ETV Bharat / state

ವಿಶ್ವಾಸಮತ ಯಾಚನೆ ವೇಳೆ ದೋಸ್ತಿ ನಾಯಕರ ತಂತ್ರಗಾರಿಕೆ ಏನು..? - ತಂತ್ರಗಾರಿಕೆ

ಇಂದು ಮಧ್ಯಾಹ್ನದ ಒಳಗಾಗಿ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಮಾಡಬೇಕಾಗಿರುವ ಹಿನ್ನೆಲೆ ಇಂದಿನ ಸದನದ ಕಲಾಪ ರೋಚಕ ತಿರುವು ಪಡೆದುಕೊಳ್ಳಲಿದೆ.

ವಿಶ್ವಾಸಮತ ಯಾಚನೆ ವೇಳೆ ದೋಸ್ತಿ ನಾಯಕರ ತಂತ್ರಗಾರಿಕೆ ಏನು..?
author img

By

Published : Jul 19, 2019, 11:32 AM IST

ಬೆಂಗಳೂರು: ಇಂದು ಮಧ್ಯಾಹ್ನ 1.30 ರ ಒಳಗೆ ವಿಶ್ವಾಸಮತ ಯಾಚಿಸಬೇಕೆಂದು ರಾಜ್ಯಪಾಲರು, ಸಿಎಂ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮೈತ್ರಿ ನಾಯಕರು ಬಹುಮತ ಸಾಬೀತಿನಲ್ಲಿ ತಂತ್ರಗಾರಿಕೆ ಬಳಸುತ್ತಾರೆಯೇ? ಎಂಬ ಕುತೂಹಲ ಮೂಡಿಸಿದೆ.

ದೋಸ್ತಿ ನಾಯಕರ ಮುಂದಿರುವ ಪ್ರಶ್ನೆಗಳೇನು..?
ರಾಜ್ಯಪಾಲರ ಸೂಚನೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅದನ್ನು ಪ್ರಶ್ನಿಸಬಹುದು. ಬಹುಮತ ಸಾಬೀತಿಗೆ ನಾವೇ ಮುಂದಾಗಿದ್ದು ಚರ್ಚೆಗೆ ಅವಕಾಶ ಬೇಕು. ಇಂದೇ ಬಹುಮತ ಸಾಬೀತು ಮಾಡುವ ಬದಲು ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಬಹುದು. ವಿಪ್ ಗೊಂದಲದ ಬಗ್ಗೆ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಆ ಗೊಂದಲ ಪರಿಹಾರದವರೆಗೆ ಬಹುಮತ ಸಾಬೀತಿಗೆ ತಡೆ ನೀಡುವಂತೆ ಮನವಿ ಮಾಡಬಹುದು. ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಪ್ರಕ್ರಿಯೆ ಮುಗಿಯುವವರೆಗೆ ಬಹುಮತ ಸಾಬೀತಿಗೆ ತಡೆಕೋರಬಹುದು. ರಾಜ್ಯಪಾಲರು ಅನಗತ್ಯ ಮಧ್ಯ ಪ್ರವೇಶ ಮಾಡಿದ್ದಾರೆ ಎಂದು ಪ್ರತಿಭಟಿಸಬಹುದು. ರಾಜ್ಯಪಾಲರ ವರ್ತನೆ ಖಂಡಿಸಿ ರಾಜಕೀಯ ಒತ್ತಡ ಹೆಚ್ಚುವಂತೆ ಮಾಡಬಹುದು.ರಾಜ್ಯಪಾಲರ ಸೂಚನೆ ಮೀರಿ ವರ್ತಿಸಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಬಹುದು. ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆ ಆಗಲು ರಾಜ್ಯಪಾಲರು ಸರ್ಕಾರದ ವಜಾಕ್ಕೆ ಶಿಫಾರಸು ಮಾಡಬಹುದು.

ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಿದರೆ, ಮುಂದೆ ಸೂಕ್ತ ಕಾಲದಲ್ಲಿ ಅದನ್ನು ತೆರವು ಮಾಡಬಹುದು. ಅತ್ಯಂತ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಬಹುದು.ಒಟ್ಟಾರೆ, ಈ ಎಲ್ಲ ಬೆಳವಣಿಗೆಗಳಿಂದ ಇಂದು ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಯಾಗಲಿದೆಯೇ? ಎಂಬುದನ್ನು ಕಾದು ನೋಡಬೇಕು.

Intro:ಬೆಂಗಳೂರು : ಇಂದು ಮಧ್ಯಾಹ್ನ 1.30 ರ ಒಳಗೆ ವಿಶ್ವಾಸಮತ ಯಾಚಿಸಬೇಕೆಂದು ರಾಜ್ಯಪಾಲರು, ಸಿಎಂ ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಮೈತ್ರಿ ನಾಯಕರು ಬಹುಮತ ಸಾಬೀತಿನಲ್ಲಿ ತಂತ್ರಗಾರಿಕೆ ಬಳಸುತ್ತಾರೆಯೇ?
ಎಂಬ ಕುತೂಹಲ ಮೂಡಿಸಿದೆ.Body:ಇಂದಿನ ಸದನದ ಕಲಾಪ ರೋಚಕ ತಿರುವು ಪಡೆದುಕೊಳ್ಳಲಿದೆ.
ದೋಸ್ತಿ ನಾಯಕರ ಮುಂದಿರುವ ಪ್ರಶ್ನೆಗಳೇನು? : ರಾಜ್ಯಪಾಲರ ಸೂಚನೆಯ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅದನ್ನು ಪ್ರಶ್ನಿಸಬಹುದು. ಬಹುಮತ ಸಾಬೀತಿಗೆ ನಾವೇ ಮುಂದಾಗಿದ್ದು ಚರ್ಚೆಗೆ ಅವಕಾಶ ಬೇಕು. ಇಂದೇ ಬಹುಮತ ಸಾಬೀತು ಮಾಡೋ ಬದಲು ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಬಹುದು. ವಿಪ್ ಗೊಂದಲದ ಬಗ್ಗೆ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಆ ಗೊಂದಲ ಪರಿಹಾರದವರೆಗೆ ಬಹುಮತ ಸಾಬೀತಿಗೆ ತಡೆ ನೀಡುವಂತೆ ಮನವಿ ಮಾಡಬಹುದು.
ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಪ್ರಕ್ರಿಯೆ ಮುಗಿಯುವವರೆಗೆ ಬಹುಮತ ಸಾಬೀತಿಗೆ ತಡೆಕೋರಬಹುದು. ರಾಜ್ಯಪಾಲರು ಅನಗತ್ಯ ಮಧ್ಯ ಪ್ರವೇಶ ಮಾಡಿದ್ದಾರೆ ಎಂದು ಪ್ರತಿಭಟಿಸಬಹುದು. ರಾಜ್ಯಪಾಲರ ವರ್ತನೆ ಖಂಡಿಸಿ ರಾಜಕೀಯ ಒತ್ತಡ ಹೆಚ್ಚುವಂತೆ ಮಾಡಬಹುದು.
ರಾಜ್ಯಪಾಲರ ಸೂಚನೆ ಮೀರಿ ವರ್ತಿಸಿದರೆ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಬಹುದು. ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆ ಆಗಲು ರಾಜ್ಯಪಾಲರು ಸರ್ಕಾರದ ವಜಾಕ್ಕೆ ಶಿಫಾರಸ್ಸು ಮಾಡಬಹುದು.
ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಿದರೆ, ಮುಂದೆ ಸೂಕ್ತ ಕಾಲದಲ್ಲಿ ಅದನ್ನು ತೆರವು ಮಾಡಬಹುದು. ಅತ್ಯಂತ ದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡಬಹುದು.
ಒಟ್ಟಾರೆ, ಈ ಎಲ್ಲ ಬೆಳವಣಿಗೆಗಳಿಂದ ಇಂದು ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಯಾಗಲಿದೆಯೇ? ಎಂಬುದನ್ನು ಕಾದು ನೋಡಬೇಕು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.