ETV Bharat / state

ರೈಲು ಹಳಿ ತಪ್ಪಿದಾಗ ಏನು ಮಾಡಬೇಕು? ಎನ್‌ಡಿಆರ್‌ಎಫ್ ತಂಡದಿಂದ ಅಣುಕು ಪ್ರದರ್ಶನ

author img

By

Published : Mar 30, 2019, 2:39 AM IST

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈಲು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯ ಹೇಗಿರಲಿದೆ ಎನ್ನುವುದರ ಕುರಿತು ಎನ್‌ಡಿಆರ್‌ಎಫ್ ಅಣುಕು ಪ್ರದರ್ಶನ ಮಾಡಿದೆ.‌

ಎನ್‌ಡಿಆರ್‌ಎಫ್ ತಂಡದಿಂದ ಅಣುಕು ಪ್ರದರ್ಶನ

ಬೆಂಗಳೂರು: ಆ ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿ ಅಷ್ಟು ಜನ ಸಾವನ್ನಪ್ಪಿದರು. ಈ ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿ ಭಾರೀ ಅನಾಹುತ ಆಯ್ತು ಅನ್ನೋ‌ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀವಿ.‌ ಆದರೆ‌ ಇಂತಹ ಸಮಯದಲ್ಲಿ ಯಾವ ರೀತಿಯಲ್ಲಿ ಸ್ಪಂದಿಸಬೇಕೆಂಬ ಅಂದಾಜು ಇರುವುದಿಲ್ಲ. ಹೀಗಾಗಿ ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯದ ಬಗ್ಗೆ ಅಣು ಪ್ರದರ್ಶನ ನಡೆಸಿತು.

ಹಳಿ ತಪ್ಪಿದ ರೈಲಿನೊಳಗಿನ ಗಾಯಾಳುಗಳನ್ನು ರಕ್ಷಿಸಲು ಅಗತ್ಯವಾದ ಪರಿಕರಗಳು ಯಾವುವು. ವೈದ್ಯಕೀಯ ತಂಡದ ಸಿದ್ಧತೆ ಹೇಗಿರಬೇಕು. ಸಮಯಕ್ಕೆ ತಕ್ಕಂತೆ ಆತಂಕ ಪಡದೇ ಯಾವ ರೀತಿ ಸ್ಪಂದಿಸಬೇಕು. ಹೀಗೆ ಎಲ್ಲಾ ಇಲಾಖೆಗಳ ನಡುವಿನ ಸಮನ್ವಯತೆ ತರುವ ಉದ್ದೇಶದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಹಾದೇಪುರದಲ್ಲಿರುವ ಎನ್‌ಡಿಆರ್‌ಎಫ್ 10ನೇ ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್ ಕೆ.ಎಸ್.ಸುಭೀಷ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.

ಎನ್‌ಡಿಆರ್‌ಎಫ್ ತಂಡದಿಂದ ಅಣುಕು ಪ್ರದರ್ಶನ

ಅಣುಕು ಪ್ರದರ್ಶನ ಹೇಗಿತ್ತು?

ಕೆಎಸ್‌ಆರ್ ರೈಲು ನಿಲ್ದಾಣದ ಯಾರ್ಡ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಘಟನಾ ಸ್ಥಳಕ್ಕೆ ಕಬ್ಬಿಣ ತುಂಡರಿಸುವ ಯಂತ್ರ, ಡ್ರಿಲ್ಲಿಂಗ್ ಯಂತ್ರ, ಕಬ್ಬಿಣದ ಸರಳುಗಳನ್ನು ಬಗ್ಗಿಸುವ ಯಂತ್ರ ಹಾಗೂ ಗ್ಯಾಸ್ ಕಟ್ಟರ್ ಸಹಿತ ಅಗತ್ಯವಿರುವ ಎಲ್ಲ ಪರಿಕರಗಳ ಜತೆಗೆ ಆಗಮಿಸಿದ ಎನ್‌ಡಿಆರ್‌ಎಫ್ ಸಿಬ್ಬಂದಿ ಅಗ್ನಿಶಾಮಕ ದಳದ ಸಹಯೋಗದಲ್ಲಿ ಬೋಗಿಯ ಕಬ್ಬಿಣದ ಕಿಟಕಿ ಹಾಗೂ ಮೇಲ್ಛಾವಣಿ ತುಂಡರಿಸಿ 9 ಗಾಯಾಳುಗಳನ್ನು ರಕ್ಷಿಸುವ ದೃಶ್ಯ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.‌

ತಕ್ಷಣದಲ್ಲೇ ರೈಲ್ವೆ ವೈದ್ಯಕೀಯ ತಂಡ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದರು. ನಂತರದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ 140 ಟನ್ ತೂಕದ ಕ್ರೇನ್ ರೈಲಿನ ಅವಶೇಷ ತೆರವುಗೊಳಿಸಿತು. ಹೀಗೆ ಒಟ್ಟು 35 ಎನ್​ಡಿಆರ್​ಎಫ್ ಸಿಬ್ಬಂದಿ, ಕೆಎಸ್‌ಆರ್ ರೈಲು ನಿಲ್ದಾಣದ ಸಿಬ್ಬಂದಿ, ರೈಲ್ವೆ ಪೊಲೀಸರು, ರೈಲ್ವೆ ವೈದ್ಯಕೀಯ ವಿಭಾಗ, ರೈಲ್ವೆ ಮೆಕ್ಯಾನಿಕಲ್ ವಿಭಾಗ, ರೈಲ್ವೆ ಸಂವಹನ ವಿಭಾಗ, ರೈಲ್ವೆ ಸುರಕ್ಷತೆ ಹೀಗೆ ಹತ್ತಕ್ಕೂ ಅಧಿಕ ವಿಭಾಗದ 875ಕ್ಕೂ ಅಧಿಕ ಸಿಬ್ಬಂದಿ ಈ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

sample description

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.