲೈವ್ ವಿಡಿಯೋ ದುಶ್ಚಟಕ್ಕೆ ಬಿದ್ದಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದನಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದಿತ ಎಂದು ಪೋಸ್ಟ್ ಹಾಕಿಕೊಂಡಿದ್ದಾನೆ ಎಂದು ಪತಿಯ ವಿರುದ್ಧ ಪತ್ನಿ ಆರೋಪಿಸಿದ್ದರು.

ಆ್ಯಪ್, ಟೆಲಿಗ್ರಾಂ ಆ್ಯಪ್‌ನಲ್ಲಿ ಖಾತೆ ತೆರೆದು ವೇಶ್ಯೆಯರ ಜೊತೆ ಚಿಟ್ ಚಾಟ್ ಮಾಡುತ್ತಾನೆ. ಅಪರಿಚಿತ ವ್ಯಕ್ತಿಗಳಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿ ಅಶ್ಲೀಲವಾಗಿ ಸಂಭಾಷಣೆ ನಡೆಸುತ್ತಾನೆ. ಬೇರೆ ಹುಡುಗಿಯರ ಜತೆ ಫೋಟೋ ತೆಗೆಸಿಕೊಂಡು ದಂಪತಿ ಎಂದು ಹೇಳಿಕೊಳ್ಳುತ್ತಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ವಿಚ್ಛೇದಿತ ಎಂದ ಪ್ರೊಫೈಲ್ ಹಾಕಿಕೊಂಡು 2ನೇ ಮದುವೆ ಆಗಲು ಯತ್ನಿಸುತ್ತಿದ್ದಾನೆ ಎಂದು ಪತಿಯ ವಿರುದ್ಧ ಪತ್ನಿ ಗಂಭೀರ ಆರೋಪ ಮಾಡಿದ್ದಾಳೆ.

ಎಫ್.ಐ.ಆರ್ ದಾಖಲಿಸಲು ಸೂಚನೆ : ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಬಸವನಗುಡಿ ಮಹಿಳಾ ಠಾಣೆಯ ಇನ್ಸ್​ಪೆಕ್ಟರ್​ಗೆ ಸೂಚಿಸಿದರು. ಈ ಮೇರೆಗೆ ಮಹಿಳೆಯ ಗಂಡನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪೊಲೀಸರ ತನಿಖೆ: ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Nov 5, 2021, 9:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.