ಬೆಂಗಳೂರು : ಹೀರೋಯಿನ್ ಮಾಡ್ತೀನಿ ಒಪ್ಪಿಕೋ ಎಂದು ಯುವತಿಗೆ ಟಾರ್ಚರ್ ನೀಡಿದ್ದ ಆರೋಪದಡಿ ವೆಬ್ ಸೀರಿಸ್ ಡೈರೆಕ್ಟರ್ನೋರ್ವನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಕೂಡ್ಲು ಗೇಟ್ ನಿವಾಸಿ ಮನೀಶ್ ರೆಡ್ದಿ ಬಂಧಿತ ಆರೋಪಿ. ಹೊಸದಾಗಿ ವೆಬ್ ಸೀರಿಸ್ ಚಿತ್ರೀಕರಿಸಲು ಮುಂದಾಗಿದ್ದ ಮನೀಶ್ ರೆಡ್ಡಿ, ತನ್ನ ವೆಬ್ ಸೀರಿಸ್ಗೆ ನಾಯಕಿಯ ಹುಡುಕಾಟದಲ್ಲಿದ್ದ. ತನ್ನ ಏರಿಯಾದ 18 ವರ್ಷದ ಯುವತಿಗೆ ಹೀರೋಯಿನ್ ಆಗುವಂತೆ ಆಫರ್ ಮಾಡಿದ್ದ. ಈ ಆಫರ್ ಅನ್ನು ಯುವತಿ ನಿರಾಕರಿಸಿದ್ದಳು.
ಆದರೆ, ಈತ ತನ್ನ ಕಾರಿನಲ್ಲಿ ಯುವತಿಯನ್ನ ಹಿಂಬಾಲಿಸಿ ಒಪ್ಪಿಕೊಳ್ಳುವಂತೆ ಟಾರ್ಚರ್ ಮಾಡುತ್ತಿದ್ದನಂತೆ. ಇದರಿಂದ ನೊಂದ ಯುವತಿ ದೂರು ನೀಡಿದ್ದಳು. ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಿರ್ದೇಶಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮೂವರು ಹಂದಿ ಕಳ್ಳರ ಬಂಧನ : ಹಳೇಹುಬ್ಬಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