ಬೆಂಗಳೂರು: ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್, ಯಶವಂತಪುರ ಕ್ಷೇತ್ರದ ಅಭ್ಯರ್ಥಿಯನ್ನು ಪಕ್ಷದ ಮುಖಂಡರು ಆದಷ್ಟು ಬೇಗ ಅಂತಿಮಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉಪ ಚುನಾವಣೆಗೆ ಯಶವಂತಪುರ ಕ್ಷೇತ್ರಕ್ಕೆ ಟಿಕೆಟ್ ಫೈನಲ್ ಆಗಿಲ್ಲ. ಪಕ್ಷದ ಅಧ್ಯಕ್ಷರು ನಮ್ಮ ಪಕ್ಷದ ನಾಯಕರು ಎಲ್ಲ ತೀರ್ಮಾನ ಮಾಡಿದ್ದಾರೆ. ಕೆಲವು ಮೀಟಿಂಗ್ಗೆ ನಾನು ಹೋಗಲು ಆಗಲಿಲ್ಲ. ನನ್ನದೇ ಕಾರಣದಿಂದ ಹೋಗಿಲ್ಲ. ಕಾಂಗ್ರೆಸ್ ಪಾರ್ಟಿ ಗೆಲ್ಲಬೇಕು ಅಷ್ಟೆ ಎಂದರು.
ನನ್ನ ಪರಿಸ್ಥಿತಿ ಪಕ್ಷಕ್ಕೆ ಗೊತ್ತಿದೆ:
ಉಪ ಚುನಾವಣೆಗೆ ಉಸ್ತುವಾರಿ ವಹಿಸಿಕೊಳ್ಳದೆ ಸೈಲೆಂಟ್ ಆದ ವಿಚಾರದ ಬಗ್ಗೆ ಮಾತನಾಡಿ, ಮಾಧ್ಯಮಗಳು ಸೈಲೆಂಟ್ ಆದ್ರೆ ನಾನು ಸೈಲೆಂಟ್ ಆಗಿರುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಪಾರ್ಟಿ ಏನ್ ಹೇಳುತ್ತೋ ನಾನು ಅದನ್ನ ಮಾಡ್ತೀನಿ. ಕಾಂಗ್ರೆಸ್ ನಾಯಕರಿಗೂ ನನ್ನ ಪರಿಸ್ಥಿತಿ ಗೊತ್ತಿದೆ. ಹಾಗಾಗಿ ಅವ್ರು ಎಲ್ಲ ಮಾಡ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತನಾಗಿ ಎಷ್ಟು ಸಾಧ್ಯವೋ ಅಷ್ಟು ಶಕ್ತಿ ಮೀರಿ ಪ್ರಯತ್ನ ಮಾಡ್ತೀನಿ. ನನ್ನ ಪರಿಸ್ಥಿತಿಗೆ ಅನುಗುಣವಾಗಿ ನಾನು ಕೆಲಸ ಮಾಡ್ತೀನಿ ಎಂದು ವಿವರಿಸಿದರು.
ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಣೆ:
ಬೆಳಗಾವಿ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪ ಮಾಡಿದ್ರು ಅನ್ನೊ ರಮೇಶ್ ಜಾರಕಿಹೋಳಿ ಆರೋಪ ಕುರಿತು ಪ್ರತಿಕ್ರಿಯಿಸಿಲು ಡಿಕೆ ಶಿವಕುಮಾರ್ ನಿರಾಕರಿಸಿದರು. ಅವರೆಲ್ಲ ದೊಡ್ಡವರು, ಅವ್ರ ಸುದ್ದಿ ನನಗೆ ಬೇಡ. ಅವರೆಲ್ಲ ದೊಡ್ಡ ಜನ ಎಂದಷ್ಟೇ ಹೇಳಿದರು.