ETV Bharat / state

ಮೈಗ್ರೇನ್‌ ಎಂದುಕೊಂಡಿದ್ದ ವ್ಯಕ್ತಿಯಲ್ಲಿ ಅಪರೂಪದ ನರಮಂಡಲದ ವಿಪ್ಪಲ್‌ ಕಾಯಿಲೆ ಪತ್ತೆ: ನಗರದ ವೈದ್ಯರಿಂದ ಯಶಸ್ವಿ ಚಿಕಿತ್ಸೆ.. - ಈಟಿವಿ ಭಾರತ್​ ಕನ್ನಡ ನ್ಯೂಸ್​

ಫೋರ್ಟಿಸ್‌ ಆಸ್ಪತ್ರೆಯ ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ ಈ ರೋಗದ ಮೂಲವನ್ನು ಕಂಡು ಹಿಡಿದಿದ್ದಾರೆ.

ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ

author img

By

Published : May 19, 2023, 8:09 PM IST

ಬೆಂಗಳೂರು : ವಿಶ್ವದಲ್ಲೇ ಒಂದು ಮಿಲಿಯನ್‌ ಜನರ ಪೈಕಿ ಒಬ್ಬರಲ್ಲಿ ಮಾತ್ರ ಕಂಡು ಬರುವ ಸೆಂಟ್ರಲ್ ನರ್ವಸ್ ಸಿಸ್ಟಮ್ (ಸಿಎನ್‌ಎಸ್‌) ವಿಪ್ಪಲ್‌ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದೆ. ಕೋಲ್ಕತ್ತಾ ಮೂಲದ 66 ವರ್ಷದ ವ್ಯಕ್ತಿಯು ಸುಮಾರು ವರ್ಷಗಳಿಂದ ಈ ಕಾಯಿಲೆಯಿಂದ ತಲೆನೋವಿಗೆ ಒಳಗಾಗಿ ಬಳಲುತ್ತಿದ್ದರು. ಮೈಗ್ರೇನ್‌ಗೆ ಬೇಕಾದ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ.

ಇದೀಗಾ ಫೊರ್ಟಿಸ್‌ ಆಸ್ಪತ್ರೆಯಲ್ಲಿ ನರವಿಜ್ಞಾನಿ ಡಾ. ಚಂದ್ರನ್ ಜ್ಞಾನಮುತ್ತು ಅವರ ತಂಡ ಈ ರೋಗದ ಮೂಲವನ್ನು ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ಮಾತನಾಡಿರುವ ಡಾ. ಚಂದ್ರನ್‌ ಅವರು, ಮೆದುಳಿನ ಕೇಂದ್ರ ನರಮಂಡದಲ್ಲಿ ವಿಪ್ಪಲ್‌ ಎನ್ನುವ ಒಂದು ವೈರಸ್‌ ಈ ನರಮಂಡಲದ ಮೇಲೆ ದಾಳಿ ಮಾಡಿ ವಿಪ್ಪಲ್‌ ಕಾಯಿಲೆ ಉಂಟು ಮಾಡಲಿದೆ.

ಇದು ಅತ್ಯಂತ ಅಪರೂಪದ ಕಾಯಿಲೆಯಾಗಿದ್ದು, ಒಂದು ಮಿಲಿಯನ್‌ ಜನರಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಕಂಡು ಬರಲಿದೆ. ಈ ಕಾಯಿಲೆ ಕುರಿತು ಸಾಕಷ್ಟು ಆಸ್ಪತ್ರೆ ಹಾಗೂ ವೈದ್ಯರಿಗೆ ಮಾಹಿತಿ ಇಲ್ಲ. ಹೀಗಾಗಿ ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಸಹ ಸವಾಲಿನ ಕೆಲಸ ಎಂದು ಹೇಳಿದರು.

