ETV Bharat / state

ಹಿಜಾಬ್ ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್​ಗೆ ಹೋಗ್ತೇವೆ: ಅರ್ಜಿದಾರರ ಪರ ವಕೀಲರ ಹೇಳಿಕೆ

author img

By

Published : Mar 15, 2022, 1:35 PM IST

Updated : Mar 15, 2022, 2:19 PM IST

ಹಿಜಾಬ್ ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್​ಗೆ ಹೋಗ್ತೇವೆ ಎಂದು ಅರ್ಜಿದಾರರ ವಕೀಲ ಸಿರಾಜುದ್ದೀನ್ ಪಾಷಾ ಹೇಳಿದ್ದಾರೆ.

Hijab row in Supreme Court, Hijab verdict challenge in Supreme court, Hijab verdict news, Lawyer Sirajuddin Pasha news, ಸುಪ್ರೀಕೋರ್ಟ್​ ಅಂಗಳಕ್ಕೆ ಹಿಜಾಬ್​ ವಿವಾದ, ಹಿಜಾಬ್​ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ, ಹಿಜಾಬ್​ ತೀರ್ಪು ಸುದ್ದಿ, ವಕೀಲ ಸಿರಾಜುದ್ದೀನ್​ ಪಾಷಾ ಸುದ್ದಿ,
ಅರ್ಜಿದಾರರ ವಕೀಲ ಸಿರಾಜುದ್ದೀನ್ ಪಾಷಾ ಹೇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹಿಜಾಬ್​ ವಿವಾದದ ಬಗ್ಗೆ ಹೈಕೋರ್ಟ್​​ನ ಮಹತ್ವದ ತೀರ್ಪು ಹೊರಬಿದ್ದಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಉಚ್ಛ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಬೆನ್ನಲೇ ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್​ಗೆ ಹೋಗುವುದಾಗಿ ಅರ್ಜಿದಾರರ ಪರ ವಕೀಲ‌ ಸಿರಾಜುದ್ದೀನ್ ಪಾಷಾ ತಿಳಿಸಿದ್ದಾರೆ.

ಓದಿ: ಪಾಕ್​ ನೆಲದಲ್ಲಿ ಭಾರತದ ಕ್ಷಿಪಣಿ: ರಾಜ್ಯಸಭೆಗೆ ಸಚಿವ ರಾಜನಾಥ್​ ಸಿಂಗ್ ನೀಡಿದ ವಿವರಣೆ ಏನು? ​

ಹಿಜಾಬ್ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪನ್ನ ಗೌರವಿಸುತ್ತೇವೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಅಲ್ಲ ಎಂದು ಎಲ್ಲಿಯೂ ಹೇಳಿಲ್ಲ.‌ ಶಾಲೆ ಹಾಗೂ ಪದವಿ ತರಗತಿಯೊಳಗೆ ಹಿಜಾಬ್ ಧರಿಸಕೂಡದು ಎಂದು ಮಾತ್ರ ಹೇಳಿದೆ. ಶಾಲೆ‌ ಹಾಗೂ ಕಾಲೇಜಿನ ಕ್ಯಾಂಪಸ್ ಒಳಗೆ ಧರಿಸಬಹುದಾಗಿದೆ. ತೀರ್ಪು ಪ್ರಶ್ನಿಸಿ ಇನ್ನೆರಡು ದಿನಗಳಲ್ಲಿ ಸುಪ್ರೀಂಕೋರ್ಟ್​ಗೆ ರಿಟ್ ಸಲ್ಲಿಸುತ್ತೇವೆ‌ ಎಂದು ಮಾಹಿತಿ ನೀಡಿದರು.

ಓದಿ: ಮಕ್ಕಳಿಗೆ ಶಿಕ್ಷಣಕ್ಕಿಂತ ಮುಖ್ಯ ಯಾವುದೂ ಇಲ್ಲ: 'ಹಿಜಾಬ್'​ ತೀರ್ಪಿನ ಬಗ್ಗೆ ಸಿಎಂ ಪ್ರತಿಕ್ರಿಯೆ

ತರಗತಿಗೆ ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಉಡುಪಿಯ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಇತರ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಅರ್ಜಿಗಳನ್ನು ತ್ರಿಸದಸ್ಯ ಪೀಠ ವಜಾ ಮಾಡಿ ಆದೇಶ ಮಾಡಿದೆ. 11 ದಿನಗಳ ವಿಚಾರಣೆ ಬಳಿಕ ಫೆಬ್ರವರಿ 25ರಂದು ಹೈಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ಕಾಯ್ದಿರಿಸಿತ್ತು. ಮುಖ್ಯ ನ್ಯಾ. ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ.ಜೆಎಂ ಖಾಜಿ ಅವರಿದ್ದ ಪೂರ್ಣ ಪೀಠ ಈ ತೀರ್ಪು ಪ್ರಕಟಿಸಿದೆ.

Last Updated : Mar 15, 2022, 2:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.