ETV Bharat / state

ಪಕ್ಷಾಂತರ ವಿಚಾರದಲ್ಲಿ ಟೆಲಿಫೋನ್​ ಕದ್ದಾಲಿಕೆ ತಪ್ಪಲ್ಲ: ಸುಪ್ರೀಂ ಹೀಗಂದಿತ್ತು ಅಂದ್ರು ದೊಡ್ಡ ಗೌಡರು - former prime minister deve gowda

ರಾಜ್ಯದಲ್ಲಿ ನೆರೆ ಬಂದು ಸಂಕಷ್ಟದಲ್ಲಿರುವಾಗ ಇದರ ಕುರಿತು ಆಲೋಚಿಸುವ ಬದಲು ಕದ್ದಾಲಿಕೆ ಪ್ರಕರಣವನ್ನು ಮಾಧ್ಯಮಗಳಲ್ಲಿ ಇಷ್ಟೊಂದು ವಿಜೃಂಭಿಸುವ ಅಗತ್ಯವಿಲ್ಲ. ಸುಪ್ರೀಂಕೋರ್ಟ್ ಪಕ್ಷಾಂತರ ವಿಚಾರದಲ್ಲಿ ಟೆಲಿಫೋನ್‍ ಟ್ಯಾಪ್ ಮಾಡುವುದು ತಪ್ಪಲ್ಲ ಎಂದು ಪ್ರಕರಣವೊಂದರಲ್ಲಿ ಹೇಳಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಕುರಿತು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇನು
author img

By

Published : Aug 19, 2019, 7:00 PM IST

ಬೆಂಗಳೂರು: ರಾಜ್ಯದಲ್ಲಿ ನೆರೆ ಬಂದು ಸಂಕಷ್ಟದಲ್ಲಿರುವಾಗ ಇದರ ಕುರಿತು ಆಲೋಚಿಸುವ ಬದಲು ಕದ್ದಾಲಿಕೆ ಪ್ರಕರಣವನ್ನು ಮಾಧ್ಯಮಗಳಲ್ಲಿ ಇಷ್ಟೊಂದು ವಿಜೃಂಭಿಸುವ ಅಗತ್ಯವಿಲ್ಲ. ಪಕ್ಷಾಂತರ ವಿಚಾರದಲ್ಲಿ ಟೆಲಿಫೋನ್‍ ಟ್ಯಾಪ್ ಮಾಡುವುದು ತಪ್ಪಲ್ಲ ಎಂದು ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ಹೇಳಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದೆ ಎಂದು ಬಿಂಬಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಇಂತಹ ವಿಚಾರಗಳಿಗೆ ಒತ್ತುಕೊಡುವುದಿಲ್ಲ. ಕುಮಾರಸ್ವಾಮಿ ಅವರು ಸಿಕ್ಕಿಕೊಂಡಿದ್ದಾರೆ ಅಂತೆಲ್ಲ ಹೇಳುತ್ತಿದ್ದಾರೆ. ಇದನ್ನೆಲ್ಲ ಮಾಧ್ಯಮಗಳಲ್ಲಿ ವಿಜೃಂಭಿಸುವುದು ಅಗತ್ಯವಿಲ್ಲ ಎಂಬುದು ನನ್ನ ಭಾವನೆ ಎಂದು ಅಭಿಪ್ರಾಯಪಟ್ಟರು.

ಟೆಲಿಫೋನ್ ಕದ್ದಾಲಿಕೆ ಪ್ರಕರಣದ ಕುರಿತು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದೇನು

ರಾಮಕೃಷ್ಣ ಹೆಗಡೆ ಕಾಲದಿಂದ ಹಿಡಿದು, ಈಗಿನ ಮುಖ್ಯಮಂತ್ರಿಯವರೆಗೂ ಗುಪ್ತಚರ ಇಲಾಖೆ ಯಾರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದೆ ಎಂಬುದನ್ನು ನಾನು ಗಮನಿಸಿದ್ದೇನೆ, ಇದರ ಕೆಲಸವೇ ಸರ್ಕಾರದ ಮತ್ತು ಜನತೆಯ ಭದ್ರತೆ ಬಗ್ಗೆ ಮಾಹಿತಿ ನೀಡುವುದು. ನಮಗೆ ಬೇಡ ಎನ್ನುವ ವಿಷಯವೂ ಮುಟ್ಟಿಸುತ್ತಾರೆ. ಅದನ್ನು ತೆಗೆದುಕೊಳ್ಳುವುದು ಬಿಡುವುದು ಅಧಿಕಾರದಲ್ಲಿದ್ದವರಿಗೆ ಸೇರಿದ ವಿಚಾರ. ಪ್ರತಿಯೊಂದು ನಾನು ಹೇಳಬಲ್ಲೆ, ಯಾರೇ ಮುಖ್ಯಮಂತ್ರಿ, ಪ್ರಧಾನಿಯಾದರೂ, ಮಾಹಿತಿ ನೀಡೇ ನೀಡುತ್ತೆ. ನನಗೆ ರಾಜ್ಯ ಮತ್ತು ಕೇಂದ್ರದ ಮಟ್ಟದಲ್ಲೂ ಇದರ ಕಾರ್ಯವೈಖರಿ ಯನ್ನು ಸಂಪೂರ್ಣವಾಗಿ ತಿಳಿದಿದ್ದೇನೆ ಎಂದಿದ್ದಾರೆ.

ನೆರೆ ಸಂತ್ರಸ್ಥರಿಗೆ ನನ್ನ ವೈಯಕ್ತಿಕವಾಗಿ ಮತ್ತು ಪಕ್ಷದಿಂದ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ಕೊಡಿಸಲು ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕಾರ್ಯಕರ್ತರು ಸಂಗ್ರಹಿಸಿದ ದವಸ ಧಾನ್ಯಗಳನ್ನು ನಿಖಿಲ್‍ಕುಮಾರಸ್ವಾಮಿಯವರೇ ಖುದ್ದಾಗಿ ಹಂಚಿದ್ದಾರೆ. ಇನ್ನು ಒಂದೆರಡು ಲಾರಿ ಸಾಮಾನುಗಳನ್ನು ಕಳುಹಿಸಿಕೊಡಲು ಗಮನ ಹರಿಸುತ್ತೇನೆ ಎಂದು ಹೇಳಿದರು.

Intro:Body:

h d deVEGOWDA 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.