66 ವರ್ಷದ ವ್ಯಕ್ತಿಯೊಬ್ಬರು, ತಮ್ಮ ಮೆದುಳಿನಲ್ಲಾಗುತ್ತಿರುವ ಬದಲಾವಣೆ ಹಾಗೂ ನೋವಿನಿಂದ ಆಸ್ಪತ್ರೆ ಸೇರಿದ್ದರು. ಆ ಸಂದರ್ಭದಲ್ಲಿ ಇದು ವಿಪ್ಪಲ್‌ ಕಾಯಿಲೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ತಲೆ ನೋವು ಹೆಚ್ಚಾಗುತ್ತಿದ್ದರಿಂದ ಇದು ಮೈಗ್ರೇನ್‌ ಎಂದು ತಪ್ಪಾಗಿ ಅರ್ಥೈಸಲಾಗಿತ್ತು. ಆದರೆ, ಈ ಕಾಯಿಲೆ ಕಾಲಕ್ರಮೇಣ ಹೆಚ್ಚಾಗುತ್ತಾ ಮೆದುಳನ್ನು ಆವರಿಸಿಕೊಳ್ಳಲು ಆರಂಭಿಸಿತ್ತು ಎಂದು ಚಿಕಿತ್ಸೆಯ ಕುರಿತು ಮಾಹಿತಿ ಡಾ. ಚಂದ್ರನ್‌ ನೀಡಿದರು.

ಇದನ್ನೂ ಓದಿ : ಆರೋಗ್ಯಕರ ಆಹಾರ ಯುಗ: ಪರಿಣಾಮಕಾರಿ ಊಟ ಯೋಜನೆ ರೂಪಿಸುವುದು ಹೇಗೆ?

ಚಿಕಿತ್ಸೆ ಆರಂಭವಾಗುಷ್ಟೆಲ್ಲೇ ಆ ವ್ಯಕ್ತಿ ವಿಪರೀತ ತಲೆ ನೋವು ಹಾಗೂ ದೈಹಿಕ ದೌರ್ಬಲ್ಯದಿಂದ ಕುಗ್ಗುತ್ತಾ ಹೋಗಿದ್ದರು. ಸುಮಾರು 8 ವರ್ಷಗಳ ನರಳಾಟದ ಬಳಿಕ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಈ ವೇಳೆ, ನಾವುಗಳು ಸೂಕ್ತ ಪರೀಕ್ಷೆ ನಡೆಸಿದ ಬಳಿಕ ಈ ವಿಲಕ್ಷಣ ಕಾಯಿಲೆ ಕಂಡು ಬಂದಿತು ಎಂದು ಡಾ. ಚಂದ್ರನ್‌ ಹೇಳಿದರು.

ನಂತರ ಕೂಡಲೇ ಅವರಿಗೆ ಇಂಟ್ರಾವೆನಸ್‌ ಸೇಫ್ಟ್ರಿಯಾಕ್ಸೋನ್‌ ವೈರಲ್‌ ಇಂಕ್ಷನ್‌ನನ್ನು ಪ್ರತಿ 12 ಗಂಟೆಗೊಮ್ಮೆ ನೀಡುತ್ತಾ ಬರಲಾಯಿತು. ಈ ಇಂಜಕ್ಷನ್‌ನನ್ನು ಭಯಾನಕ ವೈರಸ್‌ಗಳ ಕೊಲ್ಲುವಿಕೆಗೆ ನೀಡಲಾಯಿತು. ಹೀಗೆ ನಾಲ್ಕು ದಿನಗಳ ಕಾಲ ಸತತವಾಗಿ ನೀಡಲಾಯಿತು. 8 ವರ್ಷಗಳಿಂದ ಈ ಸೋಂಕಿನಿಂದ ಬಳಲುತ್ತಿದ್ದ ಇವರು ಇದೀಗಾ ಗುಣಮುಖರಾಗುತ್ತಿದ್ದಾರೆ. ಈ ಸೋಂಕನ್ನೂ ಪತ್ತೆ ಹಚ್ಚದೇ ಹಾಗೇ ಬಿಟ್ಟಿದ್ದರೆ ಜೀವಕ್ಕೆ ಮಾರಕವಾಗುತ್ತಿತ್ತು ಎಂದು ಡಾ. ಚಂದ್ರನ್‌ ವಿವರಿಸಿದರು.

ಇದನ್ನೂ ಓದಿ : ಪರಿಸರ ಕಾಳಜಿಗೆ ಶ್ರಮಿಸುತ್ತಿರುವ 7ರ ಪೋರ: ಮೂರ್ತಿ ಚಿಕ್ಕದಾದ್ರೂ ಈತನ ಸಾಧನೆ ದೊಡ್ಡದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.