ಬೆಂಗಳೂರು: ತನ್ವೀರ್ ಸೇಠ್ ಮೇಲಿನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್ ಅಶೋಕ್, ತನ್ವೀರ್ ಸೇಠ್ ಅಟ್ಯಾಕ್ ಹಿಂದೆ ಎಸ್ಡಿಪಿಐ ಸಂಘಟನೆ ಕೈವಾಡದ ಶಂಕೆ ವ್ಯಕ್ತಪಡಿಸಿದರು.
ತನ್ವೀರ್ ಸೇಠ್ ಮೇಲೆ ಹಲ್ಲೆಯಲ್ಲ, ಹತ್ಯೆ ಯತ್ನವೇ ನಡೆದಿದೆ. ಹೀಗಾಗಿ ಎಸ್ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವೇ ಇದೆ. ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇವೆ. ಬ್ಯಾನ್ ಮಾಡೋಕೆ ಶಿಫಾರಸು ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಕೂಡ ಪಕ್ಷಾಂತರಿ:
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಕ್ಷಾಂತರಿ ಎಂದು ಕಿಡಿಕಾರಿದ ಆರ್.ಅಶೋಕ್, ಅವರು, ಜೆಡಿಎಸ್ ಪಕ್ಷ ಬದಲಾಯಿಸಿ ಬಂದವರು. ಅನರ್ಹರನ್ನ ಟೀಕೆ ಮಾಡುವ ಮುನ್ನ ನಿಮ್ಮದು ನೋಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.